ಕೊಪ್ಪಳ ವಿವಿ : ಸಂಯೋಜನಾ ಅರ್ಜಿ ಸಲ್ಲಿಕೆ ಆರಂಭ
ಕೊಪ್ಪಳ, 27 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳ ವಿಶ್ವವಿದ್ಯಾಲಯದಿಂದ 2026-27ನೇ ಸಾಲಿಗೆ ಯುಯುಸಿಎಂಎಸ್ (https://uucms.karnataka.gov.in/) ತಂತ್ರಾಂಶದ ಮುಖಾಂತರ ಸರಕಾರದ ನಿಯಮಗಳನ್ವಯ ನೋಂದಾಯಿತ ಸಂಘ, ಸಂಸ್ಥೆ ಸಾರ್ವಜನಿಕ ಟ್ರಸ್ಟ್ಗಳಿಂದ ಹೊಸದಾಗಿ ಸಂಯೋಜನಾ ಅರ್ಜಿಗಳನ್ನು ಆಹ್ವಾ
ಕೊಪ್ಪಳ ವಿವಿ : ಸಂಯೋಜನಾ ಅರ್ಜಿ ಸಲ್ಲಿಕೆ ಆರಂಭ


ಕೊಪ್ಪಳ, 27 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ವಿಶ್ವವಿದ್ಯಾಲಯದಿಂದ 2026-27ನೇ ಸಾಲಿಗೆ ಯುಯುಸಿಎಂಎಸ್ (https://uucms.karnataka.gov.in/) ತಂತ್ರಾಂಶದ ಮುಖಾಂತರ ಸರಕಾರದ ನಿಯಮಗಳನ್ವಯ ನೋಂದಾಯಿತ ಸಂಘ, ಸಂಸ್ಥೆ ಸಾರ್ವಜನಿಕ ಟ್ರಸ್ಟ್ಗಳಿಂದ ಹೊಸದಾಗಿ ಸಂಯೋಜನಾ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವಿವಿ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನಿಂದ ಕಲಾ, ವಿಜ್ಞಾನ, ವಾಣಿಜ್ಯ ಶಿಕ್ಷಣ ಮತ್ತು ದೈಹಿಕ ಶಿಕ್ಷಣ ಹಾಗೂ ಇನ್ನಿತರ ಸಾಂಪ್ರದಾಯಿಕ ವಿಷಯಗಳಲ್ಲಿ ಹೊಸ ಪದವಿ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಲು ಇಚ್ಛಿಸುವ ಸರ್ಕಾರದ ನಿಯಮಾವಳಿಯಂತೆ ನೋಂದಾಯಿಸಲ್ಪಟ್ಟ ಸಂಘ- ಸಂಸ್ಥೆಗಳು, ಸಾರ್ವಜನಿಕ ಟ್ರಸ್ಟ್ಗಳಿಂದ ಹೊಸ ಸಂಯೋಜನಾ ಅರ್ಜಿಗಳು ಹಾಗೂ ಪ್ರಸ್ತುತ ಸಂಯೋಜನೆ ಹೊಂದಿರುವ ಮಹಾ ವಿದ್ಯಾಲಯಗಳಿಂದ ಸ್ನಾತಕ, ಸ್ನಾತಕೋತ್ತರ ಕೋರ್ಸಗಳಿಗೆ ಮುಂದುವರಿಕೆ, ವಿಸ್ತರಣೆ, ಹೊಸ ಕೋರ್ಸ್, ಹೊಸ ವಿಷಯ, ಪ್ರವೇಶ ಮಿತಿ ಹೆಚ್ಚಳ, ಶಾಶ್ವತ ಸಂಯೋಜನೆ, ಶಾಶ್ವತ ಸಂಯೋಜನೆ ನವೀಕರಣ, ಮಹಾವಿದ್ಯಾಲಯಗಳ ಹೆಸರು ಬದಲಾವಣೆ, ಮಹಾವಿದ್ಯಾಲಯಗಳ ಸ್ಥಳಾಂತರ, ಆಡಳಿತ ಮಂಡಳಿ ಬದಲಾವಣೆ ಹಾಗೂ ಇತ್ಯಾದಿಗಳಿಗಾಗಿ ಸಂಬAಧಿಸಿದ ದಾಖಲೆಗಳೊಂದಿಗೆ ನಿಗದಿತ ಸಂಯೋಜನಾ ಶುಲ್ಕವನ್ನು ಪಾವತಿಸಿ, ಸರ್ಕಾರದ ಸಂಯೋಜನೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸಂಯೋಜನೆ ಶುಲ್ಕಗಳ ವಿವರ ಹಾಗೂ ಸಂಯೋಜನೆಗೆ ಅರ್ಜಿಗಳನ್ನು ಸಲ್ಲಿಸಲು ಮಾಹಿತಿಯನ್ನು ವಿಶ್ವವಿದ್ಯಾಲಯದ ಜಾಲತಾಣ www.koppaluniversity.ac.in ದಲ್ಲಿ ಪಡೆಯಬಹುದಾಗಿದೆ. ದಂಡ ರಹಿತ ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನವಾಗಿದೆ. ವಿಳಂಬವಾದಲ್ಲಿ ದಂಡ ಸಹಿತ ಅರ್ಜಿ ಸಲ್ಲಿಸಲು ನವೆಂಬರ್ 20 ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿ ಪಡೆದು ಶುಲ್ಕ ಪಾವತಿಸಿದ್ದರ ಬಗ್ಗೆ ರಸೀದಿ ಮತ್ತು ಸಂಪೂರ್ಣ ದಾಖಲೆಗಳೆಲ್ಲವುಗಳನ್ನು ಬೈಂಡಿ0ಗ್ ಅಥವಾ ಸ್ಪೆರಲ್ ಬೈಂಡಿ0ಗ್ ಮಾಡಿಸಿ ಎರಡು ಪ್ರತಿಗಳನ್ನು ಕುಲಸಚಿವರ ಕಚೇರಿ, ಕೊಪ್ಪಳ ವಿಶ್ವವಿದ್ಯಾಲಯ, 3ನೇ ಮಹಡಿ, ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯದ ಆವರಣ, ತಳಕಲ್ -583238 ಇವರಿಗೆ ನವೆಂಬರ್ 20 ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande