
ಬಳ್ಳಾರಿ, 27 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ನಗರದ ಜಿಲ್ಲಾ ವಕ್ಛ್ ಕಚೇರಿಗೆ ದೈನಂದಿನ ಅಧಿಕೃತ ಕೆಲಸಗಳ ನಿರ್ವಹಣೆಗಾಗಿ ಒಂದು ವರ್ಷದ ಅವಧಿಗೆ ಬಾಡಿಗೆ ಆಧಾರದ ಮೇಲೆ ಲಘು ವಾಹನ ಪಡೆಯಲು ದರಪಟ್ಟಿ ಆಹ್ವಾನಿಸಲಾಗಿದೆ.
ಟಾಟಾ ಇಂಡಿಗೋ, ವಿಸ್ಟಾ ಟಾಯೋಟಾ ಇಟಯೋಸ್, ಮಾರುತಿ ಸುಜುಕಿ, ಸ್ವಿಫ್ಟ್ ಡಿಜೈರ್ ಹಾಗೂ ಇತರೆ ವಾಹನ ಒದಗಿಸಲು ಷರತ್ತುಗೊಳಪಡಿಸಿ ದರಪಟ್ಟಿ ಕರೆಯಲಾಗಿದೆ.
ಆಸಕ್ತಿಯುಳ್ಳವರು ನಗರದ ಕೌಲ್ ಬಜಾರ್ ನ 1ನೇ ರೈಲ್ವೇ ಗೇಟ್ ಹತ್ತಿರದ ಜಿಲ್ಲಾ ವಕ್ಛ್ ಕಚೇರಿಯಲ್ಲಿ ದರಪಟ್ಟಿ ನಮೂನೆ ಪಡೆದು ದರ ನಮೂದಿಸಿ ಸೀಲುಮಾಡಿದ ಲಕೋಟೆಯನ್ನು ಅ.29 ರೊಳಗಾಗಿ ಇದೇ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾ ವಕ್ಛ್ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್