
ಕೋಲಾರ, ೨೬ ಅಕ್ಟೋಬರ್ (ಹಿ.ಸ) :
ಆ್ಯಂಕರ್ : ನಗರಸಭೆ ವ್ಯಾಪ್ತಿಯ ವರ‍್ಡ್ ನಂ.೧೬ ರ ಸುಲ್ತಾನ್ ತಿಪ್ಪಸಂದ್ರ ಬಡಾವಣೆಯ ಅಭಿವೃದ್ಧಿ ಕುಂಠಿತವಾಗಿದ್ದು, ಇಲ್ಲಿನ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಆಗ್ರಹಿಸಿ ವರ‍್ಡ್ ವ್ಯಾಪ್ತಿಯ ವ್ಯಾಪ್ತಿಯ ನಾಗರಿಕರು ಭಾನುವಾರ ಪ್ರತಿಭಟನೆ ನಡೆಸಿದರು.
ನಾಗರೀಕ ಖಲೀಲ್ ಸಾಭ್ ಮಾತನಾಡಿ ಈ ವರ‍್ಡ್ ನಲ್ಲಿ ಆನೇಕ ಸಮಸ್ಯೆಗಳಿಂದ ತುಂಬಿವೆ. ಇಲ್ಲಿನ ನಿವಾಸಿಗಳಿಗೆ ಕನಿಷ್ಠ ಮೂಲಸೌರ‍್ಯಗಳಿಂದ ವಂಚಿತರಾಗಿದ್ದಾರೆ ಆಶ್ರಯ ಯೋಜನೆಯು ಇಲ್ಲಿ ಕರ‍್ಯಗತವಾಗಿಲ್ಲ ನಗರಸಭೆಗೆ, ಜಿಲ್ಲಾಧಿಕಾರಿಗೆ, ಜಿಲ್ಲಾ ಪಂಚಾಯತಿ ಸಿಇಒಗೆ, ಕುಡಾ ಅಧ್ಯಕ್ಷರಿಗೆ, ತಹಶಿಲ್ದಾರ್, ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಅಭಿವೃದ್ಧಿಯಾಗಿಲ್ಲ ಒಂದು ವಾರದಲ್ಲಿ ಅಭಿವೃದ್ಧಿಗೆ ಆಧ್ಯತೆ ನೀಡದೆ ಹೋದರೆ ನಗರಸಭೆ ಮುಂದೆ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾಗರೀಕ ಸಾದೀಖ್ ಮಾತನಾಡಿ ಈ ವರ‍್ಡ್ ನಗರಸಭೆ ಸದಸ್ಯ ಫೈರೋಜ್ ಖಾನ್ ಕೇವಲ ಮಹಾಲಕ್ಷ್ಮಿ ಬಡಾವಣೆಗೆ ಮಾತ್ರ ಸೀಮಿತವಾಗಿದ್ದು ಸುಲ್ತಾನ್ ತಿಪ್ಪಸಂದ್ರ ನಾಗರೀಕರನ್ನು ನರ‍್ಲಕ್ಷ್ಯ ತೋರಿದ್ದಾರೆ ಸರಿಯಾದ ರಸ್ತೆ, ಚರಂಡಿ, ಕುಡಿಯುವ ನೀರು ಇಲ್ಲ ಕೂಡಲೇ ಬೀದಿದೀಪ, ಯುಜಿಡಿ ಕಾಮಗಾರಿ ಪ್ರಾರಂಭಿಸಬೇಕು. ಚರಂಡಿಗಳನ್ನು ಸ್ವಚ್ಛ ಮಾಡಬೇಕು. ಗುಂಡಿ ಬಿದ್ದಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು. ಸೂಕ್ತ ಕುಡಿಯುವ ನೀರಿನ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ವರ‍್ಡ್ ನಾಗರಿಕರಾದ ಅಜಾಂ, ಸಾದೀಕ್ ಪಾಷ, ಅಸೀನಾ_ನಗೀನಾ, ಸಲಾಂ, ಆರೀಫ್, ಅವೇಜ್,ಅಬ್ದುಲ್ ಖಾದರ್, ಸೈಯದ್ ಇಮ್ರಾನ್ ಮುಂತಾದವರು ಇದ್ದರು.
ಚಿತ್ರ : ಕೋಲಾರ ನಗರದ ಸುಲ್ತಾನ್ ತಿಪ್ಪಸಂದ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಒತ್ತಾಯಿಸಿ ನಾಗರಿಕರು ಪ್ರತಿಭಟನೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್