
ಗದಗ, 26 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸಿಕ್ಕಾಪಟ್ಟೆ ಹಾಗೂ ಅಕಾಲಿಕ ಮಳೆಯಾಗಿ ಎಲ್ಲವನ್ನೂ ಕಳೆದುಕೊಂಡಿರುವ ರೈತ ನೆರವಿಗಾಗಿ ರಾಜ್ಯ ಸರಕಾರ ಕಡೆ ನೋಡುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರಕಾರ ಮತ್ತು ಅದರ ಮಂತ್ರಿಗಳು ಬೇಡವಾದ ವಿಷಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮುಂಗಾರಿನ ಬೆಳೆಗಳು ನಾಶವಾಗಿದ್ದು, ಯಾವ ರೈತರಿಗೂ ಇದುವರೆಗೂ ಬಿಡಿಗಾಸಿನ ನೆರವು ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಬೇಡವಾದ ವಿವಾದಗಳಲ್ಲಿ ತೊಡಗಿಕೊಂಡು ಜನರ ಹಾಗೂ ರೈತರ ಸಮಸ್ಯೆಗಳನ್ನು ಆಲಿಸುವುದನ್ನು ಬಿಟ್ಟಿರುವುದು ರಾಜ್ಯದ ಜನರ ಹಾಗೂ ರೈತರ ಪಾಲಿಗೆ ಇದು ಸತ್ತಿರುವ ಸರಕಾರ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತರ ವೆಂಕನಗೌಡ ಆರ್ ಗೋವಿಂದಗೌಡ್ರ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.
ಎಲ್ಲವನ್ನು ಕಳೆದುಕೊಂಡು ಹತಾಶೆಯಲ್ಲಿರುವ ರೈತ ಸಮುದಾಯದ ನೆರವಿಗೆ ಭಾರದ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಪಾಲಿಗಂತೂ ಸತ್ತು ಹೋಗಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ. ಅಧಿಕಾರ ಹಂಚಿಕೆ, ಮಂತ್ರಿಮಂಡಲ ವಿಸ್ತರಣೆ, ಆರ್‌ಎಸ್‌ಎಸ್ ನಿಷೇಧದಂತಹ ಬೇಡವಾದ ವಿಷಯಗಳಲ್ಲಿ ತೊಡಗಿಕೊಂಡು ರಾಜ್ಯದ ಜನರ ಸಮಸ್ಯೆಗಳನ್ನು ಆಲಿಸದೆ ಕೇವಲ ಕಾಲಹರಣ ಮಾಡುತ್ತಿರುವುದು ಇದು ಜನ ವಿರೋಧಿ ಹಾಗೂ ರೈತ ವಿರೋಧಿ ಸರ್ಕಾರವಾಗಿದೆ ಎಂದು ವೆಂಕಟನಗೌಡ ಆರ್ ಗೋವಿಂದಗೌಡ್ರ ರಾಜ್ಯ ಸರ್ಕಾರದ ಈ ಆಲಸ್ಯತನವನ್ನು ಖಂಡಿಸಿದ್ದಾರೆ.
ರೈತ ಸಮುದಾಯ ಅತ್ಯಂತ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ರಾಜ್ಯ ಸರ್ಕಾರಕ್ಕೆ ಕಾಣದಿರುವುದು ಬಹುದೊಡ್ಡ ದುರಂತದ ಸಂಗತಿ ಎಂದು ಅವರು ಬಣ್ಣಿಸಿದ್ದಾರೆ. ತಕ್ಷಣ ರೈತರ ನೆರವಿಗೆ ಧಾವಿಸಬೇಕಾದ ಸರಕಾರ ಕೇವಲ ವಿರೋಧ ಪಕ್ಷಗಳನ್ನು ಟೀಕಿಸುವುದರಲ್ಲಿ ಕಾಲಹರಣ ಮಾಡುತ್ತಿದ್ದು, ರೈತರಿಗೆ ಏನಾದರೂ ಅನಾಹುತವಾದರೆ ಇದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ನೇರ ಹೊಣೆ ಆಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ರೈತರ ಸಾಲ ಮನ್ನಾ ಆಗಬೇಕು ಹಾಗೂ ಸಾಲ ವಸುಲಾತಿಯನ್ನು ತಕ್ಷಣ ತಡೆಹಿಡಿಯಬೇಕೆಂದು ಬಸವರಾಜ ಅಪ್ಪಣ್ಣವರ, ಪ್ರಫುಲ್ ಪುಣೆಕರ, ಜೋಸೆಫ್ ಉದೋಜಿ, ಜಿ.ಕೆ ಕೊಳ್ಳಿಮಠ, ಸಿದ್ದಲಿಂಗಯ್ಯ ಹೊಂಬಾಳಿಮಠ, ವೆಂಕಟೇಶ್ ಪಾಟೀಲ, ವಿನಾಯಕ್ ಮಾವಿನಕಾಯಿ, ಮಂಜುಳಾ ಮೇಟಿ, ಲಲಿತಾ ಹಿರೇಕಲ್ಲಪ್ಪನವರ, ಅಭಿಷೇಕ್ ದೇಸಾಯಿ, ಅಭಿಷೇಕ್ ಕಂಬಳಿ, ಜಯರಾಜ್ ವಾಲಿ ಹಾಗೂ ಜೆಡಿಎಸ್ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP