
ಬಳ್ಳಾರಿ, 26 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಡಯಟ್‍ನ ಹಿರಿಯ ಉಪನ್ಯಾಸಕಿ ಎಂ. ಪದ್ಮಾವತಿ ಅವರು ತೀವ್ರ ಅನಾರೋಗ್ಯದಿಂದ ನರಳುತ್ತಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ಮೃತರಿಗೆ ಪತಿ ಮತ್ತು ಮಗಳು ಇದ್ದಾರೆ.
ಬಳ್ಳಾರಿಯ ಶ್ರೀರಾಂಪುರಂ ಕಾಲೋನಿಯಲ್ಲಿ ಮುಖ್ಯ ಗುರುಗಳಾಗಿ 2002 ರಿಂದ 2018ರವರೆಗೆ ಸೇವೆ ಸಲ್ಲಿಸಿ, ಗೋನಾಳು ಪ್ರೌಢ ಶಾಲೆಗೆ ವರ್ಗವಾಗಿ, ಬಳ್ಳಾರಿಯ ಅಂದ್ರಾಳು ಪ್ರೌಢ ಶಾಲೆಯ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ಹಿರಿಯ ಉಪನ್ಯಾಸಕರಾಗಿ ಬಡ್ತಿ ಪಡೆದು ಡಯಟ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ದಕ್ಷತೆ ಮತ್ತು ಬದ್ಧತೆಯಿಂದ ಸೇವೆ ಸಲ್ಲಿಸಿ ಖ್ಯಾತರಾಗಿದ್ದ ಎಂ. ಪದ್ಮಾವತಿ ಅವರು ಆತ್ಮಕ್ಕೆ ಶಾಂತಿ ಕೋರಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಶೋಕ ವ್ಯಕ್ತಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್