ಡಿವೈಎಸ್‌ಪಿಯಾಗಿ ಪದೋನ್ನತಿ, ಸನ್ಮಾನ
ಗದಗ, 26 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪೊಲೀಸ್ ವೃತ್ತಿಯಲ್ಲಿ ಸೇವೆಗೆ ಅವಕಾಶ ದೊರಕಿರುವದು ಮಾಡುವದರಿಂದ ಸಮಾಜ ಭಾಗ್ಯವಾಗಿದ್ದು, ಜನರಿಗೆ ರಕ್ಷಣೆ ನೀಡುವ ಕಾರ್ಯವನ್ನು ನಿಷ್ಠೆಯಿಂದ ನಮ್ಮನ್ನು ಗೌರವಿಸುತ್ತದೆ. ಒಳ್ಳೆಯ ಕಾರ್ಯಗಳು ಎಂದೆಂದಿಗೂ ಜನರಿಗೆ ನೆನಪಿನಲ್ಲಿ ಉಳಿಯುತ್ತವೆ ಎಂದು ಡಿವೈಎಸ್‌ಪಿಯ
ಪೋಟೋ


ಗದಗ, 26 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪೊಲೀಸ್ ವೃತ್ತಿಯಲ್ಲಿ ಸೇವೆಗೆ ಅವಕಾಶ ದೊರಕಿರುವದು ಮಾಡುವದರಿಂದ ಸಮಾಜ ಭಾಗ್ಯವಾಗಿದ್ದು, ಜನರಿಗೆ ರಕ್ಷಣೆ ನೀಡುವ ಕಾರ್ಯವನ್ನು ನಿಷ್ಠೆಯಿಂದ ನಮ್ಮನ್ನು ಗೌರವಿಸುತ್ತದೆ. ಒಳ್ಳೆಯ ಕಾರ್ಯಗಳು ಎಂದೆಂದಿಗೂ ಜನರಿಗೆ ನೆನಪಿನಲ್ಲಿ ಉಳಿಯುತ್ತವೆ ಎಂದು ಡಿವೈಎಸ್‌ಪಿಯಾಗಿ ಪದೋನ್ನತಿ ಹೊಂದಿದ ನಾಗರಾಜ ಮಾಡಳ್ಳಿ ಹೇಳಿದರು.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಸವಣೂರು ರಸ್ತೆಯಲ್ಲಿರುವ ಸಭಾಂಗಣದಲ್ಲಿ ಬಿಸಿಎನ್ ಶಿರಹಟ್ಟಿ ಮತ್ತು ಲಕ್ಷ್ಮೀಶ್ವರ ತಾಲೂಕುಗಳ ಪೊಲೀಸ್ ಇಲಾಖೆ ವತಿಯಿಂದ ನೀಡಲಾದ ಗೌರವವನ್ನು ಸ್ವೀಕರಿಸಿ ಮಾತನಾಡಿದರು.

ಶಿರಹಟ್ಟಿ ಠಾಣಾ ವ್ಯಾಪ್ತಿಯಲ್ಲಿ ಕಳೆದ 2 ವರ್ಷಗಳಿಗೂ ಅಧಿಕ ಕಾಲ ಸಿಪಿಐ ಆಗಿ ಕಾರ್ಯನಿರ್ವಹಿಸಿದ್ದು, ಈ ವೇಳೆಯಲ್ಲಿ ಅನೇಕ ಪ್ರಕರಣಗಳಲ್ಲಿ ಭಾಗಿಯಾದ ಅಪರಾಧಿಗಳನ್ನು ಸೆರೆ ಹಿಡಿದಿರುವದ ಜೊತೆ ಸಾಕಷ್ಟು ಕಳ್ಳ ಮಾಲುಗಳನ್ನು ವಶಪಡಿಸಿಕೊಂಡಿದ್ದು, ಇದು ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದೆ.

ಉತ್ತಮವಾಗಿ ಕಾರ್ಯ ನಿರ್ವಹಿಸುವಲ್ಲಿ ಸಾರ್ವಜನಿಕರು, ಇಲಾಖೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿ ನೀಡಿದ ಸಹಕಾರ ಸದಾ ಸ್ಮರಣೀಯ. ಪದೋನ್ನತಿ ಹೊಂದಿ ಬೇರೆಡೆ ವರ್ಗಾವಣೆಯಾಗುತ್ತಿದ್ದು, ಮುಂದೆ ಬರುವ ಅಧಿಕಾರಿಗಳಿಗೂ ಇದೇ ರೀತಿ ಸಹಾಯ ಸಹಕಾರ ದೊರೆಯಲಿ ಎಂದರು. ಈ ವೇಳೆ ಹಲವರು ಭಾಗಿಯಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande