ಸಚಿವ ಎಂ.ಬಿ. ಪಾಟೀಲ ವಿರುದ್ಧ ಶಾಸಕ ಯತ್ನಾಳ ಕಿಡಿ
ವಿಜಯಪುರ, 26 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕನ್ನೇರಿ ಶ್ರೀಗಳಿಗೆ ವಿಜಯಪುರ ಜಿಲ್ಲಾ ನಿರ್ಬಂಧ ವಿಚಾರದಲ್ಲಿ ಸಿದ್ದೇಶ್ವರ ಶ್ರೀಗಳನ್ನ ತೆಗೆದುಕೊಳ್ಳಬೇಡಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಸಚಿವ ಎಂ. ಬಿ. ಪಾಟೀಲ ಹಿಂದೆ ಇರುವ ಸಲಹೆಗಾರರು ಈ ಹೊ
ಯತ್ನಾಳ


ವಿಜಯಪುರ, 26 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕನ್ನೇರಿ ಶ್ರೀಗಳಿಗೆ ವಿಜಯಪುರ ಜಿಲ್ಲಾ ನಿರ್ಬಂಧ ವಿಚಾರದಲ್ಲಿ ಸಿದ್ದೇಶ್ವರ ಶ್ರೀಗಳನ್ನ ತೆಗೆದುಕೊಳ್ಳಬೇಡಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಸಚಿವ ಎಂ. ಬಿ. ಪಾಟೀಲ ಹಿಂದೆ ಇರುವ ಸಲಹೆಗಾರರು ಈ ಹೊಲಸ ಕೆಲಸ ಮಾಡಬೇಡಿ. ಅಂತಹವರ ಹೆಸರು ತಗೆದುಕೊಳ್ಳಬಾರದು, ಬಹಳ ದೊಡ್ಡವರಾಗುತ್ತಾರೆ. ಎಂ ಬಿ ಪಾಟೀಲರು ಇಂತಹವರ ಮಾತು ಕೇಳಿ ಹೀಗಾಗಿದೆ. ಎಂ ಬಿ ಪಾಟೀಲರ ಹಿಂದೆ ಧರ್ಮ ಒಡೆಯುವವ ಒರ್ವ ಇದ್ದಾನೆ, ಇನ್ನೊಬ್ಬ ಅಕ್ರಮವಾಗಿ ರೈತರ ಲಪಟಾಯಿಸುವವ ಇದ್ದಾನೆ. ಇವರಿಬ್ಬರು ದೊಡ್ಡ ಸಮಸ್ಯೆ ಎಂ ಬಿ ಪಾಟೀಲರಿಗೆ ಇದೆ. ಜಿಲ್ಲೆಯಲ್ಲಿ ಆಗುತ್ತಿರುವ ಭೂ ಹಗರಣಗಳೆಲ್ಲವೂ ಎಂ ಬಿ ಪಾಟೀಲ ಶಿಷ್ಯರಿಂದಲೇ. ಹಿತೈಷಿಯಾಗಿ ಹೇಳುತ್ತಿದ್ದೇನೆ ನೀವು ಜಾಗೃತರಾಗಿ. ಇಲ್ಲವಾದ್ರೇ ನಿಮ್ಮದು ನೀವು ಮಾಡಿ ನಮ್ಮದು ನಾವು ಮಾಡ್ತೆವೆ ಅಂತಾ ಎಚ್ಚರಿಕೆ ನೀಡಿದರು.

ಇನ್ನು ಶಾಂತಿಗೆ ಧಕ್ಕೆ ಆಗುತ್ತೆ ಅಂತಾ ಕನ್ಹೇರಿ ಶ್ರೀಗಳಿಗೆ ನಿರ್ಬಂಧ ಹಾಕಿದ್ದಾಗಿ ಹೇಳಿಕೆ ವಿಚಾರಕ್ಕೆ ಆ ನಿಜಗುಣಾನಂದ ಏನೇನು ಮಾತನಾಡಿದ್ದಾನೆ. ಲಕ್ಷ್ಮಿ ಬಗ್ಗೆ ಏನು ಮಾತನಾಡಿದ್ದಾನೆ, ಹಿಂದೂ ಧರ್ಮದ ಬಗ್ಗೆ ಏನು ಮಾತನಾಡಿದ್ದಾನೆ, ಗೋವುಗಳ ಬಗ್ಗೆ ಏನು ಮಾತನಾಡಿದ್ದಾನೆ. ನಮ್ಮ ವೀರಭದ್ರದನ ಬಗ್ಗೆ ಇಳಕಲ್ ಸ್ವಾಮಿ ಏನು ಮಾತನಾಡಿದ್ದಾನೆ. ಅವ ಸನಾತನ ಧರ್ಮದ ಬಗ್ಗೆ ಏನು ಮಾತನಾಡಿದ್ದಾನೆ. ಮೊದಲು ಇವರಿಂದ ಅಶಾಂತಿ ಉಂಟಾಗುತ್ತೆ, ಇವರನ್ನ ಒಳಗಡೆ ಹಾಕಬೇಕು. ಇವರೆಲ್ಲ ಯಡ್ಡಿಯೂರಪ್ಪನ ಗುರುಗಳು ಇವರು. ಇದರಲ್ಲೂ ಯಡ್ಡಿಯೂರಪ್ಪನ ನಾಟಕ ಇದೆ. ಇಲ್ಲಿ ಪಂಚಪೀಠಗಳಿಗೆ ಹೋಗಿ ಕಾಲು ಬೀಳುವುದು. ಅಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಆಗಲಿ ಅಂತಾ ಸಹಿ ಮಾಡೊದು. ಎಂ. ಬಿ. ಪಾಟೀಲರಿಗೆ ಕೇಳಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಹಿ ಮಾಡಿಲ್ವಾ. ಯಡ್ಡಿಯೂರಪ್ಪನ ತೆಗೆದುಕೊಂಡು ಹೋರಾಟ ಮಾಡಿ, ವಿಜಯೇಂದ್ರ ತೆಗೆದುಕೊಂಡು ಹೋರಾಟ ಮಾಡಿ. ನಾವು ಹಿಂದೂಗಳಾದ್ರೂ ಬಿಜೆಪಿಯಲ್ಲಿ ಉಳಿಯುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande