ಕಾಂಗ್ರೆಸ್ ಸರ್ಕಾರದ ವಿರುದ್ಧ ಈಶ್ವರಪ್ಪ ಕಿಡಿ
ವಿಜಯಪುರ, 26 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಜ್ಯ ಸರ್ಕಾರ ಹಿಂದೂ ಸಮಾಜವನ್ನು, ವೀರಶೈವ ಲಿಂಗಾಯತ ಸಮಾಜಗಳಿಗೆ ತೊಂದರೆ ಕೊಡುತ್ತಿದೆ. ವೀರೈಶವ ಲಿಂಗಾಯತ ಸಮಾಜಗಳನ್ನು ತುಂಡು ತುಂಡು ಮಾಡುತ್ತಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆರೋಪಿಸಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲ
ಸಿಎಂ


ವಿಜಯಪುರ, 26 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರ ಹಿಂದೂ ಸಮಾಜವನ್ನು, ವೀರಶೈವ ಲಿಂಗಾಯತ ಸಮಾಜಗಳಿಗೆ ತೊಂದರೆ ಕೊಡುತ್ತಿದೆ. ವೀರೈಶವ ಲಿಂಗಾಯತ ಸಮಾಜಗಳನ್ನು ತುಂಡು ತುಂಡು ಮಾಡುತ್ತಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆರೋಪಿಸಿದರು.

ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ಹೇರಿ ಶ್ರೀಗಳನ್ನು ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಬರದಂತೆ ನಿರ್ಬಂಧ ಹಾಕಿದ್ದಾರೆ. ವೀರಶೈವ, ಲಿಂಗಾಯತ, ಹಿಂದೂ ಸಮಾಜಗಳಿಗೆ ನೋವಾಗಿದ್ದು ಇದನ್ನು ಯಾರೂ ಕ್ಷಮಿಸುವುದಿಲ್ಲ. ಕನ್ಹೇರಿ ಶ್ರೀಗಳಿಗೆ ಹಾಕಿದ ನಿರ್ಭಂದದ ಕುರಿತು ಮುಂದೆ ಹೇಗೆ ಹೋರಾಟ ಮಾಡಬೇಕು ಎಂದು ಅ.೨೯ರಂದು ಬೆಳಗ್ಗೆ ೧೧ಕ್ಕೆ ಬೆಳಗಾವಿಯ ವೆಲಕಮ್ ಹೊಟೇಲ್ ನಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಹಿಂದೂ, ಲಿಂಗಾಯತ, ವೀರಶೈವ ಮುಖಂಡರು ಭಾಗವಹಿಸಲಿದ್ದಾರೆ. ಚಕ್ರವರ್ತಿ ಸುಲಿಬೆಲೆ, ಬಸನಗೌಡ ಪಾಟೀಲ ಯತ್ನಾಳ, ಪ್ರಮೋದ ಮುತಾಲಿಕ, ಸಿ.ಟಿ.ರವಿ, ಪ್ರತಾಪಸಿಂಹ, ಅರವಿಂದ ಬೆಲ್ಲದ, ನಾರಾಯಣಸಾ ಭಾಂಡಗೆ, ಈರಣ್ಣ ಕಡಾಡಿ, ಅಭಯ ಪಾಟೀಲ, ಸಂಜಯ ಪಾಟೀಲ, ಅರುಣ ಶಹಾಪುರ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಕನ್ಹೇರಿಯ ಶ್ರೀಗಳು ಹಾಗೂ ಅನೇಕ ಸಾಧು ಸಂತರು ಸಹ ಇದರಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ನಿರ್ಬಂಧದ ಬಗ್ಗೆ ಏನೇನು ರೂಪುರೇಷೆಗಳನ್ನು ಮಾಡಬೇಕು ಎಂಬ ತೀರ್ಮಾನ ಕೈಗೊಳ್ಳಲಿದ್ದೇವೆ. ರಾಜ್ಯ ಸರ್ಕಾರದ ಕಿವಿ ಹಿಂಡಲು ಲಕ್ಷಾಂತರ ಜನ ಸೇರಿಸುವುದೋ ಅಥವಾ ಮೌನವಾಗಿ ಹೋರಾಟ ಮಾಡಬೇಕೊ ಎಂಬ ವಿಚಾರ ಚರ್ಚಿಸಲಾಗುವುದು. ಅಷ್ಟರೊಳಗೆ ಸಿಎಂ ಸಿದ್ಧರಾಮಯ್ಯನವರು ಶ್ರೀಗಳ ಮೇಲಿನ ನಿರ್ಬಂಧ ವಾಪಸ್ ಪಡೆದರೆ ರಾಜ್ಯದಲ್ಲಿ ಶಾಂತಿ ಇರಲಿದೆ. ಇದರ ಜೊತೆಗೆ ಕೋರ್ಟ್ ನಲ್ಲಿ ಏನು ಹೋರಾಟ ಮಾಡಬೇಕೋ ಅದನ್ನು ಮಾಡಲಾಗುತ್ತಿದೆ. ಕ್ಷಮೆ ಕೇಳಿದರೆ ನಿರ್ಬಂದ ವಾಪಸ್ ಎಂದು ಎಂ.ಬಿ.ಪಾಟೀಲ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಅವರೊಬ್ಬರೇ ವಾಪಸ್ ಪಡೆಯಲು ಅಧಿಕಾರವಿದೆಯೆ?. ಕ್ಯಾಬಿನೆಟ್ ಇದೆ, ಅಲ್ಲಿ ತೀರ್ಮಾನ ಆಗಬೇಕಲ್ಲವಾ?. ನಿರ್ಬಂಧ ವಾಪಸ್ಸು ಪಡೆಯಲು ರಾಜ್ಯ ಸರ್ಕಾರದಲ್ಲಿ ಎಂ.ಬಿ.ಪಾಟೀಲ ಒಬ್ಬರಿಗೆ ಅಧಿಕಾರ ಕೊಟ್ಟಿದ್ದಾರಾ?. ಇಷ್ಟೆಲ್ಲ‌ ಸಮಸ್ಯೆಗಳಿಗೆ ಅವರೊಬ್ಬರೆ ಇದರ ಮೂಲ‌ಪುರುಷ ಎಂದರು.

ಹಾಲುಮತ ಸಮಾಜಕ್ಕೆ ಎಸ್.ಟಿ ಮೀಸಲಾತಿ ಬೇಕು ಎಂದು ಕಲಬುರಗಿ, ಯಾದಗಿರಿ ಭಾಗದ ಜನತೆ ಮನವಿ ಮಾಡಿದ್ದರು. ಜೊತೆಗೆ ರಾಜ್ಯದಲ್ಲಿರುವ ಸಮಾಜದ ಎಲ್ಲರಿಗೂ ಮೀಸಲಾತಿ ಸಿಗಬೇಕು ಎಂದು ಹೋರಾಟ ನಡೆದಿತ್ತು. ಈ ಎರಡೂ ಫೈಲ್ ಗಳನ್ನು ದೆಹಲಿಗೆ ಕಳಿಸಲಾಗಿತ್ತು. ಈಗ ಅವರೆಡೂ ವಾಪಸ್ ಬಂದಿವೆ ಎನ್ನಲಾಗಿದೆ. ಅವು ವಾಪಸ್ ಬಂದಿವೆಯಾ? ದೆಹಲಿಯಿಂದ ಏನು ಅಂಶಗಳನ್ನು ಹಾಕಿ ವಾಪಸ್ ಕಳಿಸಿದ್ದಾರೆ ಅದನ್ನು ಸಿಎಂ ಸಿದ್ಧರಾಮಯ್ಯ ಸ್ಪಷ್ಟಪಡಿಸಬೇಕು ಎಂದರು.‌ ತಾವು ಅದಕ್ಕೆ ಉತ್ತರಿಸಿ ವಾಒಸ್ ಕಳಿಸಿದಿರೋ ಇಲ್ಲವೋ ಎಂಬುದು ತಿಳಿಸಬೇಕು. ಇದೆ ವಿಚಾರವಾಗಿ ಮೊನ್ನೆ ನಿರಂಜನಾನಂದಪುರಿ ಸ್ವಾಮೀಜಿ, ಹೆಚ್.ವಿಶ್ವನಾಥ ಸೇರಿದಂತೆ ಹಕವರು ಸೇರಿ ಸಭೆ ನಡೆಸಿದ್ದೇವೆ ಎಂದರು.

ಈ ಸರ್ಕಾರ ಹಿಂದೂ ಸಮಾಜಗಳಿಗೆ ಅನ್ಯಾಯ ಮಾಡಿ, ಮುಸ್ಲಿಂ‌ ಸಮಾಜಕ್ಕೆ ಮಾತ್ರ ಅನುಕೂಲ‌ ಮಾಡುತ್ತಿದೆ. ಇದರ‌ ಮದ್ಯೆ ಸಚಿವ ರಾಮಲಿಂಗಾರೆಡ್ಡಿ ಅವರು ದೀಪಾವಳಿ ಹಬ್ಬದಲ್ಲಿ ಮುಜರಾಯಿಗೆ ಒಳಪಡುವ ದೇವಸ್ಥಾನಗಳಲ್ಲಿ ಗೋ ಪೂಜೆ ಮಾಡಬೇಕು ಎಂದು ಆದೇಶಿಸಿದ್ದಾರೆ. ಅವರ ಆದೇಶಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ರಾಜು ಕಂಬಾಗಿ, ರಾಹುಲ ಔರಂಗಾಬಾದ, ಪ್ರಭುಲಿಂಗ ದೊಡ್ಡಿನ, ಗುರುನಾಥ, ಬಿ.ಹೆಚ್.ಜೋಗಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande