ಸುಗಟೂರಿನಲ್ಲಿ ಪಟ್ಟಾಭಿರಾಮನ್,ಹೆಬ್ಬಣಿ ನಾಗಪ್ಪ ಸ್ಮರಣಾರ್ಥ ಭಾಷಣ ಸ್ಪರ್ಧೆ
ಸುಗಟೂರಿನಲ್ಲಿ ಪಟ್ಟಾಭಿರಾಮನ್,ಹೆಬ್ಬಣಿ ನಾಗಪ್ಪ ಸ್ಮರಣಾರ್ಥ ಭಾಷಣ ಸ್ಪರ್ಧೆ
ಕೋಲಾರ ತಾಲ್ಲೂಕಿನ ಸುಗಟೂರು ಸಬರಮತಿ ಪ್ರೌಢಶಾಲೆಯಲ್ಲಿ ಸ್ವಾತಂತ್ರö್ಯ ಹೋರಾಟಗಾರರಾದ ಕೆ.ಪಟ್ಟಾಭಿರಾಮನ್ ಮತ್ತು ಹೆಬ್ಬಣಿ ನಾಗಪ್ಪ ಸ್ಮರಣಾರ್ಥ `ಪಂಚಾಯತ್‌ರಾಜ್' ವಿಷಯದ ಕುರಿತ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಗಳಲ್ಲಿ ವಿಜೇತರಿಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಿ.ನಾರಾಯಣಗೌಡ ಪಾರಿತೋಷಕ ವಿತರಿಸಿದರು.


ಕೋಲಾರ, ೨೬ ಅಕ್ಟೋಬರ್ (ಹಿ.ಸ) :

ಆ್ಯಂಕರ್ : ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹನೀಯರ ಆದರ್ಶ ಪಾಲಿಸಿ, ಸಮಾಜದಲ್ಲಿ ಆದರ್ಶವ್ಯಕ್ತಿಗಳಾಗಿ ಹೊರಹೊಮ್ಮಿ ಎಂದು ವಿದ್ಯಾರ್ಥಿಗಳಿಗೆ ತಾಲ್ಲೂಕಿನ ಸುಗಟೂರು ಸಬರಮತಿ ಪ್ರೌಢಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಜಿ.ನಾರಾಯಣಗೌಡ ಕರೆ ನೀಡಿದರು.

ತಾಲ್ಲೂಕಿನ ಸುಗಟೂರು ಸಬರಮತಿ ಪ್ರೌಢಶಾಲೆಯಲ್ಲಿ ಸ್ವಾತಂತ್ರö್ಯ ಹೋರಾಟಗಾರರಾದ ಕೆ.ಪಟ್ಟಾಭಿರಾಮನ್ ಮತ್ತು ಹೆಬ್ಬಣಿ ನಾಗಪ್ಪ ಸ್ಮರಣಾರ್ಥ `ಪಂಚಾಯತ್‌ರಾಜ್' ವಿಷಯದ ಕುರಿತ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಗಳಲ್ಲಿ ವಿಜೇತರಿಗೆ ಪಾರಿತೋಷಕ ವಿತರಿಸಿ ಮಾತನಾಡಿದರು.

ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಹಿರಿಯರು ಹಾಕಿಕೊಟ್ಟಿರುವ ಮಾರ್ಗವನ್ನು ಅನುಸರಿಸಬೇಕು. ಗಾಂಧೀಜಿ ಮತ್ತಿತರರ ಮಾರ್ಗದರ್ಶನದಲ್ಲಿ ಕೋಲಾರ ಜಿಲ್ಲೆಯಲ್ಲೂ ಅನೇಕರು ಸ್ವಾತಂತ್ರö್ಯ ಹೋರಾಟ ನಡೆಸಿದ್ದಾರೆ. ಅವರಲ್ಲಿ ಕೆ.ಪಟ್ಟಾಭಿರಾಮನ್, ನಾಗಪ್ಪ ಮತ್ತಿತರರ ಹೋರಾಟ ಅವಿಸ್ಮರಣೀಯ ಎಂದ ಅವರು, ಅವರನ್ನು ಪ್ರತಿಯೊಬ್ಬರ ಸ್ಮರಿಸಬೇಕು. ಗುತ್ತಿಗೆದಾರ ಮಂಜುನಾಥ್ ಮಾತನಾಡಿ, ಕೋಟ್ಯಾಂತರ ಜನರ ಆಶೀರ್ವಾದಿಂದ ಶಾಂತಿ ನೆಮ್ಮದಿ ಮೂಲಕ ಸ್ವಾತಂತ್ರ‍್ಯ ಕೊಟ್ಟಿದ್ದಾರೆ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಗಾಂಧಿ ಅವರು ಹೇಳಿದ ಪ್ರತಿಯೊಂದು ವಿಚಾರವನ್ನು ಸಂವಿಧಾನದಲ್ಲಿ ಉಲ್ಲೇಖ ಮಾಡಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಕಲ್ಪಿಸಿದ್ದಾರೆ. ಅಹಿಂಸ ಮಾರ್ಗದಲ್ಲಿ ಸಾಗುವ ಮೂಲಕ ಭವ್ಯ ಭಾರತ ಕಟ್ಟಲು ಮುಂದಾಗಬೇಕು ಎಂದು ತಿಳಿಸಿದರು.

ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಭಾಷಣ ಸ್ಪರ್ಧೆಗಳಿಗೆ ಚಾಲನೆ ನೀಡಿದ ಸಂಸ್ಥೆಯ ಉಪಾಧ್ಯಕ್ಷ ಸತೀಶ್ ಮೂರ್ತಿ, ಶಿಕ್ಷಣ ಇಲ್ಲದ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಅಂತ ಕನಸು ಹೊಂದಿರುತ್ತಾರೆ. ಯಾರ ಯಾರ ಹಣೆಯಲ್ಲಿ ದೇವರು ಏನನ್ನು ಬರೆದಿರುತ್ತಾನೊ ಅದು ಗೊತ್ತಾಗುವುದಿಲ್ಲ. ಐಎಎಸ್, ಐಪಿಎಸ್, ಶಾಸಕ, ಎಂಎಲ್ಸಿ, ಮಿನಿಸ್ಟರ್ ಆಗಬಹುದು. ಉತ್ತಮ ಫಲಿತಾಂಶ ಗಳಿಸಿದಾಗ ತಂದೆ-ತಾಯಿಗೆ ಸಲ್ಲಿಸುವ ಗೌರವ. ಆ ಸಂದರ್ಭದಲ್ಲಿ ಅವರ ಸಂತೋಷ ಎಂದೂ ಕಾಣಲು ಸಾಧ್ಯವಾವುದಿಲ್ಲ ಎಂದರು.

ಶಾಲೆಯ ಆಡಳಿತಾಧಿಕಾರಿ ಬಿ.ವೆಂಕಟೇಶ್ ಮಾತನಾಡಿ, ಗಾಂಧಿ,ಶಾಸ್ತಿçÃಜಿ ಜಯಂತಿ ಅಂಗವಾಗಿ ಪ್ರತಿವರ್ಷವು ವಿದ್ಯಾರ್ಥಿಗಳು ಶ್ರಮದಾನ ನಡೆಸಿ ಸ್ವಚ್ಚತೆಯೇ ನಮ್ಮ ಧ್ಯೇಯವಾಗಿಸುವ ಸಂಕಲ್ಪದೊAದಿಗೆ ಕೆಲಸ ಮಾಡಿಕೊಂಡು ಬಂದಿದ್ದು, ಈ ಬಾರಿಯೂ ಅದನ್ನು ಮುಂದುವರೆಸಿದ್ದೇವೆ.ಶಾಲೆಯ ಖಜಾಂಚಿ ಟಿ.ಎನ್.ಶಿವಕುಮಾರ್ ಮಾತನಾಡಿ, ಗಾಂಧೀಜಿಯವರ ಅಹಿಂಸಾ ತತ್ವ, ಶಾಸ್ತಿçÃಜಿಯವರ ಪ್ರಾಮಾಣಿಕತೆ ಮಕ್ಕಳು ಪಾಲಿಸಬೇಕು, ಅವರಂತೆ ಈ ದೇಶದ ಮಹಾನ್ ನಾಯಕರಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು.

ಸಬರಮತಿ ಶಾಲೆಯಲ್ಲಿ ಸ್ವಾತಂತ್ರö್ಯ ಹೋರಾಟಗಾರರಾದ ಕೆ.ಪಟ್ಟಾಭಿರಾಮನ್ ಮತ್ತು ಹೆಬ್ಬಣಿ ನಾಗಪ್ಪ ಸ್ಮರಣಾರ್ಥ `ಪಂಚಾಯತ್‌ರಾಜ್' ವಿಷಯದ ಕುರಿತ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಗಳಲ್ಲಿ ಸೀತಿಯ ಬಿಜಿಎಸ್ ಶಾಲೆ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದು, ಶ್ರೀನಿವಾಸಪುರ ಬೈರವೇಶ್ವರ ಶಾಲೆ ದ್ವಿತೀಯ ಸ್ಥಾನ ಹಾಗೂ ಸುಗಟೂರಿನ ಸಬರಮತಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸದಸ್ಯ ಕೆ.ಎನ್.ಅಂಬರೀಷ್ ಚಾಲನೆ ನೀಡುವರು. ಕಾರ್ಯಕ್ರಮದಲ್ಲಿ ಸುಗಟೂರು ಗ್ರಾ.ಪಂಅಧ್ಯಕ್ಷ ಭೂಪತಿಗೌಡ, ಉಪಾಧ್ಯಕ್ಷೆ ನರಸಮ್ಮವೆಂಕಟೇಶ್, ಮುಖ್ಯಶಿಕ್ಷಕರು, ಶಿಕ್ಷಕ ವೃಂದ ಹಾಜರಿದ್ದರು.

ಸ್ಪರ್ಧಿಗಳಿಗೆ ಪಾರಿತೋಷಕಗಳನ್ನು ಸ್ವಾತಂತ್ರö್ಯ ಹೋರಾಟಗಾರ ರಾಜಪ್ಪ ಸ್ಮರಣಾರ್ಥ ನಿವೃತ್ತ ಮುಖ್ಯಶಿಕ್ಷಕ ಪಿಎಂ.ವೆAಕಟಪತೆಪ್ಪ, ಹಾಗೂ ದಿವಂಗತ ಛರ‍್ಮನ್ ಆರ್.ನಾರೆಪ್ಪನವರ ಸ್ಮರಣಾರ್ಥ ನಿವೃತ್ತ ಡಿಡಿಪಿಐ ಸಿ.ಬಿ.ಹನುಮಂತಪ್ಪ ಕೊಡುಗೆಯಾಗಿ ನೀಡಿದ್ದರು. ತೀರ್ಪುಗಾರರಾಗಿ ಶ್ರೀನಿವಾಸಪುರ ಪದವಿ ಪೂರ್ವ ಕಾಲೇಜಿನ ಸೀತರೆಡ್ಡಿ, ಗೌನಪಲ್ಲಿ ಸರ್ಕಾರಿ ಪಿಯು ಕಾಲೇಜು ನನಿವೃತ್ತ ಪ್ರಾಂಶುಪಾಲ ಚಂದ್ರಶೇಖರಾಚಾರಿ, ಲಕ್ಷಿö್ಮÃಪುರ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ಕೆ.ವೆAಕಟರಮಣಪ್ಪ ಕಾರ್ಯನಿರ್ವಹಿಸಿದರು.

ಚಿತ್ರ : ಕೋಲಾರ ತಾಲ್ಲೂಕಿನ ಸುಗಟೂರು ಸಬರಮತಿ ಪ್ರೌಢಶಾಲೆಯಲ್ಲಿ ಸ್ವಾತಂತ್ರö್ಯ ಹೋರಾಟಗಾರರಾದ ಕೆ.ಪಟ್ಟಾಭಿರಾಮನ್ ಮತ್ತು ಹೆಬ್ಬಣಿ ನಾಗಪ್ಪ ಸ್ಮರಣಾರ್ಥ `ಪಂಚಾಯತ್‌ರಾಜ್' ವಿಷಯದ ಕುರಿತ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಗಳಲ್ಲಿ ವಿಜೇತರಿಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಿ.ನಾರಾಯಣಗೌಡ ಪಾರಿತೋಷಕ ವಿತರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande