
ಕೋಲಾರ, ೨೬ ಅಕ್ಟೋಬರ್ (ಹಿ.ಸ) :
ಆ್ಯಂಕರ್ : ಖಲೀಲ್ ಗಿಬ್ರಾನ್ ಎಲ್ಲಾ ಧರ್ಮಗಳ ಚೌಕಟ್ಟನ್ನು ಧಿಕ್ಕರಿಸಿದ್ದರು. ಅಂತರAಗದ ಪಾವಿತ್ರತೆಯ ಸಾಧನೆ, ತನ್ನನ್ನೆ ತಾನು ಪ್ರಾಮಾಣಿಸಿಕೊಳ್ಳುವ ಕ್ರಿಯೆ ಆತ್ಮ, ಆಪ್ತ ,ಸಖಿಯ ಸಂವಾದ ಎನ್ನುತ್ತಾರೆ. ಧರ್ಮ ಎಂಬುದು ಎಳೆಯ ಮಗುವಿನ ಆಟದಲ್ಲಿ ಕಾಣುವೆ ಎಂದು ಜಿಬ್ರ ಹೇಳುವಂಥ ಮಾತು ಬಹಳ ಆಧ್ಯಾತ್ಮಿಕವಾಗಿ ಸೂಕ್ಷ್ಮವಾಗಿ ಇರುತ್ತವೆ. ಖಲೀಲ್ ಗಿಬ್ರಾನ್ ಅವರು ಅರ್ಥವಾಗುತ್ತಿದ್ದಂತೆ ಇರುತ್ತದೆ. ಆದರೆ ಅರ್ಥವಾಗುವುದಿಲ್ಲ. ಪ್ರತಿಯೊಂದು ಸಲ ಅವರನ್ನು ಓದುವುದರ ಮೂಲಕ ಒಳಗಣ್ಣನ್ನು ತೆರೆದು ಅರ್ಥೈಸಿಕೊಳ್ಳಬೇಕಾಗುತ್ತದೆ. ಗಿಬ್ರಾನ್ ಬರೀ ಕವಿಯಲ್ಲ, ಆತ ಒಬ್ಬ ಅನುಭಾವ ಕವಿ, ಸಂತ, ದಾರ್ಶನಿಕ. ನಮ್ಮ ಇಂದ್ರೀಯಗಳಿಗೆ ಪ್ರವೇಶ ಮಾಡಿಕೊಳ್ಳಲು ಕಷ್ಟಸಾಧ್ಯ ಎಂದು ಪ್ರೊ.ಮುನಿರತ್ನಪ್ಪ ಅಭಿಪ್ರಾಯಪಟ್ಟರು.
ಓದುಗ ಕೇಳುಗ ಬಳಗದ ೫೪ನೆಯ ಪುಸ್ತಕ ಪರಿಚಯದ ಖಲಿಲ್ ಗಿಬ್ರಾನ್ ಅವರ ದಿ ಪ್ರೊಪೆಟ್ ಪುಸ್ತಕದ ಬಗ್ಗೆ ಮಾತನಾಡಿದರು. ಕ್ರೈಸ್ತ ಧರ್ಮದ ಪ್ರವಾದಿ ಖಲೀಲ್ ಅವರನ್ನು ನಾವು ಬಳಸುವ ಭಾಷೆಯಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ವಿಶ್ವದ ಅತಿ ಪ್ರಾಚೀನ ಭಾಷೆ ಶಿಸ್ತು ಕತ್ತಲನ್ನು ಸೇರಿ ಹೋಗಿದೆ ಬೇರೆ ಬೇರೆ ಭಾಷಿಕ ಶಿಸ್ತುಗಳು ಚಲಾವಣೆಯಲ್ಲಿ ಇಲ್ಲದಂತಾಗಿದೆ ಎಂದರು.
ಗಿಬ್ರಾನ್ ಬಾಲ್ಯ ಕಡುಬಡತನದಾಗಿದ್ದು, ಚರ್ಚ್ ಮೂಲಕ ಶಿಕ್ಷಣ ಪಡೆದು ಒಬ್ಬ ದಾರ್ಶಿಕನಾಗುತ್ತಾನೆ. ಅವರ ಬಾಲ್ಯ, ಬಡತನ, ದುಃಖ ಸಾವುಗಳಲ್ಲಿ ಕಳೆಯಿತು. ಅವರ ಸಾಹಿತ್ಯದ ಭಾವಗಳು ಗಡಿ ದಾಟಿಸಿದವು. ಜೀವನದಲ್ಲಿ ಮನಸು ಶುದ್ಧಿವಾಗಬೇಕೆಂದು ಹೇಳುವ ಅಲ್ಲಮಪ್ರಭು ಮಾತುಗಳು ಗಿಬ್ರಾನನಲ್ಲಿ ಕಾಣಬಹುದು. ತಮ್ಮನ್ನು ತಾವು ಗ್ರಹಿಸುವ ಶಕ್ತಿ ತರ್ಕ, ಧರ್ಮ, ಪ್ರಮಾಣ ಭಾಷೆಯನ್ನು ಆಧರಿಸಿರುತ್ತದೆ. ಇವುಗಳಿಗೆ ಇರುವ ಮಿತಿಯಂತರ ಸತ್ಯವನ್ನು ಹಿಡಿಯಲು ಹೋಗುವುದೇ ಸಂತ, ಅವಧೂತ, ಅನುಭವಿ ಈ ತರ್ಕ, ಧರ್ಮ, ಪ್ರಮಾಣ ಭಾಷೆಗೆ ಅಂತರAಗದ ಸತ್ಯದ ಬೆನ್ನಟ್ಟಿ ಹೋಗುವವರು ಪ್ರವಾದಿಗಳು. ಇಂಥ ಪ್ರವಾದಿ ಕಲೀಲ್ ಗಿಬ್ರಾನ್.
ಒಬ್ಬ ಅನುಭವಿ, ಸಂತ, ದಾರ್ಶನಿಕ ಶಿಶು ಕಂಡ ಕನಸಿನಂತೆ. ತೀವ್ರತರವಾದ ಕನಸುಗಳು. ಸ್ತನ್ಯಪಾನ ಮಾಡುವಾಗ ಮೂರ್ತವಾಗುತ್ತದೆ. ತಾಯಿ ಮಗು ಪವಿತ್ರವಾದ ಭಾವವನ್ನು ಹೊಂದಿರುತ್ತಾರೆ. ಯಾವುದೇ ಸೋಂಕು ಇವರಿಗೆ ಇರುವುದಿಲ್ಲ. ಈ ಭಾವವೇ ಇವರದಾಗಿರುತ್ತದೆ. ಲೋಕ ಜೀವ ಕಾರುಣ್ಯ, ಉದಾರ ಭಾವ, ಸಹಿಷ್ಣತೆಯ ಭಾವಗಳು ಖಲಿಲ್ ಆದರಿಸುತ್ತಾರೆ. ಪ್ರೇಮಾ ಮತ್ತು ಪ್ರೀತಿಗಳನ್ನು ಅರ್ಪಿಸಿಕೊಳ್ಳರ್ಪಿಸಿಕೊಳ್ಳಬೇಕೆಂಬುದು ಈತನ ಉವಾಚ ಆಗಿತ್ತು.
ಕೃತಿಕಾರರಾದ ಬಾಗೆಪಲ್ಲಿ ಕೃಷ್ಣಮೂರ್ತಿ ಮಾತನಾಡಿ, ಖಲಿಲ್ ಗಿಬ್ರಾನ್ ಅವರ ಕೃತಿಯ ಅನುವಾದಕ್ಕೆ ಬಹಳ ದೊಡ್ಡ ಎದೆಗಾರಿಕೆ ಬೇಕಾಗುತ್ತದೆ. ವಿಶ್ವದಲ್ಲಿ ಅತ್ಯಂತ ಹೆಚ್ಚು ಮಾರಾಟವಾದಂತಹ ಪುಸ್ತಕ ದ ಪ್ರೊಫೆಟ್ ಅಥವಾ ಪ್ರವಾದಿ. ಇದನ್ನು ಪ್ರಕಾಶಕರು ಯಾರು ಮುಂದೆ ಬಂದಿಲ್ಲ ಎಂಬುದು ವಿಪರ್ಯಾಸ ಸಂಗತಿ. ಐದು ವರ್ಷಗಳ ನಂತರ ಒಂದು ಒಪ್ಪಂದದ ಮೂಲಕ ಪುಸ್ತಕವನ್ನು ಪ್ರಕಟಿಸಲಾಯಿತು. ಗಿಬ್ರಾನ್ ಒಬ್ಬ ಕಲಾವಿದ ಎಂದೇ ವಿದೇಶಗಳಲ್ಲಿ ಸ್ವೀಕರಿಸಿದ್ದಾರೆ. ಪಾಶ್ಚಾತ್ಯರು ಈತನನ್ನು ದಾರರ್ಶನಿಕ ಎಂದು ಸ್ವೀಕರಿಸಲಿಲ್ಲ ಭಾರತದಲ್ಲಿ ಆತನನ್ನು ಒಬ್ಬ ದೊಡ್ಡ ದಾರ್ಶನಿಕ, ಅನುಭವಿ, ಸಂತ ಎಂದು ಸ್ವೀಕರಿಸಿದ್ದಾರೆ ಎಂದು ಲೇಖಕ ಬಾಗೇಪಲ್ಲಿ ಕೃಷ್ಣಮೂರ್ತಿ ಮಾತನಾಡಿದರು. ಸಂವಾದದಲ್ಲಿ ನಟರಾಜ್, ಆದಿಮ ಡ್ರಾಮ ಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಓದುಗ ಕೇಳುಗ ಸಂಘಟಕರಾದ ಆಯೋಜಕರಾದ ಹ.ಮಾ. ರಾಮಚಂದ್ರ, ಜೆ.ಜಿ.ನಾಗರಾಜ, ಸಿ.ಎಂ.ಮುನಿಯಪ್ಪ, ಡಾ.ನೇತ್ರಾವತಿ, ನಡುಪಳ್ಳಿ ಮಂಜುನಾಥ, ವಿಶ್ವ ಕುಂದಾಪುರ, ಆದಿಮ ಗೋವಿಂದಪ್ಪ, ನೀಲಕಂಠೆ ಗೌಡ, ಕೆ.ಎಸ್.ಗಣೇಶ್, ಸತೀಶ್ ಕಾಟೇರಿ, ಜಯಸಿಂಹ, ಟೀಚರ್ ನಂಜುAಡಪ್ಪ, ಇಂಚರ ನಾರಾಯಣಸ್ವಾಮಿ, ಪ್ರೀತಿ ಭಾಗವಹಿಸಿದ್ದರು.
ಚಿತ್ರ : ಕೋಲಾರದಲ್ಲಿ ಭಾನುವಾರ ಓದುಗ-ಕೇಳುಗ ಕಾರ್ಯಕ್ರಮದಲ್ಲಿ ಖಲಿಲ್ ಗಿಬ್ರಾನ್ ಅವರ ದಿ ಪ್ರೊಪೆಟ್ ಪುಸ್ತಕದ ಚರ್ಚೆ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್