
ಧಾರವಾಡ, 26 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಧಾರವಾಡ ಜಿಲ್ಲೆಯಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸರ್ಕಾರಿ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿ ಸ್ಥಾಪಿಸಲಾಗಿದೆ. ಅಮ್ಮಿನಭಾವಿ ಕೃಷಿ ಯಂತ್ರಧಾರೆ ಕೇಂದ್ರವನ್ನು ನಿರ್ವಹಿಸುತ್ತಿದ್ದ ಸೇವಾಧಾರ ಸಂಸ್ಥೆಯವರ ಒಡಂಬಡಿಕೆ ಅವಧಿ ಮುಕ್ತಾಯವಾಗಿದ್ದು, ಅವರು ಮುಂದುವರೆಸಲು ಇಚ್ಛಿಸಿರುವುದಿಲ್ಲ. ಆದ್ದರಿಂದ ಕೃಷಿ ಯಂತ್ರಧಾರೆ ಕೇಂದ್ರವನ್ನು ಹಸ್ತಾಂತರಿಸಲು ನೋಂದಾಯಿತ ರೈತ ಉತ್ಪಾದಕ ಸಂಸ್ಥೆಗಳು, ಆಸಕ್ತಿಯುಳ್ಳ ಇತರೇ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರೈತ ಉತ್ಪಾದಕ ಸಂಸ್ಥೆಗಳಿಗೆ ರೂ. 0.50 ಲಕ್ಷಗಳು ಹಾಗೂ ಇತರೆ ಸಂಸ್ಥೆಗಳಿಗೆ ರೂ. 1.0 ಲಕ್ಷಗಳ ಇಎಮ್‍ಡಿಯನ್ನು ಸಂಬಂಧಿಸಿದ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಹೆಸರಲ್ಲಿ ಒಂಬತ್ತು ವರ್ಷಗಳ ಅವಧಿಗೆ ಬ್ಯಾಂಕ್ ಗ್ಯಾರಂಟಿಯನ್ನು ಪಡೆಯುವುದು ಹಾಗೂ 9 ವರ್ಷಗಳ ಒಡಂಬಡಿಕೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ಆಸಕ್ತ ಸಂಸ್ಥೆಯವರು ಅಕ್ಟೋಬರ್ 29, 2025 ರೊಳಗೆ ಅರ್ಜಿಯನ್ನು ನೇರವಾಗಿ ಧಾರವಾಡಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa