
ಹುಬ್ಬಳ್ಳಿ, 25 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಾಜಿ ಸಂಸದ ರಮೇಶ್ ಕತ್ತಿ ಇತ್ತೀಚೆಗೆ ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಯಕ ಸಮುದಾಯವನ್ನ ಉದ್ದೇಶಿಸಿ ಸಾರ್ವಜನಿಕವಾಗಿ ತೀವ್ರ ಅಪಮಾನಕರವಾಗಿ ನಿಂದಿಸಿದ್ದಾರೆ ಎಂದು ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ
ಮಾಜಿ ಸಂಸದರ ವಿರುದ್ಧ ಎಸ್. ಸಿ. ಎಸ್. ಟಿ. ದೌರ್ಜನ್ಯ ತಡೆ ಕಾಯ್ದೆಯಡಿ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಲು ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ದಲಿತ ಘಟನೆಯ ಕಾರ್ಯಕರ್ತರು, ಮಾಜಿ ಸಂಸದ ರಮೇಶ್ ಕತ್ತಿ ನಾಯಕ ವಾಲ್ಮೀಕಿ ಪರಿಶಿಷ್ಟ ಪಂಗಡದ ಸಮಾಜಕ್ಕೆ ಅಪಮಾನಕರ ಶಬ್ದಗಳಿಂದ ನಿಂದಿಸಿ ಸಮಾಜದ ಜನರ, ಜನಾಂಗದ ಮನಸ್ಸಿಗೆ ತುಂಬಾ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ರಾಮಾಯಣದಂತಹ ಮಹಾಕಾವ್ಯವನ್ನ ರಚಿಸಿದ ಮಹರ್ಷಿ ವಾಲ್ಮೀಖ ಸಮಾಜದವರಿಗೆ ಈ ರೀತಿಯ ಅಪಮಾನ ಮಾಡಿದ ಮಾಜಿ ಸಂಸದರ ವಿರುದ್ಧ ಎಸ್. ಸಿ. ಎಸ್. ಟಿ. ದೌರ್ಜನ್ಯ ತಡೆ ಕಾಯ್ದೆಯಡಿ ಜಾತಿ ನಿಂದನೆ ಪ್ರಕರಣವನ್ನು ದಾಖಲು ಮಾಡಿ ಈ ಕೂಡಲೇ ಈ ರಮೇಶ್ ಕತ್ತಿ ಯನ್ನು ಬಂಧಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa