ಒಂದು ದಿನದ ಕಾರ್ಯಾಗಾರ ಮುಂದೂಡಿಕೆ
ಹಾಸನ, 25 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಹಾಸನ ಹಾಗೂ ಟೆಕ್ಸಾಕ್, ಬೆಂಗಳೂರು ರವರ ಸಂಯುಕ್ತಾಶ್ರಯದಲ್ಲಿ ನ.04 ರಂದು ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ ಹಾಸನದಲ್ಲಿ ನಡೆಯಬೇಕಿದ್ದ Incubation One day Awareness Programmes Unde
ಒಂದು ದಿನದ ಕಾರ್ಯಾಗಾರ ಮುಂದೂಡಿಕೆ


ಹಾಸನ, 25 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಹಾಸನ ಹಾಗೂ ಟೆಕ್ಸಾಕ್, ಬೆಂಗಳೂರು ರವರ ಸಂಯುಕ್ತಾಶ್ರಯದಲ್ಲಿ ನ.04 ರಂದು ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ ಹಾಸನದಲ್ಲಿ ನಡೆಯಬೇಕಿದ್ದ Incubation One day Awareness Programmes Under RAMP ಯೋಜನೆಯಡಿಯಲ್ಲಿನ ಒಂದು ದಿನದ ಕಾರ್ಯಗಾರವನ್ನು ಕಾರಣಾಂತರಗಳಿಂದ ನ.06 ರಂದು ಬೆಳಿಗ್ಗೆ 10.30 ಗಂಟೆಗೆ ಆಯೋಜಿಸಲಾಗಿದೆ. ಜಿಲ್ಲೆಯ ಭಾವಿ ಉದ್ದಿಮೆದಾರರು ಭಾಗವಹಿಸಿ ಸದರಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಿದೆ.

ನ.05 ರಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಸನದಲ್ಲಿ ನಡೆಯಲಿರುವ Incubation One day Awareness Programmes Under RAMP ಕಾರ್ಯಗಾರವು ಎಂದಿನಂತೆ ಬೆಳಿಗ್ಗೆ 10.30 ಗಂಟೆಗೆ ಆಯೋಜಿಸಲಾಗಿದ್ದು. ಜಿಲ್ಲೆಯ ಭಾವಿ ಉದ್ದಿಮೆದಾರರು ಭಾಗವಹಿಸಿ ಸದರಿ ಕಾರ್ಯಾಗಾರಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ಹಾಸನ ದೂರವಾಣಿ ಸಂಖ್ಯೆ: 08172-296217, 240606 ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande