ಬೀದಿ ನಾಯಿಗಳ ಹಾವಳಿ ತಡೆಗೆ ನಗರಸಭೆ ಕ್ರಮ
ಗದಗ, 25 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಗದಗ ಬೆಟಗೇರಿ ಅವಳಿ ನಗರದಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಗದಗ-ಬೆಟಗೇರಿ ನಗರಸಭೆಯು ಮತ್ತೊಮ್ಮೆ ಮುಂದಾಗಿದೆ. ಮಾನ್ಯ ಆಡಳಿತಾಧಿಕಾರಿಗಳ ಅನುಮೋದನೆಯ ಮೇರೆಗೆ ಎರಡನೇ ಹಂತದ ಬೀದಿ ನಾಯಿಗಳ ಸಂತಾನ ಹರಣ ಮತ್ತು ಆಂಟಿ ರೇಬಿಸ್ ವ್ಯಾಕ್
ಪೋಟೋ


ಗದಗ, 25 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಗದಗ ಬೆಟಗೇರಿ ಅವಳಿ ನಗರದಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಗದಗ-ಬೆಟಗೇರಿ ನಗರಸಭೆಯು ಮತ್ತೊಮ್ಮೆ ಮುಂದಾಗಿದೆ. ಮಾನ್ಯ ಆಡಳಿತಾಧಿಕಾರಿಗಳ ಅನುಮೋದನೆಯ ಮೇರೆಗೆ ಎರಡನೇ ಹಂತದ ಬೀದಿ ನಾಯಿಗಳ ಸಂತಾನ ಹರಣ ಮತ್ತು ಆಂಟಿ ರೇಬಿಸ್ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಒಂದನೇ ಹಂತದಲ್ಲಿ ಒಟ್ಟು 485 ಬೀದಿ ನಾಯಿಗಳ ಶಸ್ತ್ರಚಿಕಿತ್ಸೆ ಹಾಗೂ ವ್ಯಾಕ್ಸಿನೇಷನ್ ಕಾರ್ಯ ಯಶಸ್ವಿಯಾಗಿ ನೆರವೇರಿಸಲಾಗಿತ್ತು. ಇದೀಗ ಎರಡನೇ ಹಂತದಲ್ಲಿ 615 ನಾಯಿಗಳಿಗೆ ಸಂತಾನ ಹರಣ ಮತ್ತು ಆಂಟಿ ರೇಬಿಸ್ ವ್ಯಾಕ್ಸಿನೇಷನ್ ಕಾರ್ಯಕ್ರಮ ಕೈಗೊಳ್ಳಲಾಗಿದೆ.

ಬೆಟಗೇರಿ ಭಾಗದಲ್ಲಿ ನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಕಾರ್ಯಾಚರಣೆ ಆರಂಭವಾಗಿದ್ದು, ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು ಶ್ರೀ ಚಂದ್ರು ಕರಿ ಸೋಮನಗೌಡ್ರ, ಇಮ್ತಿಯಾಜ್ ಶಿರಹಟ್ಟಿ, ನಗರಸಭೆ ಆಯುಕ್ತ ರಾಜಾರಾಮ್ ಪವಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಆನಂದ್ ಬದಿ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ. ಮಕಾಂದಾರ್, ನಗರಸಭೆ ಸಿಬ್ಬಂದಿ ಹಾಗೂ ಅನಿಮಲ್ ರೈಟ್ಸ್ ಫಂಡ್ ಏಜೆನ್ಸಿಯ ಸದಸ್ಯರು ಹಾಜರಿದ್ದರು.

ನಗರದಲ್ಲಿ ಸುರಕ್ಷಿತ ಮತ್ತು ಸ್ವಚ್ಛ ವಾತಾವರಣ ನಿರ್ಮಾಣಕ್ಕಾಗಿ ಇಂತಹ ಕಾರ್ಯಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande