
ವಿಜಯಪುರ, 25 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ಕನ್ನೇರಿ ಶ್ರೀಗಳ ವಿರುದ್ಧ ಸಚಿವ ಎಂ ಬಿ ಪಾಟೀಲ ಕಿಡಿಕಾರಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಸುಮ್ಮನೆ ಕ್ಷಮಾ ಕೇಳಿ ಬಗೆಹರಿಸುವುದನ್ನು ಬಿಟ್ಟು, ಭಂಡತನ ಮಾಡಿದ್ದಾರೆ. ಇದು ಸುಮ್ಮನೆ ಪೌರುಷ ಹೇಳಿಕೊಳ್ಳಲು ಮಾಡಿದ್ದು ಇದೆಲ್ಲ ಎಂದು ವಾಗ್ದಾಳಿ ನಡೆಸಿದರು.
ಕನ್ನೇರಿ ಸ್ವಾಮೀಜಿ ಬಳಸಿರುವ ಶಬ್ದಗಳು ಖಂಡನೀಯ. ಆಡು ಭಾಷೆಯಲ್ಲಿ ಅಂತಾರೆ. ನನಗೂ ಆಡು ಭಾಷೆಯಲ್ಲಿ ಅನೇಕ ಶಬ್ದಗಳು ಬರ್ತಾವೆ. ನಾನು ಮಾತನಾಡಿದ್ರೆ ಏನಾಗುತ್ತೆ ಯೋಚಿಸಬೇಕು. ನನ್ನ ಬಗ್ಗೆ ಅವರು ಏಕವಚನದಲ್ಲಿ ಮಾತನಾಡಿದ್ದಾರೆ. ನಾನು ಅವರಿಗೆ ಏಕವಚನದಲ್ಲಿ ಮಾತನಾಡಿದ್ರೆ ಎಂದು ಪ್ರಶ್ನಿಸಿದರು.
ಜಿಲ್ಲಾ ನಿರ್ಬಂಧದ ಹಿಂದೆ ನಾನು ಇಲ್ಲ. ಇದು ಜಿಲ್ಲಾಡಳಿತದ ಕೆಲಸ ಆಗಿದೆ.
ಜಿಲ್ಲಾಧಿಕಾರಿಗಳು, ಎಸ್ಪಿ ನಿರ್ಧಾರ ತೆಗೆದುಕೊಂಡಿದ್ದಾರೆ. ನಿರ್ಭಂದ ಹೇರದೆ ಏನಾದ್ರೂ ಅನಾಹುತ ಆಗಿದ್ರೆ ನೀವೆ ಜಿಲ್ಲಾಡಳಿತವನ್ನು ಪ್ರಶ್ನಿಸುತ್ತಿದ್ದಿರಿ. ನನಗೂ ಅವರು ಆಪ್ತರು, ಅವರು ಕ್ಷಮೆ ಕೇಳಲಿ. ಅವರು ಕ್ಷಮೆ ಕೇಳಿದರೆ ದೊಡ್ಡವರಾಗುತ್ತಿದ್ದರು. ಸಿದ್ಧೇಶ್ವರ ಶ್ರೀಗಳು ಆಡು ಭಾಷೆಯಲ್ಲೆ ಪ್ರವಚನ ಮಾಡ್ತಿದ್ದರು. ಅವರು ಎಂದಾದರು ಈ ರೀತಿ ಮಾತನಾಡಿದ್ದಾರಾ? ಶ್ರೀಗಳ ಆಡು ಭಾಷೆಯನ್ನ ಇವರು ಕಲಿಯಬೇಕು. ಅವರು ಸಿದ್ಧೇಶ್ವರ ಶ್ರೀಗಳ ಶಿಷ್ಯ, ನಾನು ಶಿಷ್ಯ. ಅದಕ್ಕಾಗಿ ಸಿದ್ದೇಶ್ವರ ಶ್ರೀಗಳು ಹೇಳಿದ್ದಾರೆ ಲಿಂಗಾಯತ ಧರ್ಮ ಒಂದು ಜಾಗತಿಕ ಧರ್ಮ ಎಂದು ಹೇಳಿದ್ದಾರೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande