

ರಾಯಚೂರು, 25 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ಸ್ವಯಂ ಉದ್ಯೋಗಕ್ಕೆ ವಿಷೇಶ ಚೇತನರಿಗೆ ಅಂಗ ವೈಫಲ್ಯ ಅಡ್ಡಿಯಾಗುವದಿಲ್ಲ, ಸಮಾಜದಲ್ಲಿ ಎಲ್ಲರಂತೆ ನೀವು ಜೀವನ ನಡೆಸಲು ತ್ರಿಚಕ್ರ ವಾಹನಗಳನ್ನು ನೀಡಲಾಗಿದೆ, ನೀವೆಂದಿಗೂ ಅಸಮರ್ಥರಲ್ಲ ಅಂಗ ವೈಫಲ್ಯವಿರುವ ಅನೇಕರು ಸಾಧನೆ ಮಾಡಿದ್ದಾರೆ. ಎಲ್ಲರು ಜಾಗ್ರತೆಯಿಂದ ವಾಹನಗಳನ್ನು ಉಪಯೋಗಿಸಬೇಕೆಂದು ಸಚಿವರಾದ ಎನ್.ಎಸ್ ಬೋಸರಾಜು ತಿಳಿಸಿದರು.
ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರ ಕಾರ್ಯಾಲಯದಲ್ಲಿ ತಮ್ಮ ವಿಧಾನ ಪರಿಷತ್ ಸದಸ್ಯರ ಸ್ಥಳಿಯ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ 34 ಜನ ವಿಷೇಶ ಚೇತನರಿಗೆ ಸಚಿವರಾದ ಎನ್.ಎಸ್ ಬೋಸರಾಜು ಅವರು ವಾಹನಗಳನ್ನು ಹಸ್ತಾಂತರಿಸಿದರು.
ಸಾರ್ವಜನಿಕ ಜೀವನದಲ್ಲಿ ಎಲ್ಲರಂತೆ ನೀವು ಆತ್ಮಸ್ಥೈರ್ಯದಿಂದ ಜೀವನವನ್ನು ಕಟ್ಟಿಕೊಳ್ಳಬೇಕು. ಸಾಮಾನ್ಯ ಜನರಿಗಿಂತ ನೀವು ಭಿನ್ನರಲ್ಲ. ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಲು ತಮ್ಮ ಅಂಗ ವೈಕಲ್ಯ ಎಂದಿಗೂ ಅಡ್ಡಿ ಆಗುವುದಿಲ್ಲ ಎಂದು ವಿಶೇಷ ಚೇತನರಿಗೆ ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ, ಉಪ ಮಹಾಪೌರರಾದ ಸಾಜಿದ್ ಸಮೀರ್, ಹಿರಿಯರಾದ ಬಶೀರುದ್ದಿನ್, ಜಯಣ್ಣ, ಕೆ ಶಾಂತಪ್ಪ, ಮೊಹ್ಮದ್ ಶಾಲಂ, ಶಿವಮೂರ್ತಿ, ರುದ್ರಪ್ಪ ಅಂಗಡಿ, ತಿಮ್ಮಾರೆಡ್ಡಿ, ಬಿ ರಮೇಶ್, ಶಾಮ್ ಸುಂದರ್, ರಸೂಲ್ ಸಾಬ್, ಅಫ್ಜಲ್ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್