
ಬೆಂಗಳೂರು, 25 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ 60,000 ಹೆಕ್ಟೇರ್ ಬೆಳೆ ಮಳೆಗಾಹುತಿಯಾಗಿದೆ. ಅನ್ನದಾತರು ಕಣ್ಣೀರಿಡುತ್ತಿದ್ದರೆ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ಅಧಿಕಾರಕ್ಕಾಗಿ ಪರಸ್ಪರ ಸೆಣಸಾಟದಲ್ಲಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ
ರೈತರಿಗೆ ತುರ್ತಾಗಿ ನೆರೆ ಪರಿಹಾರ ನೀಡಬೇಕಾದ ಸರ್ಕಾರ, ತಮ್ಮ ಆಂತರಿಕ ಜಗಳದಲ್ಲಿ ಮುಳುಗಿರುವುದು ರಾಜ್ಯದ ದುರಂತ.
ಈಗ ಹಾನಿಯಾಗಿರುವ ಬೆಳೆಗೆ ಪರಿಹಾರ ನಿಧಿಯನ್ನು ತಕ್ಷಣ ಬಿಡುಗಡೆ ಮಾಡುವುದರ ಜೊತೆಗೆ ಈ ಹಿಂದೆ ಘೋಷಿಸಿರುವ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಿ. ನಿಮ್ಮ ರಾಜಕೀಯ ಕುಸ್ತಿ ಆಮೇಲೆ ಇರಲಿ ಎಂದು ಆಗ್ರಹಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa