ಅ.30 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ
ಹಾಸನ, 25 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್ ಕೇಂದ್ರ, ರಾಷ್ಟ್ರೀಯ ಸೇವಾ ಸಂಸ್ಥೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಾಸನ ನಗರದ ಹಾಸನಾಂಬ ಕಲಾಭವನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಅ.30 ರ
ಅ.30 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ


ಹಾಸನ, 25 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್ ಕೇಂದ್ರ, ರಾಷ್ಟ್ರೀಯ ಸೇವಾ ಸಂಸ್ಥೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಾಸನ ನಗರದ ಹಾಸನಾಂಬ ಕಲಾಭವನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಅ.30 ರಂದು 2025-26 ನೇ ಸಾಲಿನ ಹಾಸನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಸಂಘಟನೆ ಮಾಡಲಾಗುತ್ತಿದೆ.

ಯುವಜನೋತ್ಸವ ಕಾರ್ಯಕ್ರಮದಲ್ಲಿ 12-01-2026 ಕ್ಕೆ 15 ವರ್ಷ ಆಗಿರಬೇಕು. ಹಾಗೂ ಆಧಾರ್ ಕಾರ್ಡ್, ಒಂದು ಭಾವಚಿತ್ರ ತೆಗೆದುಕೊಂಡು ಬರಲು ತಿಳಿಸಲಾಗಿದೆ. 29 ವರ್ಷದ ಒಳಗಿರುವ ಕಾಲೇಜು ವಿದ್ಯಾರ್ಥಿಗಳು, ಯುವಕ ಸಂಘ ಮತ್ತು ಯುವತಿ ಮಂಡಲಿ, ಸಂಗೀತ ಶಾಲೆ, ನಾಟ್ಯ ಶಾಲೆ ಸೇರಿದಂತೆ ಯುವಜನರು (ಯುವಕ ಮತ್ತು ಯುವತಿಯರು) ಜನಪದ ಗೀತೆ (ಗುಂಪು) – 10 ಜನ (07 ನಿಮಿಷ), ಜನಪದ ನೃತ್ಯ (ಗುಂಪು) – 10 ಜನ (15 ನಿಮಿಷ), ಕಥೆ ಬರೆಯುವುದು (ವೈಯಕ್ತಿಕ) – 1000 ಪದಗಳು ಮೀರದಂತೆ ಹಿಂದಿ/ಆಂಗ್ಲ/ಪ್ರಾದೇಶಿಕ ಭಾಷೆ (60 ನಿಮಿಷ), ಕವಿತೆ ಬರೆಯುವುದು (ವೈಯಕ್ತಿಕ)- ಹಿಂದಿ/ಆಂಗ್ಲ/ಪ್ರಾದೇಶಿಕ ಭಾಷೆ – 90 ನಿಮಿಷ, ಘೋಷಣೆ (ವೈಯಕ್ತಿಕ) - ಹಿಂದಿ/ಆಂಗ್ಲ - 07 ನಿಮಿಷ, ಚಿತ್ರಕಲೆ (ವೈಯಕ್ತಿಕ) – 90 ನಿಮಿಷ ಮತ್ತು ವಿಜ್ಞಾನ ಮೇಳ – ಪ್ರತಿ ಗುಂಪಿನಲ್ಲಿ 05 ಜನರಂತೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಭಾಗವಹಿಸಲು ಇಚ್ಚಿಸುವ ಸ್ಪರ್ಧಾಳುಗಳು ಮೇಲೆ ತಿಳಿಸಿದ ದಿನಾಂಕದಂದು ಬೆಳಿಗ್ಗೆ 09 ಗಂಟೆಗೆ ಹಾಸನಾಂಬ ಕಲಾಭವನದಲ್ಲಿ ವರದಿ ಮಾಡಿಕೊಂಡು ನೊಂದಾವಣೆ ಮಾಡಿಕೊಳ್ಳುವುದು.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಸಾಲಗಾಮೆ ರಸ್ತೆ, ಹಾಸನ ಜಿಲ್ಲೆ ಇವರ ಕಚೇರಿ ದೂರವಾಣಿ ಸಂ: 08172–296256 ರಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande