ಡಿ ದೇವರಾಜ್ ಅರಸು ಪುತ್ತಳಿ ನಿರ್ಮಾಣ ಸ್ಥಳಕ್ಕೆ ಸಚಿವ ಎನ್ ಎಸ್ ಬೋಸರಾಜು ಭೇಟಿ
ರಾಯಚೂರು, 25 ಅಕ್ಟೋಬರ್(ಹಿ.ಸ.) : ಆ್ಯಂಕರ್ : 12ನೇ ಸಾಲಿನ ಸಮ-ಸಮಾನತೆಯ ಕಲ್ಯಾಣಕ್ಕಾಗಿ‌ ಶ್ರಮಿಸಿದ, ವಿಶ್ವಗುರು ಬಸವಣ್ಣ ಅವರ ಅನುಯಾಯಿಗಳಾದ ಶ್ರೀ ಅಂಬಿಗರ ಚೌಡಯ್ಯ ಅವವರ ನೂತನ ಪುತ್ಥಳಿ ನಿರ್ಮಾಣ ಸ್ಥಳಕ್ಕೆ ಹಾಗೂ ಹಿಂದುಳಿದ ವರ್ಗದ ನಾಯಕರು, ನಾಡುಕಂಡ ಶ್ರೇಷ್ಠ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿ
ಡಿ ದೇವರಾಜ್ ಅರಸು ಅವರ ಪುತ್ತಳಿ ನಿರ್ಮಾಣ ಸ್ಥಳಕ್ಕೆ  ಸಚಿವರಾದ ಎನ್ ಎಸ್ ಬೋಸರಾಜು ಭೇಟಿ


ಡಿ ದೇವರಾಜ್ ಅರಸು ಅವರ ಪುತ್ತಳಿ ನಿರ್ಮಾಣ ಸ್ಥಳಕ್ಕೆ  ಸಚಿವರಾದ ಎನ್ ಎಸ್ ಬೋಸರಾಜು ಭೇಟಿ


ರಾಯಚೂರು, 25 ಅಕ್ಟೋಬರ್(ಹಿ.ಸ.) :

ಆ್ಯಂಕರ್ : 12ನೇ ಸಾಲಿನ ಸಮ-ಸಮಾನತೆಯ ಕಲ್ಯಾಣಕ್ಕಾಗಿ‌ ಶ್ರಮಿಸಿದ, ವಿಶ್ವಗುರು ಬಸವಣ್ಣ ಅವರ ಅನುಯಾಯಿಗಳಾದ ಶ್ರೀ ಅಂಬಿಗರ ಚೌಡಯ್ಯ ಅವವರ ನೂತನ ಪುತ್ಥಳಿ ನಿರ್ಮಾಣ ಸ್ಥಳಕ್ಕೆ ಹಾಗೂ ಹಿಂದುಳಿದ ವರ್ಗದ ನಾಯಕರು, ನಾಡುಕಂಡ ಶ್ರೇಷ್ಠ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ದಿ. ಡಿ ದೇವರಾಜ್ ಅರಸು ಅವರ ಪುತ್ತಳಿ ನಿರ್ಮಾಣ ಸ್ಥಳಕ್ಕೆ ಸಚಿವರಾದ ಎನ್ ಎಸ್ ಬೋಸರಾಜು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಯಚೂರು ನಗರದ ಬಿ ಆರ್ ಬಿ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಅಂಬಿಗರ ಚೌಡಯ್ಯ ಪುತ್ತಳಿ ಸ್ಥಳಕ್ಕೆ ಹಾಗೂ ಸ್ಟೇಷನ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ದಿ.ಡಿ ದೇವರಾಜು ಅರಸು ಅವರ ಪುತ್ತಳಿ ನಿರ್ಮಾಣ ಸ್ಥಳಕ್ಕೆ ಮಹಾನಗರ ಪಾಲಿಕೆ ಮಾಹಾ ಪೌರರೊಂದಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಸಮ ಸಮಾಜ ನಿರ್ಮಾಣ ಮಾಡಲು ಹಾಗೂ ಸಮಾಜದಲ್ಲಿರುವ ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಲು ವಚನ ಸಾಹಿತ್ಯದ ಮೂಲಕ 12ನೇ ಶತಮಾನದಲ್ಲಿ ಕ್ರಾಂತಿ ಮಾಡಿದ ಮಹಾನ್ ನಾಯಕರ ವಿಚಾರ ಗಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ, ಉಪ ಮಹಾಪೌರರಾದ ಸಾಜಿದ್ ಸಮೀರ್, ಹಿರಿಯರಾದ ಜಯಣ್ಣ, ಕೆ ಶಾಂತಪ್ಪ, ಮೊಹ್ಮದ್ ಶಾಲಂ, ಶಿವಮೂರ್ತಿ, ರುದ್ರಪ್ಪ ಅಂಗಡಿ, ತಿಮ್ಮಾರೆಡ್ಡಿ, ಬಿ ರಮೇಶ್, ಶಾಮ್ ಸುಂದರ್, ರಸೂಲ್ ಸಾಬ್, ಅಫ್ಜಲ್ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande