ಗದಗ ಜಿಲ್ಲೆ ರೈತ ಬಾಂಧವರ ಗಮನಕ್ಕೆ
ಗದಗ, 24 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮುಂಗಾರು-2025 ಹಂಗಾಮಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿಯನ್ನು ಜಿಲ್ಲೆಯಲ್ಲಿ ಅಂದಾಜು 7000 ಹೆ. ಪ್ರದೇಶದಲ್ಲಿ ಬೆಳೆಯಲಾಗಿರುತ್ತದೆ. ಪ್ರಸ್ತುತ ಹತ್ತಿ ಕೃಷಿ ಉತ್ಪನ್ನಕ್ಕೆ ಮಾರುಕಟ್ಟೆ ದರವು ಕಡಿಮೆಯಾಗಿರುದರಿಂದ ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋ
ಪೋಟೋ


ಗದಗ, 24 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮುಂಗಾರು-2025 ಹಂಗಾಮಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿಯನ್ನು ಜಿಲ್ಲೆಯಲ್ಲಿ ಅಂದಾಜು 7000 ಹೆ. ಪ್ರದೇಶದಲ್ಲಿ ಬೆಳೆಯಲಾಗಿರುತ್ತದೆ. ಪ್ರಸ್ತುತ ಹತ್ತಿ ಕೃಷಿ ಉತ್ಪನ್ನಕ್ಕೆ ಮಾರುಕಟ್ಟೆ ದರವು ಕಡಿಮೆಯಾಗಿರುದರಿಂದ ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಮಧ್ಯಮ ಎಳೆ ಹತ್ತಿಗೆ ರೂ. 7,710 ಮತ್ತು ಉದ್ದನೆಯ ಎಳೆ ಹತ್ತಿಗೆ ರೂ. 8,110 ದರವನ್ನು ಘೋಷಿಸಿರುತ್ತದೆ.

ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿಸಿಕೊಳ್ಳಲು ಅಕ್ಟೋಬರ್-31 ಕೊನೆಯ ದಿನವಾಗಿದ್ದು, ಜಿಲ್ಲೆಯ ರೈತರುಗಳು ಸದರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಭಾರತೀಯ ಹತ್ತಿ ನಿಗಮದ ನಲ್ಲಿ ದಿನಾಂಕ: 31-10-2025 ರೊಳಗಾಗಿ ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಭಾರತೀಯ ಹತ್ತಿ ನಿಗಮದ ಗದಗ ಕಚೇರಿಯನ್ನು ಮೋಬೈಲ್ ಸಂಖ್ಯೆ: ಜಿ. ರಮೆಶ: 78934 29671 (ಭಾರತೀಯ ಹತ್ತಿ ನಿಗಮ),ರಮೇಶ ಜಿ. ಕೆ.: 96327 08161 (ಭಾರತೀಯ ಹತ್ತಿ ನಿಗಮ) ಸಂಪರ್ಕಿಸಲು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ. ಎಚ್. ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande