
ಸಿಂಧನೂರು, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಸಿಂಧನೂರು ತಾಲ್ಲೂಕಿನ ಕೆಲವೊಂದು ಗ್ರಾಮಗಳಲ್ಲಿ ಭತ್ತದ ಬೆಳೆಯಲ್ಲಿ ದುಂಡಾಣು ಎಲೆ ಅಂಗಮಾರಿ ರೋಗ ಕಂಡುಬ0ದಿದ್ದು, ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ತಿಳಿಸಿರುವಂತೆ ಹೆಚ್ಚಿನ ಮಳೆ/ ತೇವಾಂಶವು ದುಂಡಾಣು ಎಲೆ ಅಂಗಮಾರಿ ರೋಗವು ಉಲ್ಬಣಗೊಳ್ಳಲು ಅನುಕೂಲಕರವಾದ ವಾತಾವರಣವಾಗಿದ್ದು, ರೋಗದ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರಲಾಗಿದೆ.
ದುಂಡಾಣು ಎಲೆ ಅಂಗಮಾರಿ ರೋಗ ನಿರೋದಕ ತಳಿಗಳಾದ ಆರ್.ಪಿ.ಬಯೋ 226 (ಸುಧಾರಿತ ಸೋನಾ ಮಸೂರಿ) ಮತ್ತು ಡಿ.ಆರ್.ಆರ್ ದಾನ್ 53 ಬೆಳೆಯುವುದು. ಬಿತ್ತನೆ ಬೀಜವನ್ನು ಸ್ಟ್ರೆಪ್ಟೋಸೈಕ್ಲಿನ 0.1 ಗ್ರಾಂ. ಮತ್ತು 0.5 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಲೂಪಿ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ತಯಾರಿಸಿದ ದ್ರಾವಣದಲ್ಲಿ ಇಪ್ಪತ್ತು ನಿಮಿಷಗಳ ಕಾಲ ನೆನಸಿ ಬಿತ್ತಬೇಕು. ಕಣಿವೆಗಳಲ್ಲಿ ಬೆಳೆದ ಕಳೆಗಳನ್ನು ತೆಗೆದು ಬದುಗಳನ್ನು ಸ್ವಚ್ಛವಾಗಿಡಬೇಕು. ಹೊಲದಲ್ಲಿ ರೋಗದ ಲಕ್ಷಣ ಕಂಡ ತಕ್ಷಣ ಸ್ಟ್ರೆಪ್ಟೋಸೈಕ್ಲಿನ 0.1 ಗ್ರಾಂ. ಮತ್ತು 0.5 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಲೂಪಿ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕೆರ ಕಚೇರಿ, ಕೃಷಿ ವಿಸ್ತರಣಾ ಘಟಕ ಅಥವಾ ಕೃಷಿ ವಿಜ್ಞಾನ ಕೇಂದ್ರ - ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್