ಪೋರ್ಟಲ್‌ನಲ್ಲಿ ವಕ್ಫ್ ಸಂಸ್ಥೆ ದಾಖಲೆ ಅಪ್ ಲೋಡ್ ಮಾಡಲು ಸೂಚನೆ
ಬಳ್ಳಾರಿ, 24 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಜಿಲ್ಲೆಯಲ್ಲಿರುವ ವಕ್ಫ್ ಸಂಸ್ಥೆಗಳು ವಕ್ಫ್ ಕಾಯ್ದೆ ಕಲಂ 32(2),(ಡಿ) ಅಡಿ ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ ಪೋರ್ಟಲ್‌ನಲ್ಲಿ ಮೇಕರ್ ಆಗಿ ನೋಂದಣಿ ಮತ್ತು ವಕ್ಫ್ ಸಂಸ್ಥೆಯ ದಾಖಲೆಗಳನ್ನು ಕಡ್ಡಾಯವಾಗಿ ಅಪ್‌ಲೋಡ
ಪೋರ್ಟಲ್‌ನಲ್ಲಿ ವಕ್ಫ್ ಸಂಸ್ಥೆ ದಾಖಲೆ ಅಪ್ ಲೋಡ್ ಮಾಡಲು ಸೂಚನೆ


ಬಳ್ಳಾರಿ, 24 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯಲ್ಲಿರುವ ವಕ್ಫ್ ಸಂಸ್ಥೆಗಳು ವಕ್ಫ್ ಕಾಯ್ದೆ ಕಲಂ 32(2),(ಡಿ) ಅಡಿ ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ ಪೋರ್ಟಲ್‌ನಲ್ಲಿ ಮೇಕರ್ ಆಗಿ ನೋಂದಣಿ ಮತ್ತು ವಕ್ಫ್ ಸಂಸ್ಥೆಯ ದಾಖಲೆಗಳನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು ಎಂದು ಜಿಲ್ಲಾ ವಕ್ಫ್ ಅಧಿಕಾರಿ ತಿಳಿಸಿದ್ದಾರೆ.

364ನೇ(ಎ) ರಾಜ್ಯ ವಕ್ಫ್ ಮಂಡಳಿ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಮೇರೆಗೆ ಪ್ರದತ್ತವಾದ ಅಧಿಕಾರ ಚಲಾಯಿಸಿ, ರಾಜ್ಯ ವಕ್ಫ್ ಮಂಡಳಿಯ ಎಲ್ಲಾ ವಕ್ಫ್ ಸಂಸ್ಥೆಗಳ ಮುತವಲ್ಲಿಗಳು/ನಿರ್ವಹಣಾ ಸಮಿತಿಗಳು/ಆಡಳಿತಾಧಿಕಾರಿಗಳು/ಕೇರ್ ಟೇಕರ್‌ಗಳಿಗೆ ತಕ್ಷಣವೇ ಪೋರ್ಟ್ಲ್‌ನಲ್ಲಿ ಮೇಕರ್ ಆಗಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.

ಕಾಯ್ದೆ, 2025 ಮತ್ತು ಅದರ ನಿಯಮಗಳಡಿ ನಿಗದಿಪಡಿಸಿದ ದಾಖಲೆಗಳನ್ನು 30 ದಿನಗಳೊಳಗಾಗಿ ಅಪ್ಲೋಡ್ ಮಾಡಬೇಕು ಹಾಗೂ ಎಲ್ಲಾ ಅಪ್ಲೋಡ್‌ಗಳು ಪೋರ್ಟಲ್ ನಲ್ಲಿ ಲಭ್ಯವಿರುವ ಸ್ವರೂಪ ಮತ್ತು ಫೈಲ್ ಗಾತ್ರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಬಗ್ಗೆ ಖಚಿತಪಡಿಸಿಕೊಂಡು ದಾಖಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಈ ಪರಿಶೀಲನೆ ಮತ್ತು ಅನುಮೋದನೆಗಾಗಿ ಪೋರ್ಟಲ್‌ನಲ್ಲಿ ವಕ್ಫ್ ಅಧಿಕಾರಿಯನ್ನು ಪರಿಶೀಲಕ (ವೆರಿಫೈಯರ್), ವಿಭಾಗೀಯ ವಕ್ಫ್ ಅಧಿಕಾರಿ, ಸಹಾಯಕ ಕಾರ್ಯದರ್ಶಿ ಆಡಳಿತ, ಅಪರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಅನುಮೋದಕ(ಅಪ್ರೂವರ್) ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಅಧಿಕೃತ ವಕ್ಫ್ ಅಧಿಕಾರಿಗಳು ಏಳು ದಿನದೊಳಗೆ ದಾಖಲೆಗಳನ್ನು ಪರಿಶೀಲಿಸುತ್ತಾರೆ ಮತ್ತು ಅಧಿಕೃತ ಅನುಮೋದಿಸುವ ಅಧಿಕಾರಿಗಳು ಏಳು ದಿನದೊಳಗೆ ಕ್ರಮ ಕೈಗೊಂಡು ಅನುಮೋದನೆ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ. ಡಿಸೆಂಬರ್ 05 ರೊಳಗೆ ಸಂಪೂರ್ಣ ಅಪ್‌ಲೋಡ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ತಪ್ಪಿದ್ದಲ್ಲಿ ವಕ್ಫ್ ಕಾಯ್ದೆ ಮತ್ತು ಸಂಬ0ಧಿತ ನಿಯಮಗಳಡಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ವಕ್ಫ್ ಅಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande