
ಗದಗ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : 2025-26ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಸ್ಪರ್ಧೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಲಾಯನ್ಸ್ ಶಿಕ್ಷಣ ಸಂಸ್ಥೆ ಹಾಗೂ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯ, ಗದಗ ಇವರ ಸಹಯೋಗದೊಂದಿಗೆ ಅಕ್ಟೋಬರ್ 25 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸನ್ಮಾರ್ಗ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.
ಸ್ಪರ್ಧೆಗಳ ವಿವರ :
ಸಾಂಸ್ಕೃತಿಕ ಸ್ಪರ್ಧೆ: ಜನಪದ ನೃತ್ಯ ( ತಂಡ) (10 ಜನ ಸ್ಪರ್ಧಾಳುಗಳು) - ಸ್ಪರ್ಧಾ ಸಮಯ 15 ನಿಮಿಷ ; ಜನಪದ ಗೀತೆ ( ತಂಡ ) ಪ್ರಾದೇಶಿಕ ಭಾಷೆ ( 10 ಜನ ಸ್ಪರ್ಧಾಗಳುಗಳು)- ಸ್ಪರ್ಧ ಸಮಯ 7 ನಿಮಿಷ; ಕಥೆ ಬರೆಯುವುದು (ವೈಯಕ್ತಿಕ ) (1000 ಪದಗಳಿಗೆ ಮೀರದಂತೆ ) ಕನ್ನಡ/ ಆಂಗ್ಲ/ ಹಿಂದಿ ಭಾಷೆಯಲ್ಲಿ - ಸ್ಪರ್ಧಾ ಸಮಯ 60 ನಿಮಿಷ; ಚಿತ್ರಕಲೆ (ವೈಯಕ್ತಿಕ) ಎ 3 ಸೈಜ್ 11.7 * 16.5 “ – 90 ನಿಮಿಷ; ಘೋಷಣೆ ( ವೈಯಕ್ತಿಕ ಸ್ಪರ್ಧೆ) ಆಂಗ್ಲ /ಹಿಂದಿ ಭಾಷೆಯಲ್ಲಿ ಇರಬೇಕು. ಸ್ಪರ್ಧಿಗಳು ಸಿದ್ಧಪಡಿಸಿಕೊಂಡಿರುವ ಆಯ್ದ ವಿಷಯಗಳ ಬಗ್ಗೆ 7 ನಿಮಿಷಗಳು ಭಾಷಣ ಮಾಡಬೇಕು- ಸ್ಪರ್ದಾ ಸಮಯ 7 ನಿಮಿಷ; ಕವಿತೆ ಬರೆಯುವುದು ( ವೈಯಕ್ತಿಕ ) ( 1000 ಪದಗಳಿಗೆ ಮೀರದಂತೆ ) ಕನ್ನಡ / ಆಂಗ್ಲ / ಹಿಂದಿ ಭಾಷೆಯಲ್ಲಿ - ಸ್ಪರ್ಧಾ ಸಮಯ 90 ನಿಮಿಷ.
ಇನೋವೇಷನ್ : ಎಕ್ಸಿಬಿಷನ್ ಆಫ್ ಸೈನ್ಸ್ ಮೇಳ ( ಗುಂಪು) ರಾಜ್ಯ ಮಟ್ಟದವರಗೆ ಮಾತ್ರ ಆಯೋಜಿಸಲಾಗುವುದು.
ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ 15 ರಿಂದ 29 ವರ್ಷ ವಯೋಮಾನದೊಳಗಿನ ಯುವಜನರನ್ನು ಮಾತ್ರ ಆಧಾರ ಕಾರ್ಡ ಅಥವಾ ಅಧಿಕೃತ ಜನ್ಮ ದಾಖಲೆಗಳನ್ನು ಆಧರಿಸಿ ಆಯ್ಕೆ ಪರಿಗಣಿಸಲಾಗುವುದು. ಭಾಗವಹಿಸುವ ಸ್ಪರ್ಧಾಳುಗಳು ಗದಗ ಜಿಲ್ಲೆಯವರಾಗಿರಬೇಕು ಅಥವಾ ಅನ್ಯ ಜಿಲ್ಲೆಯವರು ಭಾಗವಹಿಸಿದಲ್ಲಿ ಗದಗ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಸಂಸ್ಥೆಯಿಂದ ಗುರುತಿನ ಚೀಟಿ/ ದೃಢೀಕರಣ ಪತ್ರ ಸಲ್ಲಿಸೇಕು.
ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಸತತಾಗಿ ಮೂರು ವರ್ಷಗಳು ಭಾಗವಹಿಸಿದ್ದು ಅಥವಾ ಒಂದು ಬಾರಿ ಪದಕ ಪಡೆದಿದ್ದರೂ ಅಂತಹ ಯುವ ಜನರು ಭಾಗವಹಿಸುವಂತಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಬಾಗವಹಿಸುವವರು ಅಕ್ಟೋಬರ್ 24 ರೊಳಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಗದಗ ಇಲ್ಲಿ ಕಚೇರಿ ವೇಳೆಯಲ್ಲಿ ಬಂದು ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು. ಅಥವಾ ಸನ್ಮಾರ್ಗ ಪದವಿ ಪೂರ್ವ ಕಾಲೇಜು, ಮುಂಡರಗಿ ರಸ್ತೆ, ಗದಗ ಇಲ್ಲಿ ನೇರವಾಗಿ ಅಕ್ಟೋಬರ್ 25 ರಂದು ಬೆಳಿಗ್ಗೆ 10 ಗಂಟೆಯೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಅವಕಾಶ ಒದಗಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಆಯೋಜಿಸುವ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಗುವುದು. ರಾಜ್ಯ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದವರನ್ನು ಮಾತ್ರ ಕಳುಹಿಸಿಕೊಡಲಾಗುವುದು.
ಭಾಗವಹಿಸುವ ಸ್ಪರ್ಧಾಳುಗಳಿಗೆ ಯಾವುದೇ ರೀತಿಯ ಪ್ರವಾಸ ಭತ್ಯೆ ನೀಡಲಾಗುವುದಿಲ್ಲ. ಮಧ್ಯಾಹ್ನ ಲಘು ಉಪಹಾರದ ವ್ಯವಸ್ತೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದೂರವಾಣಿ ಸಂಖ್ಯೆ 08372-238345 ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP