
ವಿಜಯಪುರ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಮೇಸನ್, ಕಾರ್ಪೆಂಟರ್, ವೆಲ್ಡಿಂಗ್, ಪ್ಲಂಬರ್ ಮತ್ತು ಪೇಂಟರ್ ಸೇಫ್ಟಿ ಕಿಟ್‍ಗಳನ್ನು ವಿತರಿಸಲು ನೋಂದಾಯಿತ ಕಟ್ಟಡ ಕಾರ್ಮಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ನೋಂದಾಯಿತ ಕಟ್ಟಡ ಕಾರ್ಮಿಕರು ಚಾಲ್ತಿಯಲ್ಲಿರುವ ಗುರುತಿನ ಚೀಟಿ, ಆಧಾರ ಕಾರ್ಡ್, ಭಾವಚಿತ್ರ ಒಳಗೊಂಡಂತೆ ದಾಖಲಾತಿಗಳನ್ನು ಬಸವನ ಬಾಗೇವಾಡಿಯ ವೀರಭದ್ರೇಶ್ವರ ನಗರದ ವಿಮೋಚನ ಹೋಟೆಲ್ ಹಿಂದುಗಡೆ ಇರುವ ಕಾರ್ಮಿಕರ ನಿರೀಕ್ಷಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಕಟ್ಟಡ ಕಾರ್ಮಿಕರು ನೋಂದಾಯಿಸಿ ಒಂದು ವರ್ಷ ಪೂರ್ಣಗೊಂಡಿರಬೇಕು, ಕಾರ್ಮಿಕ ಗುರುತಿನ ಚೀಟಿಯಲ್ಲಿ ನಮೂದಿಸಿದ ವೃತ್ತಿ ಕಿಟ್‍ಗಳನ್ನು ಮಾತ್ರ ವಿತರಿಸಲಾಗುವುದು.
ಅರ್ಜಿ ಸಲ್ಲಿಕೆ ಅಕ್ಟೋಬರ್ 30 ರಿಂದ ಪ್ರಾರಂಭಗೊಳ್ಳಲಿದ್ದು, ನವೆಂಬರ್ 07 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ ಎಂದು ಬಸವನ ಬಾಗೇವಾಡಿಯ ಬಸವನ ಬಾಗೇವಾಡಿ ವೃತ್ತದ ಕಾರ್ಮಿಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande