
ಬೆಂಗಳೂರು, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬೌದ್ಧಿಕ ಚಟುವಟಿಕೆಗಳ ವೇದಿಕೆಯಾದ ಮಂಥನ ದಾಸರಹಳ್ಳಿ ತನ್ನ 100ನೇ ವರ್ಷಾಚರಣೆ ಕಾರ್ಯಕ್ರಮದ ಅಂಗವಾಗಿ “ಆರ್‌ಎಸ್‌ಎಸ್ 100 – ರಾಷ್ಟ್ರಿಯ ಸ್ವಯಂಸೇವಕ ಸಂಘದ ಶತಮಾನೋತ್ಸವ” ಕುರಿತು ವಿಶೇಷ ಸಂವಾದ ಕಾರ್ಯಕ್ರಮ ಆಯೋಜಿಸಿದೆ.
ಈ ಕಾರ್ಯಕ್ರಮವು ಅಕ್ಟೋಬರ್ 26, ಭಾನುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಸೌಂದರ್ಯ ಕಾಲೇಜು ಆವರಣದ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ನಾಟಕಕಾರ, ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕ ಟಿ.ಎಸ್. ನಾಗಭರಣ ಅವರು ಅಧ್ಯಕ್ಷತೆ ವಹಿಸಲಿದ್ದು, ಚಿಂತಕ ಮತ್ತು ಲೇಖಕ, ಇಂಡಿಯಾ ಫೌಂಡೇಶನ್ ಅಧ್ಯಕ್ಷ ಡಾ. ರಾಮ್ ಮಾಧವ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ.
ಮಂಥನ ದಾಸರಹಳ್ಳಿ ವೇದಿಕೆ ಹಲವು ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರಪ್ರೇಮದ ವಿಷಯಗಳ ಕುರಿತ ಬೌದ್ಧಿಕ ಚರ್ಚಾ ವೇದಿಕೆಯನ್ನು ರೂಪಿಸಿಕೊಂಡಿದ್ದು, ಈ ಶತಮಾನೋತ್ಸವ ಕಾರ್ಯಕ್ರಮವು ಅದರ ಚಟುವಟಿಕೆಗೆ ಹೊಸ ಮೈಲುಗಲ್ಲಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa