
ರಾಯಚೂರು, 23 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 17ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ವಿವಿಧ ಪ್ರಶಸ್ತಿಗಳ ಜೊತೆಗೆ ಕಲ್ಯಾಣ ಕರ್ನಾಟಕ ಭಾಗದ ಅತ್ಯುತ್ತಮ ಸಾಧನೆಗೈದ ಶ್ರೇಷ್ಠ ರೈತರಿಗೆ ಉತ್ತೇಜನೆ ನೀಡುವ ಸಲುವಾಗಿ 2025-26ನೇ ಸಾಲಿಗೆ ಕೃಷಿ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಪ್ರಶಸ್ತಿಗೆ ಅರ್ಜಿ ನಮೂನೆ ಆಯ್ಕೆಯ ಸ್ಕೋರ್ ಕಾರ್ಡ್ಗಳನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್ ವಿಳಾಸ: https://uasraichur.karnataka.gov.in ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ರಾಯಚೂರು, ಬೀದರ್, ಕಲಬುರಗಿ, ರದ್ದೇವಾಡಗಿ, ಗಂಗಾವತಿ, ಕವಡಿಮಟ್ಟಿ, ಹಗರಿ ಮತ್ತು ಮುಖ್ಯಸ್ಥರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಭೀಮರಾಯನಗುಡಿ, ಲಿಂಗಸೂಗೂರು, ಕೊಪ್ಪಳ, ನಾಲವಾರ, ದೇವದುರ್ಗ ಹಾಗೂ ಹೂವಿನಹಡಗಲಿ ಇವರನ್ನು ಸಂಪರ್ಕಿಸಬಹುದಾಗಿದ್ದು, ಆಸಕ್ತ ರೈತರು ದಿನಾಂಕ 10-11-2025ರ ಸಂಜೆ 5ಗಂಟೆಯೊಳಗಾಗಿ ಸಂಬ0ಧಿತ ಎಲ್ಲ ದಾಖಲೆಗಳೊಂದಿಗೆ ಅರ್ಜಿಯನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು, ಲಿಂಗಸೂಗೂರು ರಸ್ತೆ, ರಾಯಚೂರು ಇವರ ಕಚೇರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು: 9480696314/ 315/ 316/ 317/ 318/ 319/ 334/ 335/ 336ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್