ಗದಗ ಜಿಲ್ಲೆ ಸಾರ್ವಜನಿಕರ ಗಮನಕ್ಕೆ
ಗದಗ, 23 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಸಮುದಾಯ ಮಾನಸಿಕ ಆರೋಗ್ಯ ಹಗಲು ಆರೋಗ್ಯ ಕೇಂದ್ರ ಮಾನಸದಾರ ಮಾನಸಿಕ ರೋಗಿಗಳ ಪುನಶ್ಚೇತನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ ವತಿಯಿಂದ ಡೇಕೇರ್ ಸೆಂಟರ್ ( ಮಾನಸದಾರ ) ಕೇಂದ್ರವನ್ನು ಸ್ಥಾಪಿಸಲು ( ಎಕ್ಸಪ್ರೆಶನ್ ಆಫ್ ಇಂಟರೆಸ್ಟ್ - ಆಸಕ್
ಪೋಟೋ


ಗದಗ, 23 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಸಮುದಾಯ ಮಾನಸಿಕ ಆರೋಗ್ಯ ಹಗಲು ಆರೋಗ್ಯ ಕೇಂದ್ರ ಮಾನಸದಾರ ಮಾನಸಿಕ ರೋಗಿಗಳ ಪುನಶ್ಚೇತನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ ವತಿಯಿಂದ ಡೇಕೇರ್ ಸೆಂಟರ್ ( ಮಾನಸದಾರ ) ಕೇಂದ್ರವನ್ನು ಸ್ಥಾಪಿಸಲು ( ಎಕ್ಸಪ್ರೆಶನ್ ಆಫ್ ಇಂಟರೆಸ್ಟ್ - ಆಸಕ್ತಿ ಅಭಿವ್ಯಕ್ತ ) ಇಓಐ ಆಹ್ವಾನಿಸಿದೆ.

ಜಿಲ್ಲೆಯ ಅರ್ಹ ಮತ್ತು ಅನುಭವ ಸರ್ಕಾರೇತರ ಸ್ವಯಂ ಸೇವ ಸಂಸ್ಥೆಗಳ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸಲು ವಿವರಗಳನ್ನು ವೆಬ್ ಸೈಟ್ ನಲ್ಲಿ ಪಡೆಯಬಹುದು. ಅಗತ್ಯ ಮಾಹಿತಿಯನ್ನು ನವೆಂಬರ್ 7 ಸಂಜೆ 4 ಗಂಟೆಯೊಳಗೆ ಅಪಲೋಡ್ ಮಾಡತಕ್ಕದ್ದು.

ಸಂಬಂಧಿಸಿದ ಎನ್ ಜಿ ಓ ಸಂಸ್ಥೆಯವರು ಅಧಿಸೂಚನೆಯಲ್ಲಿ ತಿಳಿಸಿರುವಂತೆ ನವೆಂಬರ್ 14 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಮೂಲ ದಾಖಲೆಗಳೊಂದಿಗೆ ಪರಿಶೀಲನೆಗಾಗಿ ಖುದ್ದಾಗಿ ಹಾಜರಾಗತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ಗದಗ ದೂರವಾಣಿ ಸಂಖ್ಯೆ : 08372-233996, 231744 ಇಲ್ಲಿ ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande