ಕಾಣೆ ಪ್ರಕರಣ ; 8 ವರ್ಷಗಳ ಬಳಿಕ ಪೊಲೀಸರಿಗೆ ದೂರು
ಗದಗ, 23 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ನರೇಗಲ್ಲ ಪಟ್ಟಣದ ಸುರೇಶ ಬಸನಗೌಡ ಮದ್ನೂರ (ವಯಸ್ಸು 32) ಎಂಬ ವ್ಯಕ್ತಿ ಎಂಟು ವರ್ಷಗಳ ಹಿಂದೆ ಕಾಣೆಯಾಗಿದ್ದು, ಇದೀಗ ಪ್ರಕರಣ ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಸುರೇಶ ಅವರು 2017ರ ಫೆಬ್ರವರಿ 18ರಂದು ಮುಂಜಾನೆ 8ರಿಂದ ಮಧ್ಯಾಹ್ನ 2 ಗಂಟೆಯೊಳಗೆ ಮನೆಯಿ
ಪೋಟೋ


ಗದಗ, 23 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ನರೇಗಲ್ಲ ಪಟ್ಟಣದ ಸುರೇಶ ಬಸನಗೌಡ ಮದ್ನೂರ (ವಯಸ್ಸು 32) ಎಂಬ ವ್ಯಕ್ತಿ ಎಂಟು ವರ್ಷಗಳ ಹಿಂದೆ ಕಾಣೆಯಾಗಿದ್ದು, ಇದೀಗ ಪ್ರಕರಣ ದಾಖಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಸುರೇಶ ಅವರು 2017ರ ಫೆಬ್ರವರಿ 18ರಂದು ಮುಂಜಾನೆ 8ರಿಂದ ಮಧ್ಯಾಹ್ನ 2 ಗಂಟೆಯೊಳಗೆ ಮನೆಯಿಂದ ಯಾರಿಗೂ ತಿಳಿಸದೇ ತೆರಳಿದ್ದು, ಆ ನಂತರದಿಂದ ಈವರೆಗೆ ಪತ್ತೆಯಾಗಿಲ್ಲ. ಕುಟುಂಬದವರು ಎಲ್ಲೆಲ್ಲೋ ಹುಡುಕಾಟ ನಡೆಸಿದರೂ ಸುಳಿವು ಸಿಕ್ಕಿಲ್ಲ ಎಂದು ವರದಿಗಾರ ತಮ್ಮನ ಕಾಣೆಯಾದ ಬಗ್ಗೆ ತಡವಾಗಿ ನರೇಗಲ್ಲ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಣೆಯಾದ ಸುರೇಶರ ಎತ್ತರ ಸುಮಾರು 5 ಅಡಿ 2 ಇಂಚು, ಮೈಕಟ್ಟು ಸಾಧಾರಣ, ಮೈಬಣ್ಣ ಸಾದಗೆಂಪು, ದುಂಡುಮುಖ, ಕಪ್ಪು ಕೂದಲು ಹಾಗೂ ಕಿರಿದಾದ ಮೂಗು ಹೊಂದಿದ್ದಾರೆ. ಕಾಣೆಯಾಗುವ ವೇಳೆಗೆ ನೀಲಿ ಬಣ್ಣದ ಆಫ್‌ತೋಳಿನ ಅಂಗಿ ಮತ್ತು ನೀಲಿ ಪ್ಯಾಂಟ್ ಧರಿಸಿದ್ದರು.

ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ನರೇಗಲ್ಲ ಪೊಲೀಸ ಠಾಣೆ ಅಥವಾ ಗದಗ ಜಿಲ್ಲಾ ಪೊಲೀಸ ಕಚೇರಿಯನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.

ಸಂಪರ್ಕ:

ಗದಗ ಕಂಟ್ರೋಲ್ ರೂಮ್ – 9480804400

ಡಿಎಸ್‌ಪಿ ನರಗುಂದ ಉಪವಿಭಾಗ – 9480804408

ಸಿಪಿಐ ರೋಣ – 9480804434

ಪಿಎಐ ನರೇಗಲ್ಲ – 9480804454

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande