ಕುಡಿಯುವ ನೀರಿನ ಕುಂದುಕೊರತೆ ಸಹಾಯವಾಣಿ : ಸಿಇಒ ಈಶ್ವರ್ ಕುಮಾರ್
ರಾಯಚೂರು, 23 ಅಕ್ಟೋಬರ್(ಹಿ.ಸ.) : ಆ್ಯಂಕರ್ : ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜು, ಸ್ವಚ್ಛತೆ ಮತ್ತು ನೈರ್ಮಲ್ಯ ಮೂಲಭೂತ ಸೌಕರ್ಯ ನಿರ್ವಹಣೆ ಹಾಗೂ ಗ್ರಾಮ ಪಂಚಾಯತಿಯ ಸೇವೆಗಳು ಹಾಗೂ ಜಿಲ್ಲಾ ಪಂಚಾಯತಿಯ ಅಧೀನಕ್ಕೆ ಒಳಪಡುವ ವಿವಿಧ ಇಲಾಖೆಗಳಿಗೆ ಸಂಬ0ಧಿಸಿದ ಕುಂದು ಕೊರ
ಕುಡಿಯುವ ನೀರಿನ ಕುಂದುಕೊರತೆ ಸಹಾಯವಾಣಿ : ಸಿಇಒ ಈಶ್ವರ್ ಕುಮಾರ್


ರಾಯಚೂರು, 23 ಅಕ್ಟೋಬರ್(ಹಿ.ಸ.) :

ಆ್ಯಂಕರ್ : ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜು, ಸ್ವಚ್ಛತೆ ಮತ್ತು ನೈರ್ಮಲ್ಯ ಮೂಲಭೂತ ಸೌಕರ್ಯ ನಿರ್ವಹಣೆ ಹಾಗೂ ಗ್ರಾಮ ಪಂಚಾಯತಿಯ ಸೇವೆಗಳು ಹಾಗೂ ಜಿಲ್ಲಾ ಪಂಚಾಯತಿಯ ಅಧೀನಕ್ಕೆ ಒಳಪಡುವ ವಿವಿಧ ಇಲಾಖೆಗಳಿಗೆ ಸಂಬ0ಧಿಸಿದ ಕುಂದು ಕೊರತೆಗಳ ಬಗ್ಗೆ ದೂರವಾಣಿ ಮುಖಾಂತರ ಅಹವಾಲುಗಳನ್ನು ಸಲ್ಲಿಸುವುದಕ್ಕಾಗಿ ಜಿಲ್ಲಾ ಪಂಚಾಯತಿ ಕಾರ್ಯಾಲಯದಲ್ಲಿ ಸಾರ್ವಜನಿಕರ ಕುಂದು ಕೊರತೆ ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು, ಸೇವೆಯ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ್ ಕುಮಾರ್ ಕಾಂದೂ ಅವರು ತಿಳಿಸಿದ್ದಾರೆ.

ಸಹಾಯವಾಣಿ ಸಂಖ್ಯೆ 08532-230539ಗೆ ಸಾರ್ವಜನಿಕರು ಬೆಳಿಗ್ಗೆ 10ಗಂಟೆಯಿ0ದ ಸಂಜೆ 5:30ರವರೆಗೆ ದೂರವಾಣಿ ಮುಖಾಂತರ ಕರೆ ಮಾಡಬಹುದಾಗಿದೆ. ಹಾಗೂ ಇಮೇಲ್ ವಿಳಾಸ: zprcr.pgc@gmail.com ಮುಖಾಂತರ ಮನವಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande