
ಬಳ್ಳಾರಿ, 23 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ-ಸ0ಸ್ಥೆಗಳ ಸಹಯೋಗದೊಂದಿಗೆ 2025-26ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಅ.28 ರಂದು ಬೆಳಿಗ್ಗೆ 10.30 ಕ್ಕೆ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮ0ದಿರದಲ್ಲಿ ಆಯೋಜಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯ ಯುವಕ, ಯುವತಿಯರು, ಸಂಘ-ಸ0ಸ್ಥೆಗಳ ಪ್ರತಿನಿಧಿಗಳು, ಶಾಲಾ/ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಬಹುದು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಿಗಳು ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಸ್ಪರ್ಧಾಳುಗಳು 15 ರಿಂದ 29 ವರ್ಷದೊಳಗಿನವರಾಗಿರಬೇಕು.
ಸ್ಪರ್ಧೆಗಳ ವಿವರ :
ಜಾನಪದ ನೃತ್ಯ(10 ಜನರ ಗುಂಪು): ಸ್ಪರ್ಧೆಯಲ್ಲಿ ಯಾವುದೇ ಕ್ಯಾಸೆಟ್, ಪೆನ್‌ಡ್ರೆöÊವ್, ಸಿಡಿ ಹಾಡುಗಳಿಗೆ ಅವಕಾಶ ಇರುವುದಿಲ್ಲ, 15 ನಿಮಿಷ ಮಾತ್ರ.
ಜಾನಪದ ಗೀತೆ(10 ಜನರ ಗುಂಪು): ಸ್ಪರ್ಧೆಯಲ್ಲಿ ಯಾವುದೇ ಸಿನಿಮಾ ಹಾಡುಗಳನ್ನು ಪ್ರಸ್ತುತಪಡಿಸುವಂತಿಲ್ಲ ಹಾಗೂ ಹಾಡುಗಳಲ್ಲಿ ಸಿನಿಮಾ ಮಿಶ್ರಣಕ್ಕೆ ಅವಕಾಶವಿರುವುದಿಲ್ಲ, 7 ನಿಮಿಷ ಮಾತ್ರ ಕಾಲಾವಕಾಶ.
ಕಥೆ ಬರೆಯುವುದು(ಒಬ್ಬರಿಗೆ ಅವಕಾಶ): 1000 ಪದಗಳಿಗೆ ಮೀರದಂತೆ ಕನ್ನಡ, ಆಂಗ್ಲ, ಹಿಂದಿ ಭಾಷೆಯಲ್ಲಿರಬೇಕು, 60 ನಿಮಿಷ ಮಾತ್ರ ಕಾಲಾವಕಾಶ.
ಚಿತ್ರಕಲೆ(ಒಬ್ಬರಿಗೆ ಅವಕಾಶ): ಎ3 ಸೈಜ್ (ಥೀಮ್: ನಶೆ ಮುಕ್ತ ಯುವ/ಯೂತ್ ಫಾರ್ ಹೆಲ್ದಿ ಸ್ಟೆöÊಲ್), 90 ನಿಮಿಷ ಮಾತ್ರ ಕಾಲಾವಕಾಶ.
ಭಾಷಣ(ಒಬ್ಬರಿಗೆ): ವಿಷಯ-ಭಾರತದಲ್ಲಿ ತುರ್ತು ಪರಿಸ್ಥಿತಿಯ ಅವಧಿ ಮತ್ತು ಸಂವಿಧಾನ ಉಲ್ಲಂಘನೆ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡುವುದು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು. ಭಾಷಣವು 7 ನಿಮಿಷಗಳ ಅವಧಿಯಲ್ಲಿ ಕನ್ನಡ, ಆಂಗ್ಲ, ಹಿಂದಿ ಭಾಷೆಯಲ್ಲಿ ಪ್ರಸ್ತುತಪಡಿಸಬೇಕು.
ಕವಿತೆ ಬರೆಯುವುದು(ಒಬ್ಬರಿಗೆ): 1000 ಪದ ಮೀರದಂತೆ ಕನ್ನಡ, ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿರಬೇಕು, ಅವಧಿ 60 ನಿಮಿಷ.
ವಿಜ್ಞಾನ ಮೇಳ(ಪ್ರತಿ ಗುಂಪಿಗೆ 5 ಜನ): ನಾವಿನ್ಯಾತ ವಿಜ್ಞಾನ ಮೇಳ ಪ್ರದರ್ಶನ.
ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಆನ್‌ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಿದಲ್ಲಿ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ.
ಭಾಗವಹಿಸಲು ಇಚ್ಚಿಸುವ ಸ್ಪರ್ಧಾರ್ಥಿಗಳು ಅ.27 ರೊಳಗಾಗಿ ತಮ್ಮ ಹೆಸರುಗಳನ್ನು ಆನ್ ಲೈನ್ ಕ್ಯೂರ್ ಕೋಡ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾ ಕ್ರೀಡಾಂಗಣದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯ ಅಥವಾ ಮೊ.8971238689, 7026401500 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್