ರಾಯಚೂರು, 19 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮನೆಯಿಂದ ಹೊರ ಹೋಗಿ ಬರುತ್ತೇನೆ ಎಂದು ಹೇಳಿ ದಿನಾಂಕ 14-10-2025 ರಂದು ಬೆಳಿಗ್ಗೆ ಹೇಳಿ ಹೊರಹೋದ ರಾಯಚೂರು ನಗರದ ಮಂಗಳವಾರಪೇಟೆಯ ಪರಕೋಟಾ ಮೊಹಮ್ಮದ್ ಶೋಯೆಬ್ ತಂದೆ ಮೊಹಮ್ಮದ್ ಪಾಷಾ (19) ಮನೆಗೆ ಬಂದಿಲ್ಲ. ಹುಡುಕಾಡಲಾಗಿ ಪತ್ತೆಯಾಗಿಲ್ಲ ಎಂದು ಪ್ರಕರಣ ದಾಖಲಾಗಿದೆ.
ಈತನು ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. 5.6 ಅಡಿ ಎತ್ತರ, ಕಪ್ಪು ಕೂದಲಿನ ಬಣ್ಣ, ಕೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಕ್ರೀಮ್ ಬಣ್ಣದ ಅರ್ಧ ತೋಳಿನ ಅಂಗಿ ಮತ್ತು ಬ್ರೌನ್ ಕಲರ್ ಫಾರ್ಮುಲಾ ಪ್ಯಾಂಟ್ ಧರಿಸಿದ್ದಾನೆ. ಕನ್ನಡ ಮತ್ತು ಹಿಂದಿ ಮಾತನಾಡುತ್ತಾನೆ.
ಈತನ ಬಗ್ಗೆ ಯಾವುದಾದರೂ ಉಪಯುಕ್ತ ಮಾಹಿತಿ ಸಿಕ್ಕಲ್ಲಿ ಸದರ್ ಬಜಾರ್ ಪೊಲೀಸ್ ಠಾಣೆ ರಾಯಚೂರು ದೂರವಾಣಿ ಸಂ: 08532-226148 ಅಥವಾ ಆರಕ್ಷಕ ನಿರೀಕ್ಷಕರು ಸದರ್ ಬಜಾರ್ ಪೊಲೀಸ್ ಠಾಣೆ ರಾಯಚೂರು ಮೊ.ನಂ. 9480803830 ವಿಳಾಸಕ್ಕೆ ಮಾಹಿತಿ ನೀಡಲು ಸದರ್ ಬಜಾರ್ ಪೊಲೀಸ್ ಠಾಣೆಯ ಆರಕ್ಷಕರ ನಿರೀಕ್ಷಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್