

ಗಂಗಾವತಿ, 13 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಏಷಿಯಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿರುವ ಮರಳಿ ಪ್ರಗತಿನಗರ್ ಭಾರತೀಯ ಬಾಲ ವಿದ್ಯಾಲಯ ಸ್ಕೂಲ್‌ನ ವಿದ್ಯಾರ್ಥಿ ಕುಮಾರ್ ಮಹೇಶ್ ಜಿ ಅವರು ಅತ್ಯಂತ ಶ್ರೇಷ್ಠ ಸಾಧನೆಯ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸುವ ಪ್ರಸಿದ್ಧ ಸಂಸ್ಥೆಯಾದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಆಯೋಜಿಸಿದ್ದ ನಾನು ವಿಜ್ಞಾನಿ 2025” ಎಂಬ ಶೀರ್ಷಿಕೆಯಡಿ ದೊಡ್ಡಬಳ್ಳಾಪುರದಲ್ಲಿ
ನಡೆದ 8 ದಿನಗಳ ಟೆಲಿಸ್ಕೋಪ್ (ದೂರದರ್ಶಕ) ತಯಾರಿಕಾ ತರಬೇತಿಯಲ್ಲಿ ಭಾಗವಹಿಸಿ ಈ ಸಾಧನೆ ಮಾಡಿದ್ದಾರೆ.
ಕುಮಾರ್ ಮಹೇಶ್ ಜಿ ಸೇರಿದಂತೆ ಒಟ್ಟು 152 ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಪಾಲ್ಗೊಂಡು ಕೇವಲ 8 ದಿನಗಳಲ್ಲಿ ಟೆಲಿಸ್ಕೋಪ್ ನಿರ್ಮಿಸಿ ಇಂಡಿಯಾ, ಏಷಿಯಾ ಹಾಗೂ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ಗಳಲ್ಲಿ ದಾಖಲಾಗುವ ಗೌರವವನ್ನು ಗಳಿಸಿದ್ದಾರೆ.
ಇಂತಹ ಶ್ರೇಷ್ಠ ಸಾಧನೆ ಮಾಡಿದ ಕುಮಾರ್ ಮಹೇಶ್ ಜಿ, ಶಿಕ್ಷಕರು ಮಧು ನಾಯರ್ ಇವರಿಗೆ ಮುಖೋಪಾಧ್ಯಯರಾದ ಹೇಮಂತ ರಾಜ. ಕೆ. ಇನ್ನಿತರ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್