ಗಂಗಾವತಿ, 13 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂ ಸೇವಾ ಸಂಘ ಆರ್‌ಎಸ್‌ಎಸ್‌ನ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಹೇರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರ್ ಎಸ್ ಎಸ್ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭಾರತಾಂಬೆ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂರ್ಯನಾರಾಯಣ ಇವರು ವಹಿಸಿಕೊಂಡಿದ್ದರು.
ವಿಶೇಷ ಬೋಧಕರು ನಾಗರಾಜ್ ಗುತ್ತೇದಾರ್ ವಕೀಲರು ಮಾತನಾಡಿ ರಾಷ್ಟೀಯ ಸ್ವಯಂಸೇವಕ ಸಂಘದ ನೂರು ವರ್ಷಗಳ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ. 1925 ರ ವಿಜಯದಶಮಿಯಂದು ಆರಂಭಗೊಂಡ ಆರ್‌ಎಸ್‌ಎಸ್‌ನ ಈ ಪಯಣವು ರಾಷ್ಟ್ರೀಯ ಹಿತಾಸಕ್ತಿಗಾಗಿ ತ್ಯಾಗ, ಶಿಸ್ತು, ಸೇವೆ ಮತ್ತು ಸಮರ್ಪಣೆಯ ಜೀವಂತ ಕಥೆಯಾಗಿದೆ ಎಂದು ಹೇಳಿದರು.
ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ 60ಕ್ಕೂ ಹೆಚ್ಚು ಸ್ವಯಂ ಸೇವಕರು ಗಣವೇಷಧಾರಿಗಳಾಗಿ ಅತ್ಯಂತ ಶಿಸ್ತಿನಿಂದ ನಮಸ್ತೇ ಸದಾ ವತ್ಸಲೇ ಗೀತೆಯನ್ನು ಹಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹನುಮೇಶ್ ಗೌಡ ಮಾಲಿಪಾಟೀಲ್, ಅಯ್ಯನ ಗೌಡ ಹೇರೂರು, ಅಂಬರೀಶ್ ಬೇವಿನಾಳ, ಶಿವು, ಹನುಮೇಶ್ ಗೌಡ, ಕನಕಪ್ಪ ಮೇಟಿ, ಹೇರೂರು ಗ್ರಾಮದ ಗುರು ಹಿರಿಯರು ಮುಖಂಡರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್