ಬಳ್ಳಾರಿ, 13 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ವ್ಯಾಪ್ತಿಗೆ ಬರುವ 11ಕೆವಿ ಫೀಡರ್‍ನಿಂದ ವಿದ್ಯುತ್ ಸರಬರಾಜಾಗುವ ಎಫ್-09 ರ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ನೆಹರು ಕಾಲೋನಿ, ಎಸ್.ಎನ್. ಪೇಟೆ 1, 2, 4, 5, 6ನೇ ಅಡ್ಡ ರಸ್ತೆ, ಶಂಕರ್ ಕಾಲೋನಿ, ಡಿ.ಆರ್ ಗ್ರೌಂಡ್, ಕೂಲ್ ಕಾರ್ನರ್, ಡಬಲ್ ರಸ್ತೆ, ಕೋಲಾಂಚಾಲಂ ಕಾಂಪೌಂಡ್, ರಾಯಲ್ ಸರ್ಕಲ್, ಗಾಂಧಿ ಭವನ, ಸಿಎಂಸಿ, ಅಂಬಲಿ ಬಾಗ್, ತಾಲ್ಲೂಕು ಕಚೇರಿ, ಡಿಸಿ ಕಚೇರಿ, ಸ್ಟೇಷನ್ ರೋಡ್ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹಾಗಾಗಿ ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಕಾರ್ಯನಿರ್ವಾಹಕ ಅಭಿಯಂತರರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್