ಉತ್ತರ ಪ್ರದೇಶದಲ್ಲಿ ಮುಸ್ಲಿಂರ ವಿರುದ್ಧ ದಬ್ಬಾಳಿಕೆ ಸಹಿಸಲ್ಲ
ವಿಜಯಪುರ, 13 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಉತ್ತರ ಪ್ರದೇಶದಲ್ಲಿ ಮುಸ್ಲಿಂರ ವಿರುದ್ಧ ದಬ್ಬಾಳಿಕೆ, ದೌರ್ಜನ್ಯ ವ್ಯಾಪಕವಾಗಿದೆ, ಅನ್ಯಾಯದ ಸುರಿಮಳೆಯಾಗುತ್ತಿದೆ, ನಾನೇನಾದರೂ ಉತ್ತರ ಪ್ರದೇಶದಲ್ಲಿ ಇದ್ದಿದ್ದರೆ ಮೋದಿ ಅವರನ್ನು ಸುಮ್ಮನೆ ಬಿಡುತ್ತಿರಲಿಲ್ಲ ಎಂದು ವಿಜಯಪುರದಲ್ಲಿ ನ್ಯಾಯವಾದಿ ಹಾಗೂ ಅಲ
ಪ್ರತಿಭಟನೆ


ವಿಜಯಪುರ, 13 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಉತ್ತರ ಪ್ರದೇಶದಲ್ಲಿ ಮುಸ್ಲಿಂರ ವಿರುದ್ಧ ದಬ್ಬಾಳಿಕೆ, ದೌರ್ಜನ್ಯ ವ್ಯಾಪಕವಾಗಿದೆ, ಅನ್ಯಾಯದ ಸುರಿಮಳೆಯಾಗುತ್ತಿದೆ, ನಾನೇನಾದರೂ ಉತ್ತರ ಪ್ರದೇಶದಲ್ಲಿ ಇದ್ದಿದ್ದರೆ ಮೋದಿ ಅವರನ್ನು ಸುಮ್ಮನೆ ಬಿಡುತ್ತಿರಲಿಲ್ಲ ಎಂದು ವಿಜಯಪುರದಲ್ಲಿ ನ್ಯಾಯವಾದಿ ಹಾಗೂ ಅಲ್ಪಸಂಖ್ಯಾತ ಮುಖಂಡ ಎಲ್.ಎಲ್. ಉಸ್ತಾದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಷೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರೆ ನೀಡಲಾಗಿರುವ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವ ಸಂದರ್ಭದಲ್ಲಿ ಎಲ್.ಎಲ್. ಉಸ್ತಾದ ಅವರು ಪ್ರಧಾನಿ ಮೋದಿ ಅವರ ವಿರುದ್ಧ ಪ್ರಬಲವ ವಾಗ್ದಾಳಿ ನಡೆಸಿದರು. ಉತ್ತರ ಪ್ರದೇಶದಲ್ಲಿ ಮುಸ್ಲಿಂರ ವಿರುದ್ಧ ಸಾಕಷ್ಟು ಹಿಂಸೆ ನಡೆಯುತ್ತಿದೆ, ಐ ಲವ್ ಯೂ ಮೊಹ್ಮದ್ ಎಂದರೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ, ನಮಗಿಷ್ಟದ ಧರ್ಮವನ್ನು ಪಾಲಿಸುವ, ಆಚರಣೆ ಮಾಡುವ, ಪ್ರಸಾರ ಮಾಡುವ ಹಕ್ಕನ್ನು ಭಾರತೀಯ ಸಂವಿಧಾನ ಕರುಣಿಸಿದೆ, ಆದರೆ ಅದನ್ನು ಹತ್ತಿಕ್ಕುವ ಕೆಲಸವನ್ನು ಯುಪಿ ಸರ್ಕಾರ ಮಾಡುತ್ತಿದೆ, ಅದಕ್ಕೆ ಮೋದಿ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ, ನಾನು ಅಲ್ಲಿದ್ದರೆ ಅವರನ್ನು ಸುಮ್ಮನೆ ಬಿಡುತ್ತಿರಲಿಲ್ಲ, ಮುಸ್ಲಿಂರ ವಿರುದ್ಧ ವಿನಾಕಾರಣ ದ್ವೇಷ ಸಾಧಿಸಲಾಗುತ್ತಿದೆ, ಅದನ್ನು ನೋಡಿ ನನ್ನ ಮನದಲ್ಲಿ ನೋವು ತುಂಬಿಕೊಂಡಿದೆ ಎಂದು ಉಸ್ತಾದ ಹೇಳಿದರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಮೇಲೆ ವಕೀಲ ಶೂ ಎಸೆದಿದ್ದಾರೆ. ಕಾನೂನು ಅರಿತುಕೊಂಡು ಈ ರೀತಿ ಮಾಡುವುದು ಸರಿಯೇ? ಆದರೂ ಆತನ ಮೇಲೆ ಯಾವ ಕ್ರಮಗಳನ್ನು ಕೈಗೊಂಡಿಲ್ಲ, ಕೂಡಲೇ ಆರೋಪಿಯನ್ನು ಬಂಧಿಸಿ ಗಲ್ಲಿಗೇರಿಸಿ ಎಂದು ಉಸ್ತಾದ ಹೇಳಿದರು.

ದಲಿತ, ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಸಲಾಗುತ್ತಿದೆ. ಸಿಜೆಐ ಅವರ ಮೇಲೆ ಷೂ ಎಸೆದು ಮಾಡಿರುವುದು ಕೇವಲ ಅವರಿಗೆ ಮಾಡಿದ ಅಪಮಾನವಲ್ಲ ಬದಲಿಗೆ ಸಂವಿಧಾನಕ್ಕೆ ಮಾಡಿರುವ ಅಪಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಭವ್ಯ ಭಾರತ ಶಾಂತಿಯ ತೋಟ, ಆದರೆ ಶಾಂತಿಯ ತೋಟವನ್ನು ಹಾಳು ಮಾಡಲು ಮೋದಿ ಅಂತಹ ಶಕ್ತಿಗಳು ಪ್ರಯತ್ನಿಸುತ್ತಿವೆ, ಅವರ ಸರ್ವಾಧಿಕಾರಿ ನಡೆ ಸರಿಯೇ ಎಂದು ಪ್ರಶ್ನಿಸಿದರು.

ಯುವ ಮುಖಂಡ ಜೈನುಲಾಬುದ್ದೀನ್ ಪೀರಾ ಮಾತನಾಡಿ, ಸಿಜೆಐ ಅವರ ಮೇಲೆ ಷೂ ಎಸೆದ ಆರೋಪಿಯ ಬಂಧನಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು ಇದೇ ದಿ.೧೬ ರಂದು ನೀಡಿರುವ ಬಂದ್‌ಗೆ ಸಂಪೂರ್ಣ ಬೆಂಬಲವಿದ್ದು, ವ್ಯಾಪಾರಸ್ಥರು, ಕೃಷಿ ಮಾರುಕಟ್ಟೆ, ಚಿನ್ನಾಭರಣ ಅಂಗಡಿಯವರು ಬಂದ್ ಗೆ ಬೆಂಬಲ ನೀಡಿ ಯಶಸ್ವಿಗೊಳಿಸಬೇಕು ಎಂದರು.

ಮುಖಂಡ ರಫೀಕ್‌ಅಹ್ಮದ್ ಖಾಣೆ ಮಾತನಾಡಿ, ದಲಿತರು, ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ನಾವು ಸರ್ವ ವಿಧದಲ್ಲಿಯೂ ಹೋರಾಟಕ್ಕೆ ಇಳಿಯತ್ತೇವೆ, ಸಿಜೆಐ ಮೇಲೆ ಶೂ ಎಸೆದ ಆರೋಪಿಯನ್ನು ವೈಭವಿಕರಿಸುವಂತ ರೀತಿ ನೋಡಿದರೆ ನಾಚಿಗೆ ಬರುತ್ತಿದೆ ಎಂದರು.

ಮುಖಂಡರಾದ ಬಂದೇನವಾಜ್ ಮಹಾಬರಿ, ನ್ಯಾಯವಾದಿ ಎ.ಎಂ. ತಾಂಬೋಳಿ, ಮೊಹಮ್ಮದ್ ಪಟೇಲ ಬಗಲಿ, ಇರ್ಫಾನ್ ಶೇಖ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ತದನಂತರ ಉತ್ತರ ಪ್ರದೇಶ ಸಿಎಂ ವಿರುದ್ಧ ಪ್ರತಿಭಟನೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande