ಮಹಾರಾಷ್ಟ್ರ ಮಾದರಿಯಲ್ಲಿ ಪ್ಯಾಕೇಜ್ ಒದಗಿಸಿ : ನಡಹಳ್ಳಿ
ವಿಜಯಪುರ, 13 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಬೆಳೆ ಸಮೀಕ್ಷೆ ಅತ್ಯಂತ ನಿರ್ಲಕ್ಷ್ಯದಿಂದ ನಡೆಯುತ್ತಿದೆ, ಪರಿಹಾರ ಹಣವೂ ಸಹ ಅತ್ಯಲ್ಪ. ಹೀಗಾಗಿ ಕೂಡಲೇ ಮಹಾರಾಷ್ಟ್ರ ಮಾದರಿಯಲ್ಲಿ ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ
ಮಹಾರಾಷ್ಟ್ರ ಮಾದರಿಯಲ್ಲಿ ಪ್ಯಾಕೇಜ್ ಒದಗಿಸಿ : ನಡಹಳ್ಳಿ


ವಿಜಯಪುರ, 13 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಬೆಳೆ ಸಮೀಕ್ಷೆ ಅತ್ಯಂತ ನಿರ್ಲಕ್ಷ್ಯದಿಂದ ನಡೆಯುತ್ತಿದೆ, ಪರಿಹಾರ ಹಣವೂ ಸಹ ಅತ್ಯಲ್ಪ. ಹೀಗಾಗಿ ಕೂಡಲೇ ಮಹಾರಾಷ್ಟ್ರ ಮಾದರಿಯಲ್ಲಿ ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ವಿಜಯಪುರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದ ಬೆಳೆಹಾನಿಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಪರಿಹಾರ ಅತ್ಯಂತ ಅತ್ಯಲ್ಪ, ರೈತರಿಗೆ ಯಾವ ಪ್ರಯೋಜನಕ್ಕೂ ಬಾರದಾಗಿದೆ, ರಾಜ್ಯ ಸರ್ಕಾರ ಕೇವಲ ೨೫೦೦ ಕೋಟಿ ರೂ. ಮಾತ್ರ ಪರಿಹಾರ ಬಿಡುಗಡೆ ಮಾಡಿದೆ, ಆದರೆ ನೆರೆಯ ಮಹಾರಾಷ್ಟ್ರ ಸರ್ಕಾರ ೩೧ ಸಾವಿರ ಕೋಟಿ ರೂ. ಮಹಾರಾಷ್ಟ್ರ ಪರಿಹಾರದ ಪ್ಯಾಕೇಜ್ ನೀಡಿದೆ. ಅಲ್ಲದೇ, ಪ್ರತಿ ಹೆಕ್ಟೇರ್ ಗೆ ೩೭ ಸಾವಿರ ಬೆಳೆ ಪರಿಹಾರ ಘೋಷಿಸಿದೆ, ಇದೇ ಮಾದರಿಯಲ್ಲಿ ನಮ್ಮ ಸರ್ಕಾರ ಸಹ ಈ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ೭.೬೦ ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಕಬ್ಬು ಹೊರತು ಪಡಿಸಿ ಎಲ್ಲ ಬೆಳೆಗಳು ಹಾನಿಯಾಗಿವೆ. ಹೀಗಾಗಿ ಸಂಪೂರ್ಣವಾಗಿ ಬೆಳೆ ಹಾನಿಯಾಗಿದೆ ಎಂದು ಘೋಷಣೆ ಮಾಡಿದರೆ, ಕೇಂದ್ರ ಎನ್‌ಡಿಆರ್‌ಎಫ್, ವಿಮೆ ಕಂಪನಿಗಳಿಂದ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಎಂದು ನಡಹಳ್ಳಿ ಹೇಳಿದರು.

ಎರಡು ಗ್ರಾಮ ಪಂಚಾಯತಿಗೆ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಇದ್ದಾರೆ, ಇದರಿಂದ ಸಮೀಕ್ಷೆ ಸಮರ್ಪಕವಾಗಿ ನಡೆಯಲು ಸಾಧ್ಯವೇ? ಸಮೀಕ್ಷೆ ಹೆಸರಲ್ಲಿ ರೈತರ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಸರ್ಕಾರದ ಈ ನಿರ್ಲಕ್ಷö್ಯ ನೀತಿಯ ವಿರುದ್ಧ ಬಿಜೆಪಿ ಪ್ರಬಲ ಜನಾಂದೋಲನ ರೂಪಿಸಲಿದ್ದು, ನಾಳೆಯಿಂದಲೇ ಸಿಂದಗಿಯಿಂದ ಬೃಹತ್ ಹೋರಾಟ ಆರಂಭವಾಗಲಿದೆ, ಪ್ರತಿ ತಾಲೂಕು ಕೇಂದ್ರದ ಮುಂದೆ ಸಾಂಕೇತಿಕವಾಗಿ ಹೋರಾಟ ಮಾಡಲಾಗುತ್ತದೆ. ಅಲ್ಲದೇ, ಹೋಬಳಿ ಸೇರಿ ಎಲ್ಲ ಹಂತದಲ್ಲೂ ನಿರಂತರವಾಗಿ ಹೋರಾಟ, ಧರಣಿ ನಡೆಸಲಾಗುತ್ತದೆ ಎಂದರು.

ಕರ್ನಾಟಕಕ್ಕೆ ಅತಿವೃಷ್ಟಿ, ಅನಾವೃಷ್ಟಿ ಹೊಸದಲ್ಲ. ಕಾಂಗ್ರೆಸ್, ಬಿಜೆಪಿ ಸರ್ಕಾರದ ಅವಧಿಯಲ್ಲೂ ಪ್ರಕೃತಿ ವಿಕೋಪವಾಗಿ ನಡೆದಿವೆ. ಬಿಜೆಪಿ ಸರ್ಕಾರದಲ್ಲಿ ಜನರು ಹಾಗೂ ರೈತರಿಗೆ ಸ್ಪಂದಿಸಿ ಪರಿಹಾರ ಒದಗಿಸುವ ಕೆಲಸ ಸಹ ನಡೆದಿತ್ತು. ೨೦೦೯ರಲ್ಲಿ ಪ್ರವಾಹ ಸಂದರ್ಭದಲ್ಲಿ ಅನೇಕ ಹಳ್ಳಿಗಳ ಸ್ಥಳಾಂತರ ಮಾಡಿರುವ ಕಾರ್ಯವನ್ನೂ ಮಾಡಲಾಗಿದೆ. ೨೦೨೦ರಲ್ಲಿ ಮಳೆ ಸಂದರ್ಭದಲ್ಲೂ ಬಿಜೆಪಿ ಸರ್ಕಾರ ರೈತರಿಗೆ ಉತ್ತಮವಾಗಿ ಸ್ಪಂದಿಸಿತ್ತು. ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ ಎಂದರು.

ಈಗ ಮಳೆ ಪ್ರಾರಂಭವಾಗಿ ಮೂರು ತಿಂಗಳು ಕಳೆದಿದೆ. ಹತ್ತು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ. ಸಿಎಂ ಖುದ್ದಾಗಿ ಒಂದೇ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಮೂರು ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ಮಾಡಿರುವುದಾಗಿ ಹೇಳಿ ಸಿಎಂ ಹೇಳಿದ್ದಾರೆ, ಇದು ಕಾಟಾಚಾರಕ್ಕಷ್ಟೇ ಸೀಮಿತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ೩೮.೪೦ ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಆದರೆ, ಸರ್ಕಾರ ೧೦ ಲಕ್ಷ ಹೆಕ್ಟೇರ್ ಬೆಳೆ ನಷ್ಡವಾಗಿದೆ ಎಂದು ಹೇಳಿದೆ. ಆದರೆ, ವಾಸ್ತವವಾಗಿ ಹೆಚ್ಚಿನ ಬೆಳೆ ನಷ್ಟವಾಗಿದೆ ಎಂದರು.

ಈ ಬಾರಿ ರೈತರು ಸಂಕಷ್ಟಕ್ಕೆ ಸಿಲುಕಿರುವಷ್ಟು ಯಾವತ್ತೂ ಸಿಲುಕಿರಲಿಲ್ಲ. ವಿಕೋಪದಲ್ಲಿ ರೈತರು ಮೃತಪಟ್ಟರೂ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿಗಳಾಗಲಿ ಅಥವಾ ತಾಲೂಕುಮಟ್ಟದ ಅಧಿಕಾರಿಗಳು ಭೇಟಿ ಮಾಡಿ ಅವರ ಕುಟುಂಬಕ್ಕೆ ಸಾಂತ್ವನ ಸಹ ಹೇಳಿಲ್ಲ ಎಂದರು.

ನಾವು ಅವರೊಂದಿಗೆ ಧರಣಿ ಕೂರುತ್ತೇವೆ

ಸಂಪೂರ್ಣವಾಗಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಘೋಷಣೆ ಮಾಡಲಿ. ಎನ್ ಡಿಆರ್ ಎಫ್ ಪ್ರಕಾರ ಕೇಂದ್ರ ಸರ್ಕಾರ ಪರಿಹಾರ ಕೊಡದೇ ಹೋದರೆ ನಾವು ಸಹ ಸಚಿವರೊಂದಿಗೆ ಧರಣಿ ಕೊಡಲು ಸಿದ್ದರಿದ್ದೇವೆ ಎಂದು ನಡಹಳ್ಳಿ ಘೋಷಿಸಿದರು.

ಬೆಳೆ ಹಾನಿಯಾಗಿರುವ ಬಗ್ಗೆ ಸರಿಯಾದ ವರದಿ ತಯಾರಿಸಿ ಕೇಂದ್ರಕ್ಕೆ ಕಳುಹಿಸಿದರೆ, ಪರಿಹಾರ ಕಲ್ಪಿಸಲು ನಾವು ಸಹ ಒತ್ತಡ ತರಲು ಸಹಕಾರಿಯಾಗಲಿದೆ. ಅಧ್ಯಯನ ತಂಡ ಕಳುಹಿಸಲು ಸಹ ರಾಜ್ಯ ಸರ್ಕಾರ ಇದುವರೆಗೂ ಪತ್ರ ಬರೆದಿಲ್ಲ ಎಂದು ನಡಹಳ್ಳಿ ದೂರಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande