ಹಿರಿಯ ಸಾಹಿತಿಗಳ ಸ್ಮರಣೆಯೇ ಸಾಹಿತ್ಯ ಸೇವೆ
ಕೊಪ್ಪಳ, 13 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕಡಲ ತೀರಭಾರ್ಗವ ಡಾ: ಶಿವರಾಮ ಕಾರಂತರು ಸಾಹಿತ್ಯ, ಬರವಣಿಗೆಯ ಮೂಲಕ ಜನಪರ, ಪರಿಸರದ ಹೋರಾಟಗಳನ್ನು ಬೆಳೆಸಿ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಕಾಣುವ ವಿಶಿಷ್ಟ ವ್ಯಕ್ತಿತ್ವದ ಸಾಹಿತಿಗಳಾಗಿದ್ದರು ಎಂದು ಪೆÇ್ರ. ಶರಣಬಸಪ್ಪ ಬಿಳಿಯಲೆ ಅವರು ಅಭಿಪ್ರಾಯ
ಹಿರಿಯ ಸಾಹಿತಿಗಳ ಸ್ಮರಣೆಯೇ ಸಾಹಿತ್ಯ ಸೇವೆ


ಹಿರಿಯ ಸಾಹಿತಿಗಳ ಸ್ಮರಣೆಯೇ ಸಾಹಿತ್ಯ ಸೇವೆ


ಕೊಪ್ಪಳ, 13 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕಡಲ ತೀರಭಾರ್ಗವ ಡಾ: ಶಿವರಾಮ ಕಾರಂತರು ಸಾಹಿತ್ಯ, ಬರವಣಿಗೆಯ ಮೂಲಕ ಜನಪರ, ಪರಿಸರದ ಹೋರಾಟಗಳನ್ನು ಬೆಳೆಸಿ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಕಾಣುವ ವಿಶಿಷ್ಟ ವ್ಯಕ್ತಿತ್ವದ ಸಾಹಿತಿಗಳಾಗಿದ್ದರು ಎಂದು ಪೆÇ್ರ. ಶರಣಬಸಪ್ಪ ಬಿಳಿಯಲೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳು ಏರ್ಪಡಿಸಿದ್ದ ಡಾ. ಕೆ. ಶಿವರಾಮ ಕಾರಂತರ ಜನ್ಮ ದಿನಾಚರಣೆ, ಕಥೆಗಾರ ಡಾ. ಮೊಗಳ್ಳಿ ಗಣೇಶ, ನಿವೃತ್ತ ಉಪನ್ಯಾಸಕಿ - ಲೇಖಕರು ಆಗಿದ್ದ ಡಾ: ಪಾರ್ವತಿ ಪೂಜಾರ್ ಅವರ `ನುಡಿ ನಮನ'ದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಡಾ. ಕೋಟ ಶಿವರಾಮ ಕಾರಂತರು ದೈನಂದಿನ ಅನುಭವಗಳನ್ನು ಅಕ್ಷರ ರೂಪಕ್ಕೆ ತಂದು ಜನತೆಗೆ ಹಂಚಿದರು. ಕಥೆಗಾರ ಡಾ: ಮೊಗಳ್ಳಿ ಗಣೇಶ್ ಅವರ ಕೃತಿಗಳು, ಡಾ ಪಾರ್ವತಿ ಅವರ ಕೃತಿಗಳು ಜನಪರ, ಶೋಷಿತರ ಪರವಾಗಿಯೇ ಇದ್ದವು ಎಂದು ಸ್ಮರಿಸಿದರು.

ನಿವೃತ್ತ ಶಿಕ್ಷಕ, ಸಾಹಿತಿ ಎಸ್.ಎಂ. ಕಂಬಾಳಿಮಠ ಅವರು, ಡಾ. ಕೆ. ಶಿವರಾಮ ಕಾರಂತ ಅವರು ಕೇವಲ ಸಾಹಿತ್ಯ ಮಾತ್ರವಲ್ಲ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಸಾಹಿತ್ಯ ಬರೆದಿದ್ದಾರೆ.

ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿದು ಯಕ್ಷಗಾನವನ್ನು ಪ್ರದರ್ಶನ ಮಾಡಿದ ಬಹುಮುಖ ದೈತ್ಯ ಪ್ರತಿಭೆ. ಡಾ: ಮೊಗಳ್ಳಿ ಗಣೇಶ, ಡಾ: ಪಾರ್ವತಿ ಪೂಜಾರ ಅವರದ್ದು ವಿಶೇಷ ಬರಹಗಳು ಜನಮನ್ನಣೆಯನ್ನು ಪಡೆದಿವೆ ಎಂದರು.

ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರುದ್ರಪ್ಪ ಭಂಡಾರಿ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮಹಾಂತೇಶ ನೆಲಾಗಣಿ, ತಾಲೂಕಾ ಉಪಾಧ್ಯಕ್ಷ ಮೈಲಾರಪ್ಪ ವಂಕಿ ಅವರು ವೇದಿಕೆಯಲ್ಲಿದ್ದರು.

ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ, ಮಾಧ್ಯಮ ಉಸ್ತುವಾರಿ ಡಾ. ಬಸವರಾಜ ಎಸ್. ಗಡಾದ ಅವರು ಕಾರ್ಯಕ್ರಮ ನಿರೂಪಿಸಿದರು. ಶಿವಪ್ರಸಾದ ಹಾದಿಮನಿ ಅವರು ಸ್ವಾಗತಿಸಿ, ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande