ಕಟ್ಟಡ ಕಾರ್ಮಿಕರಿಗೆ ನಾನಾ ಸೇಪ್ಟಿ ಕಿಟ್ ವಿತರಣೆ
ಬಳ್ಳಾರಿ, 13 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನಾನಾ ಸೇಪ್ಟಿಕಿಟ್ ವಿತರಿಸಲು ಉದ್ದೇಶಿಸಲಾಗಿದ್ದು, ಅರ್ಹ ಕಟ್ಟಡ ಕಾರ್ಮಿಕರು ಆಯಾ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ನೋಂದಾಯಿಸಕೊಳ್ಳಬೇಕು ಎಂದು ಜ
ಕಟ್ಟಡ ಕಾರ್ಮಿಕರಿಗೆ ನಾನಾ ಸೇಪ್ಟಿ ಕಿಟ್ ವಿತರಣೆ


ಬಳ್ಳಾರಿ, 13 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನಾನಾ ಸೇಪ್ಟಿಕಿಟ್ ವಿತರಿಸಲು ಉದ್ದೇಶಿಸಲಾಗಿದ್ದು, ಅರ್ಹ ಕಟ್ಟಡ ಕಾರ್ಮಿಕರು ಆಯಾ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ನೋಂದಾಯಿಸಕೊಳ್ಳಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಜಿ.ಖೈನೂರು ಅವರು ತಿಳಿಸಿದ್ದಾರೆ.

ಜೇಷ್ಠತೆ ಆಧಾರದಲ್ಲಿ ಮೇಸನ್ ಕಿಟ್, ವೆಲ್ಡಿಂಗ್ ಕಿಟ್, ಕಾರ್ಪೇಂಟರ್ ಕಿಟ್, ಪ್ಲಂಬರ್ ಕಿಟ್, ಪೇಂಟರ್ ಕಿಟ್ ಮತ್ತು ಎಲೆಕ್ಟ್ರಿಷಿಯನ್ ಕಿಟ್ ಸೇರಿದಂತೆ ವಿವಿಧ ಸೇಪ್ಟಿ ಕಿಟ್‍ಗಳನ್ನು ವಿತರಿಸಲಾಗುವುದು.

ಅರ್ಹರು ತಮ್ಮ ಆಧಾರ್‍ಕಾರ್ಡ್, ಮೊಬೈಲ್ ಸಂಖ್ಯೆ ಹಾಗೂ ನೋಂದಾಯಿತ ಕಟ್ಟಡ ಕಾರ್ಮಿಕರ ಚಾಲ್ತಿಯಲ್ಲಿರುವ ಗುರುತಿನ ಚೀಟಿ ಇತರೆ ದಾಖಲೆಗಳೊಂದಿಗೆ ತಮ್ಮ ವ್ಯಾಪ್ತಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಅ.31 ರೊಳಗಾಗಿ ನೋಂದಾಯಿಸಿಕೊಳ್ಳಬೇಕು. ಅವಧಿ ಮುಗಿದು ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿ ಹಾಗೂ ಕೌಲ್‍ಬಜಾರ್‍ನ ಮೊದಲನೇ ಗೇಟ್‍ನ ಮೊಹಮ್ಮದೀಯ ಕಾಲೇಜಿನ ಹಿಂಭಾಗದ ಬಳ್ಳಾರಿ ಉಪವಿಭಾಗದ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande