ಬಳ್ಳಾರಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ
ಬಳ್ಳಾರಿ, 13 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಪ್ರಕ್ರಿಯೆಗೆ ಬಳ್ಳಾರಿ ಜಿಲ್ಲೆಯಲ್ಲಿ ಸೋಮವಾರ ಚಾಲನೆ ಸಿಕ್ಕಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಚುನಾವಣಾ ಅಧಿಕಾರಿ ಆಗಿರುವ ಹಿರಿಯ ಪತ್ರಕರ್ತ ಎಸ್. ನಾಗರಾಜ್ ಅವರು ಜಿಲ್
ಬಳ್ಳಾರಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ


ಬಳ್ಳಾರಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ


ಬಳ್ಳಾರಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ


Bellary: Karnataka Working Journalists Association elections


ಬಳ್ಳಾರಿ, 13 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಪ್ರಕ್ರಿಯೆಗೆ ಬಳ್ಳಾರಿ ಜಿಲ್ಲೆಯಲ್ಲಿ ಸೋಮವಾರ ಚಾಲನೆ ಸಿಕ್ಕಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಚುನಾವಣಾ ಅಧಿಕಾರಿ ಆಗಿರುವ ಹಿರಿಯ ಪತ್ರಕರ್ತ ಎಸ್. ನಾಗರಾಜ್ ಅವರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇರುವ ಪತ್ರಿಕಾ ಭವನದಲ್ಲಿ ಅರ್ಹ ಪತ್ರಕರ್ತರ ಸದಸ್ಯರ ಮತದಾರರ ಪಟ್ಟಿ, ಚುನಾವಣಾ ಅಹರ್ತೆ ಮತ್ತು ನಿಯಮಗಳ ಅಧಿಸೂಚನೆಯನ್ನು ಪ್ರಕಟಿಸಿ, ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದ್ದಾರೆ.

ಬಳ್ಳಾರಿ ಜಿಲ್ಲಾ ಸಮಿತಿಗೆ ಅಧ್ಯಕ್ಷ-01, ಉಪಾಧ್ಯಕ್ಷರು -03, ಪ್ರಧಾನ ಕಾರ್ಯದರ್ಶಿ-01, ಕಾರ್ಯದರ್ಶಿಗಳು- 03, ಖಜಾಂಚಿ-01 ಹಾಗು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು-01 ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶವಿದೆ. ಅಲ್ಲದೆ, ಕಾರ್ಯಕಾರಿ ಸಮಿತಿಗೆ 15 ಸದಸ್ಯರನ್ನು ಆಯ್ಕೆ ಮಾಡಬೇಕಿದೆ.

ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಗಳು ಜಿಲ್ಲಾ ಕೇಂದ್ರ ಸ್ಥಾನಕ್ಕೆ ಮೀಸಲು. ನಾಮಪತ್ರ ಸಲ್ಲಿಸಲು ಅಕ್ಟೋಬರ್ 19 ಕ್ಕೆ ಆರಂಭವಾಗಿ ಅಕ್ಟೋಬರ್ 27 ರವರೆಗೆ ಅವಕಾಶವಿದೆ. ಅಕ್ಟೋಬರ್ 28 ರಂದು ನಾಮಪತ್ರಗಳ ಪರಿಶೀಲನೆ. ಅಕ್ಟೋಬರ್ 30 ರಂದು ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನ. ಅಗತ್ಯ ಇರುವ ಹುದ್ದೆಗಳಿಗೆ ನವೆಂಬರ್ 9ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಅಧಿಕಾರಿ ಎಸ್. ನಾಗರಾಜ್ ಅವರು ತಿಳಿಸಿದ್ದಾರೆ.

ಕಾರ್ಯಕಾರಿಗೆ ಸ್ಪಧಿಸಲು ಆಸಕ್ತರು ಸತತವಾಗಿ ನಾಲ್ಕು ವರ್ಷ ಸಂಘದ ಸದಸ್ಯರಾಗಿರಬೇಕು. ಪದಾಧಿಕಾರಿಯಾಗಲು ಒಂದು ಬಾರಿ ಕಾರ್ಯಕಾರಿ ಸಮಿತಿಯಲ್ಲಿ ಪೂರ್ಣಾವಧಿಗೆ ಚುನಾಯಿತ ಸದಸ್ಯರಾಗಿರಬೇಕು. ಅಧ್ಯಕ್ಷ ಸ್ಥಾನಕ್ಕೆ 5 ಸಾವಿರ ರೂಪಾಯಿ, ಉಳಿದ ಎಲ್ಲಾ ಪದಾಧಿಕಾರಿಗಳು ಹಾಗು ರಾಜ್ಯ ಸಮಿತಿ ಸದಸ್ಯರಿಗೆ 4 ಸಾವಿರ ರೂಪಾಯಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಿಗೆ 2 ಸಾವಿರ ರೂಪಾಯಿ ನಾಮಪತ್ರ ಸಲ್ಲಿಕೆ ಶುಲ್ಕವನ್ನು ಪಾವತಿಸಬೇಕಿದೆ.

ಸರ್ವ ಸದಸ್ಯರ ಸಭೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ನೂತನ ಪದಾಧಿಕಾರಿಗಳ ಚುನಾವಣೆಯನ್ನು ಸರ್ವ ಸಮ್ಮತದಿಂದ ನಡೆಸಲು ಅಕ್ಟೋಬರ್ 15ರ ಬುಧವಾರ ಬೆಳಿಗ್ಗೆ 10.30 ಕ್ಕೆ ಪತ್ರಿಕಾ ಭವನದಲ್ಲಿ ಸಂಘದ ಅರ್ಹ ಸದಸ್ಯರ ಸಭೆಯನ್ನು ಕರೆಯಲಾಗಿದೆ. ಅರ್ಹ ಸ್ಪರ್ಧಾಕಾಂಕ್ಷಿಗಳು ಮತ್ತು ಮತದಾರರು ಸಭೆಗೆ ಆಗಮಿಸಿ, ಸರ್ವಾನುಮತದ ಆಯ್ಕೆ ಕುರಿತಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್. ವೀರಭದ್ರಗೌಡ ಅವರು ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande