
ಬಳ್ಳಾರಿ, 30 ಸೆಪ್ಟೆಂಬರ್ (ಹಿ.ಸ.)
ಬಳ್ಳಾರಿ ತಾಲೂಕಿನ ವೇಣಿವೀರಾಪುರ ಗ್ರಾಮದ ವ್ಯಾಪ್ತಿಯಲ್ಲಿ ಮೆ.ಹೊತ್ತೂರ್ ಇಸ್ಪಾತ್ ಪ್ರೆವೇಟ್ ಲಿಮಿಟೆಡ್ ವತಿಯಿಂದ ವಾರ್ಷಿಕ 1.0 ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯದ ‘ವೆಟ್ ಮಿನರಲ್ ಬೆನಿಫಿಶಿಯೇಷನ್' ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಪರಿಸರ ಸಾರ್ವಜನಿಕ ವಿಚಾರಣೆ (ಆಲಿಕೆ ಸಭೆ) ಅಕ್ಟೋಬರ್ 31ರಂದು ನಡೆಯಲಿದೆ.
ವೇಣಿವೀರಾಪುರ ಗ್ರಾಮದ ಸರ್ವೆ ನಂ. 287/ಎ, 287/ಬಿ, 289/1, 289/2, 290/1, 290/2, 290/3 ಮತ್ತು 290/4 ರ ಒಟ್ಟು 34.50 ಎಕರೆ (ಭೂಪರಿವರ್ತಿತ ಪಟ್ಟಾ ಜಮೀನು) ಪ್ರದೇಶದಲ್ಲಿ ಈ ಘಟಕವನ್ನು ಸ್ಥಾಪಿಸಲು ಕಂಪನಿಯು ಪ್ರಸ್ತಾವನೆ ಸಲ್ಲಿಸಿದೆ.
ಪರಿಸರ ಆಘಾತ ಅಧ್ಯಯನ ಅಧಿಸೂಚನೆ ಅನ್ವಯ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 31 ರಂದು ಬೆಳಿಗ್ಗೆ 11 ಗಂಟೆಗೆ ಯೋಜನಾ ಪ್ರದೇಶದಲ್ಲೇ ಸಾರ್ವಜನಿಕ ಆಲಿಕೆ ಸಭೆಯನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳ್ಳಾರಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್