
ಕೋಲಾರ, 29 ಸೆಪ್ಟೆಂಬರ್ (ಹಿ.ಸ) :
ಕೋಲಾರ ನಗರದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಿದೆ. ಮಳೆ ಬಂದರೆ ರಸ್ತೆಗಳು ನೀರಿನಲ್ಲಿ ಮುಳುಗುತ್ತವೆ. ಪಾದಚಾರಿಗಳು ಮತ್ತು ವಾಹನ ಸವಾರರು ಓಡಾಡಲು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಗಾಂಧಿನಗರ ಹೆಚ್.ಎನ್.ಮೂರ್ತಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರ ನಗರ ಜಿಲ್ಲಾ ಕೇಂದ್ರ ಪ್ರದೇಶವಾಗಿದ್ದು, ಒಂದು ದೊಡ್ಡ ಹಳ್ಳಿಯಂತಿದೆ. ನಗರದ ಮುಖ್ಯ ರಸ್ತೆಗಳ ಬದಿಯಲ್ಲಿ ಮಣ್ಣಿನ ರಾಶಿಗಳನ್ನು ಹಾಕಿ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಬಂಗಾರಪೇಟೆ ರಸ್ತೆಯಿಂದ ಚಿಕ್ಕಬಳ್ಳಾಪುರ ರಸ್ತೆ ಮತ್ತು ಎಪಿಎಂಸಿ ಮಾರುಕಟ್ಟೆಯಿಂದ ಕೋರ್ಟ್ ಸರ್ಕಲ್ ವರೆಗಿನ ಕೇವಲ ಎರಡು ಮುಖ್ಯ ರಸ್ತೆಗಳಾಗಿದ್ದು, ಅವುಗಳ ಎಲ್ಲಾ ಪಾದಚಾರಿ ಮಾರ್ಗಗಳೂ ಸಂಪೂರ್ಣವಾಗಿ ಒತ್ತುವರಿಯಾಗಿವೆ ಎಂದು ಆರೋಪಿಸಿದ್ದಾರೆ.
ಫುಟ್ಪಾತ್ ಅಂಡಿಗಳು, ಕೆಟ್ಟುನಿಂತ ವಾಹನಗಳು, ತರಕಾರಿ ಅಂಗಡಿಗಳು, ಹಣ್ಣು ಹಂಪಲು ಅಂಗಡಿಗಳು, ಅದರಲ್ಲೂ ಎಂ.ಜಿ.ರಸ್ತೆಯಲ್ಲಿ ಸಹ ಪದಚಾರಿ ಮಾರ್ಗವು ಒತ್ತುವರಿಯಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು ರಸ್ತೆಯಲ್ಲಿಯೇ ನಡೆದಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ದೂಳಿನ ಹಾವಳಿಯಿಂದ ಜನತೆ ರೋಸಿಹೋಗಿದ್ದಾರೆ. ಸ್ವಚ್ಛತಾ ಕಾರ್ಯಗಳು ಕೇವಲ ಕಾಟಾಚಾರಕ್ಕೆ ನಡೆದಿವೆ ಎಂದು ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿಗಳ ನಿವಾಸದ ಎದುರೇ ಮಳೆ ಬಂದರೆ ಯು.ಜಿ.ಡಿ. ಚರಂಡಿ ನೀರು ರಸ್ತೆ ಮೇಲೆ ಹರಿದು ಕೋಲಾರಮ್ಮ ಕೆರೆ ಸೇರುತ್ತಿದೆ. ಆದರೇ ಅದೇ ಮಾರ್ಗವಾಗಿ ಸಂಚರಿಸುವ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದಕ್ಕೆ ಜನಸಾಮಾನ್ಯರು ಛೀಮಾರಿ ಹಾಕುತ್ತಿದ್ದಾರೆ. ಕೇವಲ ೧೦ ಅಡಿ ಅಗಲವಿರುವ ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಹೆಸರಿನಲ್ಲಿ ದಂಡ ವಸೂಲಿ ಮಾಡುವುದರಲ್ಲಿ ನಿರತರಾಗಿದ್ದಾರೆ. ರಸ್ತೆ ಬದಿಗಳಲ್ಲಿ ವಾಹನಗಳ ಅಸ್ತವ್ಯಸ್ತ ನಿಲುಗಡೆಯಿಂದ, ರಸ್ತೆಯಲ್ಲೇ ಮಣ್ಣು ರಾಶಿಗಳಿಂದ, ಫುಟ್ಪಾತ್ ಒತ್ತುವರಿಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದರೂ ಯಾರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಕೀಯ ನಾಯಕರು ಸಾವಿರಾರು ಕೋಟಿ ಅನುದಾನ ತಂದಿದ್ದೇವೆAದು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಗರ ಮಾತ್ರ ಅಭಿವೃದ್ಧಿ ಕಾಣದೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಮಳೆ ಬಂದರೆ ಚರಂಡಿಗಳಲ್ಲಿ ನೀರು ಹರಿಯುತ್ತಿಲ್ಲ. ಕೇವಲ ರಸ್ತೆ ಮೇಲೆ ನೀರು ಹರಿದು ಕೆರೆಯನ್ನು ಸೇರುತ್ತಿದೆ. ಕಾರಣ ಕಾಲುವೆಗಳಲ್ಲಿ ಕಸ, ಮಣ್ಣು ಪ್ಲಾಸ್ಟಿಕ್ ತ್ಯಾಜ್ಯಗಳು ಸೇರಿಕೊಂಡು ನೀರು ಚರಂಡಿಗಳಲ್ಲಿ ಹರಿಯುತ್ತಿಲ್ಲ. ಕೋಲಾರ ನಗರಸಭೆಯು ಸ್ವಚ್ಚತಾ ಕಾರ್ಯವು ಕಾಟಾಚಾರಕ್ಕೆ ಮಾಡುತ್ತಿದ್ದಾರೆ.
ಕೋಲಾರ ನಗರದ ಅಂತರಗAಗೆಯಿAದ ಕೋಲಾರಮ್ಮ ಕೆರೆಗೆ ಹೋರುವ ಕಾಲುವೆಯನ್ನು ಸಿಮೆಂಟ್ನಿAದ ನಿರ್ಮಾಣ ಮಾಡಿಲಾಗಿದೆ. ಆ ಕಾಲುವೆಯು ಗಿಡಗಂಟಿಗಳು ಮತ್ತು ಮಣ್ಣಿನಿಂದ ತುಂಬಿಕೊAಡು ಕಾಡಿನಿಂತೆ ಕಾಣುತ್ತದೆ. ಇಲ್ಲಿ ಕಾಲುವೆ ಇದೆಯೋ ಎಂಬುದನ್ನು ಹುಡುಕಬೇಕಾಗಿದೆ ಆದರೂ ನಗರಸಭೆಯ ಅಧಿಕಾರಿಗಳು ಕಾಲುವೆಯನ್ನು ಸ್ವಚ್ಚಗೊಳಿಸುವಲ್ಲಿ ನಿರ್ಲಕ್ಷö್ಯತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕ್ಕಪಕ್ಕದ ಮನೆಗಳಿಗೆ ಹಾವುಗಳು ಮತ್ತು ವಿಷಪೂರಿತ ಜಂತುಗಳು ಹೋಗುತ್ತಿವೆ. ಆದರೂ ಇದರ ಬಗ್ಗೆ ತಲೆ ಕಡೆಸಿಕೊಳ್ಳದ ನಗರಸಭೆಯ ಅಧಿಕಾರಿಗಳನ್ನು ಜನರು ಛೀಮಾರಿ ಹಾಕುತ್ತಿದ್ದಾರೆ ಈ ಸಮಸ್ಯೆಗೆ ಸಂಬ0ಧಿಸಿದ0ತೆ ಸಂಬAಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವಾಗ ಸ್ಪಂದಿಸುತ್ತಾರೆ? ಎಂದು ಗಾಂಧಿನಗರ ಹೆಚ್.ಎನ್.ಮೂರ್ತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರಸಭೆಯ ಜನಪ್ರತಿನಿಧಿಗಳ ಅವಧಿ ಮುಗಿದಿದ್ದು, ಜನಸಾಮಾನ್ಯರ ಕಷ್ಟಗಳು ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ಜಿಲ್ಲಾಧಿಕಾರಿಗಳೇ ನಗರಸಭೆಯ ಆಡಳಿತಾಧಿಕಾರಿಗಳಾಗಿದ್ದು ಅವರೂ ಸಹ ನಗರದ ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲ. ಸಣ್ಣ ನೀರಾವರಿ ಇಲಾಖೆಯವರು ಕೋಲಾರಮ್ಮ ಕೆರೆಯನ್ನು ಸ್ವಚ್ಚಗೊಳಿಸುವಲ್ಲಿ ವಿಫಲರಾಗಿದ್ದಾರೆ. ಕೋಲಾರಮ್ಮ ಕೆರೆಯ ಅಚ್ಚುಕಟ್ಟು ಭಾಗದ ಪಕ್ಕದಲ್ಲಿರುವ ಮೋಚಿಪಾಳ್ಯ, ಕನಕನಪಾಳ್ಯ, ಕುರುಬರಪೇಟೆ, ಕೋಟೆ, ಕೋಲಾರಮ್ಮ ಬಡಾವಣೆ, ಗಾಂಧಿನಗರ, ಅಂಬೇಡ್ಕರ್ ಮಹಿಳಾ ವಿದ್ಯಾರ್ಥಿನಿಲಯ, ಮಹಿಳಾ ಕಾಲೇಜು ಮತ್ತು ಅಕ್ಕಪಕ್ಕದಲ್ಲಿ ವಾಸವಾಗಿರುವ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದೆ. ಕಾಲುವೆಯಲ್ಲಿ ಇರುವ ಗಿಡಗಂಟಿಗಳನ್ನು ತೆರವುಗೊಳಿಸಿ ನೀರು ಹರಿಯಲು ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಗಾಂಧಿನಗರ ಹೆಚ್.ಎನ್.ಮೂರ್ತಿ ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್