ಬಂಗಾರು ಎನ್. ಶಿವಸಿದ್ದಪ್ಪ ನಿಧನ
ಬಳ್ಳಾರಿ, 29 ಸೆಪ್ಟೆಂಬರ್ (ಹಿ.ಸ.) ಬಳ್ಳಾರಿ ನಗರದ ಕುರುಬ ಜನಾಂಗದ ಮುಖಂಡರು, ಇಂದಿರಾಗಾಂಧಿ ಅವರ ಕುಟುಂಬದ ಆಪ್ತರೂ ಆಗಿ ಜಿಲ್ಲಾ ಕಾಂಗ್ರೆಸ್ನಲ್ಲಿ ವಿವಿಧ ಹುದ್ದೆಗಳನ್ನು ಹೊಂದುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದ ಬಂಗಾರು ಎನ್. ಶಿವಸಿದ್ದಪ್ಪ (80) ಅವರು ಮಂಗಳವಾರ ಮಧ್ಯಾಹ್ನ ನಿಧನರಾಗಿ
Bangaru N. Shivasiddappa passes away


ಬಳ್ಳಾರಿ, 29 ಸೆಪ್ಟೆಂಬರ್ (ಹಿ.ಸ.)

ಬಳ್ಳಾರಿ ನಗರದ ಕುರುಬ ಜನಾಂಗದ ಮುಖಂಡರು, ಇಂದಿರಾಗಾಂಧಿ ಅವರ ಕುಟುಂಬದ ಆಪ್ತರೂ ಆಗಿ ಜಿಲ್ಲಾ ಕಾಂಗ್ರೆಸ್ನಲ್ಲಿ ವಿವಿಧ ಹುದ್ದೆಗಳನ್ನು ಹೊಂದುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದ ಬಂಗಾರು ಎನ್. ಶಿವಸಿದ್ದಪ್ಪ (80) ಅವರು ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಮೃತರು ಪುತ್ರ, ಪುತ್ರಿ, ಅಳಿಯ - ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧುವರ್ಗ, ಆಪ್ತರು ಮತ್ತು ಮಿತ್ರರನ್ನು ಅಗಲಿದ್ದಾರೆ. ಮೃತರ ಮಕ್ಕಳು ವಿದೇಶದಿಂದ ಆಗಮಿಸಬೇಕಾಗಿದ್ದು, ಮೃತರ ಅಂತ್ಯಕ್ರಿಯೆಯು ಗುರುವಾರ ಮಧ್ಯಾಹ್ನ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande