ಅಶೋಕ್ ಸಿಂಘಾಲ್ ಜಯಂತಿ: ಕೇಂದ್ರ ಸಚಿವರಿಂದ ಗೌರವ ನಮನ
ನವದೆಹಲಿ, 27 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ಮಾಜಿ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರ ಜಯಂತಿ ಅಂಗವಾಗಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಸೇರಿದಂತೆ ಹಲವು ಗಣ್ಯರು ಭಾನುವಾರ ಅವರಿಗೆ ಗೌರವ ನಮ
प्रतीकात्मक


ನವದೆಹಲಿ, 27 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ಮಾಜಿ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರ ಜಯಂತಿ ಅಂಗವಾಗಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಸೇರಿದಂತೆ ಹಲವು ಗಣ್ಯರು ಭಾನುವಾರ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಅಮಿತ್ ಶಾ ಅವರು ಸಾಮಾಜಿಕ ಜಾಲತಾಣದ ಮೂಲಕ ಅಶೋಕ್ ಸಿಂಘಾಲ್ ಅವರನ್ನು ಸ್ಮರಿಸಿ, ಸರಳತೆ ಮತ್ತು ಧರ್ಮನಿಷ್ಠೆಯ ಪ್ರತೀಕವಾಗಿದ್ದ ಅವರು ತಮ್ಮ ಎಲ್ಲ ಸುಖಗಳನ್ನು ತ್ಯಜಿಸಿ ರಾಷ್ಟ್ರ, ಸಂಸ್ಕೃತಿ ಹಾಗೂ ವಿಚಾರಧಾರೆಗೆ ನಿಸ್ವಾರ್ಥವಾಗಿ ಜೀವನವನ್ನು ಸಮರ್ಪಿಸಿದ್ದರು ಎಂದು ಹೇಳಿದರು. ತುರ್ತು ಪರಿಸ್ಥಿತಿಯ ವಿರುದ್ಧ ಧ್ವನಿ ಎತ್ತುವುದರಿಂದ ಹಿಡಿದು ಶ್ರೀರಾಮ ಜನ್ಮಭೂಮಿ ಆಂದೋಲನಕ್ಕೆ ವೇಗ ನೀಡುವವರೆಗೆ ಅವರ ಹೋರಾಟ ಮತ್ತು ಸಮರ್ಪಣೆ ಸದಾ ಮಾರ್ಗದರ್ಶನ ನೀಡಲಿದೆ ಎಂದು ತಿಳಿಸಿದರು.

ಜೆ.ಪಿ. ನಡ್ಡಾ ಅವರು, ರಾಷ್ಟ್ರದ ಸಾಂಸ್ಕೃತಿಕ ಸ್ವಾಭಿಮಾನ ರಕ್ಷಣೆಗಾಗಿ ಅಶೋಕ್ ಸಿಂಘಾಲ್ ತಮ್ಮ ಸಂಪೂರ್ಣ ಜೀವನವನ್ನು ಸಮರ್ಪಿಸಿದ್ದರು ಎಂದು ಹೇಳಿದರು. ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಮಾರ್ಗ ಸುಗಮಗೊಳಿಸುವಲ್ಲಿ ಅವರ ಕೊಡುಗೆ ಹಾಗೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆಗಾಗಿ ನಡೆಸಿದ ಹೋರಾಟ ಅವಿಸ್ಮರಣೀಯ ಎಂದು ಬಣ್ಣಿಸಿದರು. ಅವರ ತ್ಯಾಗ, ತಪಸ್ಸು, ಧೈರ್ಯ ಮತ್ತು ಅಚಲ ಸಂಕಲ್ಪ ಮುಂದಿನ ಪೀಳಿಗೆಗೆ ರಾಷ್ಟ್ರಸೇವೆಯ ಮಾರ್ಗದಲ್ಲಿ ಸದಾ ಸ್ಫೂರ್ತಿ ನೀಡಲಿದೆ ಎಂದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು, ರಾಮ ಜನ್ಮಭೂಮಿ ಆಂದೋಲನದ ಪ್ರಮುಖ ನಾಯಕರಾಗಿದ್ದ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಮಾಜಿ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಶೋಕ್ ಸಿಂಘಾಲ್ ಅವರು ಮಾತೃಭೂಮಿಯ ಸೇವೆ ಮತ್ತು ಧರ್ಮರಕ್ಷಣೆಗಾಗಿ ಮಾಡಿದ ಅಪೂರ್ವ ಕಾರ್ಯ ಹಾಗೂ ಪ್ರಯತ್ನಗಳಿಗಾಗಿ ಯುಗಯುಗಾಂತರಗಳವರೆಗೆ ಸ್ಮರಿಸಲ್ಪಡಲಿದ್ದಾರೆ ಎಂದು ಹೇಳಿದರು.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು, ಅಶೋಕ್ ಸಿಂಘಾಲ್ ತಮ್ಮ ಸಂಪೂರ್ಣ ಜೀವನವನ್ನು ಭಾರತಮಾತೆಯ ಸೇವೆಗೆ ಸಮರ್ಪಿಸಿದ್ದರು ಎಂದು ಹೇಳಿದರು. ಶ್ರೀರಾಮ ಜನ್ಮಭೂಮಿ ಆಂದೋಲನದಿಂದ ಹಿಡಿದು ಸಮಾಜ ಜಾಗೃತಿಯವರೆಗೆ ಅವರ ದೃಢ ನಾಯಕತ್ವ ಮತ್ತು ಅಚಲ ಸಂಕಲ್ಪ ರಾಷ್ಟ್ರದ ಪುನರುತ್ಥಾನದಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದರು. ತಮ್ಮ ಪರಂಪರೆಯ ಬಗ್ಗೆ ಜಾಗೃತರಾಗಿದ್ದು, ರಾಷ್ಟ್ರಹಿತಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುವ ಹಾಗೂ ಮೌಲ್ಯಗಳ ಬಗ್ಗೆ ದೃಢವಾಗಿರುವ ಮಾರ್ಗವನ್ನು ಅವರ ಜೀವನ ತೋರಿಸುತ್ತದೆ ಎಂದರು.

ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಅವರು, ಶ್ರೀರಾಮ ಮಂದಿರ ನಿರ್ಮಾಣದ ಸಂಕಲ್ಪವನ್ನು ಜನಾಂದೋಲನವನ್ನಾಗಿ ರೂಪಿಸುವಲ್ಲಿ ಅಶೋಕ್ ಸಿಂಘಾಲ್ ಅವರ ತ್ಯಾಗ, ತಪಸ್ಸು ಮತ್ತು ಅಪೂರ್ವ ಕೊಡುಗೆ ಸದಾ ಸ್ಮರಣೀಯವಾಗಿರುತ್ತದೆ ಎಂದು ಹೇಳಿದರು. ರಾಷ್ಟ್ರ ಮತ್ತು ಧರ್ಮದ ಸೇವೆಗೆ ಸಮರ್ಪಿತವಾಗಿದ್ದ ಅವರ ಸಂಪೂರ್ಣ ಜೀವನ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande