ಜಲ ಕ್ಷೇತ್ರದಲ್ಲಿ ಭಾರತ–ನೆದರ್ಲ್ಯಾಂಡ್ ನಡುವೆ ಕಾರ್ಯತಂತ್ರದ ಪಾಲುದಾರಿಕೆ ಬಲಪಡಿಸಲು ಸಭೆ
ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಜಲ ಕ್ಷೇತ್ರದಲ್ಲಿ ಭಾರತ ಮತ್ತು ನೆದರ್‌ಲ್ಯಾಂಡ್‌ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಕುರಿತು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅಧ್ಯಕ್ಷತೆಯಲ್ಲಿ ಇಂದು ದ್ವಿಪಕ್ಷೀಯ ಸಭೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಭಾರತ ಮಂಟಪಂ ಆವರಣದಲ್ಲಿ ಸಭೆ ನಡೆ
केंद्रीय जल शक्तिमंत्री सीआर पाटिल। फोटो - इंटरनेट मीडिया


ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಜಲ ಕ್ಷೇತ್ರದಲ್ಲಿ ಭಾರತ ಮತ್ತು ನೆದರ್‌ಲ್ಯಾಂಡ್‌ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಕುರಿತು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅಧ್ಯಕ್ಷತೆಯಲ್ಲಿ ಇಂದು ದ್ವಿಪಕ್ಷೀಯ ಸಭೆ ನಡೆಯಲಿದೆ.

ಮಧ್ಯಾಹ್ನ 3 ಗಂಟೆಗೆ ಭಾರತ ಮಂಟಪಂ ಆವರಣದಲ್ಲಿ ಸಭೆ ನಡೆಯಲಿದ್ದು, ಜಲ ಕ್ಷೇತ್ರದಲ್ಲಿ ಭಾರತ–ನೆದರ್‌ಲ್ಯಾಂಡ್‌ ಕಾರ್ಯತಂತ್ರದ ಪಾಲುದಾರಿಕೆ ಹಾಗೂ ಅತ್ಯುತ್ತಮತಾ ಕೇಂದ್ರ ಸ್ಥಾಪನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಜಲಶಕ್ತಿ ಸಚಿವಾಲಯ ತಿಳಿಸಿದೆ.

ಈ ಸಂದರ್ಭದಲ್ಲಿ ಕೇಂದ್ರ ಜಲ ಆಯೋಗ, ಗುಜರಾತ್ ಸರ್ಕಾರದ ಕಲ್ಪಸರ್ ಇಲಾಖೆ ಹಾಗೂ ನೆದರ್‌ಲ್ಯಾಂಡ್‌ನ ಜಲ ಸಂಶೋಧನಾ ಸಂಸ್ಥೆ ಡೆಲ್ಟಾರೆಸ್ ನಡುವೆ ಯೋಜನೆಗಳ ತಾಂತ್ರಿಕ ಸಹಕಾರಕ್ಕಾಗಿ ತ್ರಿಪಕ್ಷೀಯ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ.

ಇದಲ್ಲದೆ, ಕೇಂದ್ರ ಜಲ ಆಯೋಗ, ಗುಜರಾತ್ ಸರ್ಕಾರದ ಕಲ್ಪಸರ್ ಇಲಾಖೆ ಹಾಗೂ ನೆದರ್‌ಲ್ಯಾಂಡ್‌ನ ಡೆಲ್ಫ್ಟ್ ತಾಂತ್ರಿಕ ವಿಶ್ವವಿದ್ಯಾಲಯದ ನಡುವೆ ಸಾಮರ್ಥ್ಯ ವೃದ್ಧಿ ಮತ್ತು ತರಬೇತಿಗಾಗಿ ಮತ್ತೊಂದು ತ್ರಿಪಕ್ಷೀಯ ತಿಳಿವಳಿಕೆ ಒಪ್ಪಂದಕ್ಕೂ ಸಹಿ ಹಾಕಲಾಗುತ್ತದೆ.

ಸೆ.22ರಿಂದ ಭಾರತ ಮಂಟಪಂನಲ್ಲಿ ಆರಂಭಗೊಂಡಿರುವ ಐದು ದಿನಗಳ ಭಾರತ ಅಂತಾರಾಷ್ಟ್ರೀಯ ಜಲ ಸಪ್ತಾಹ–2026ರ ಅಂಗವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಜಲ ನಿರ್ವಹಣೆ, ತಾಂತ್ರಿಕ ಸಹಕಾರ ಮತ್ತು ಸಾಮರ್ಥ್ಯ ವೃದ್ಧಿ ಕ್ಷೇತ್ರಗಳಲ್ಲಿ ಭಾರತ–ನೆದರ್‌ಲ್ಯಾಂಡ್‌ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದಕ್ಕೆ ಕಾರ್ಯಕ್ರಮದಲ್ಲಿ ಒತ್ತು ನೀಡಲಾಗುತ್ತದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande