ಡಾ.ಆನಂದ ಪಾಂಡುರಂಗಿ ನಿಧನಕ್ಕೆ ಸಚಿವ ಪ್ರಲ್ಹಾದ ಜೋಶಿ ಕಂಬನಿ
ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಕರ್ನಾಟಕದ ಹಿರಿಯ ಮನೋ ವೈದ್ಯರು, ಪ್ರೇರಣಾದಾಯಿ ವಾಗ್ಮಿಗಳು ಮತ್ತು ಅಂಕಣಕಾರರೂ ಆಗಿದ್ದ ಧಾರವಾಡದ ಡಾ.ಆನಂದ ಪಾಂಡುರಂಗಿ ಅವರ ನಿಧನದ ಸುದ್ದಿ ತಿಳಿದು ತೀವ್ರ ಆಘಾತ ಮತ್ತು ದುಃಖವಾಯಿತೆಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಕಂಬನಿ ಮಿಡಿದಿದ್ದಾರೆ
ಪ್ರಹ್ಲಾದ ಜೋಶಿ ಸಂಗ್ರಹ ಚಿತ್ರ


ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಕರ್ನಾಟಕದ ಹಿರಿಯ ಮನೋ ವೈದ್ಯರು, ಪ್ರೇರಣಾದಾಯಿ ವಾಗ್ಮಿಗಳು ಮತ್ತು ಅಂಕಣಕಾರರೂ ಆಗಿದ್ದ ಧಾರವಾಡದ ಡಾ.ಆನಂದ ಪಾಂಡುರಂಗಿ ಅವರ ನಿಧನದ ಸುದ್ದಿ ತಿಳಿದು ತೀವ್ರ ಆಘಾತ ಮತ್ತು ದುಃಖವಾಯಿತೆಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಕಂಬನಿ ಮಿಡಿದಿದ್ದಾರೆ.

ವೈಯಕ್ತಕಿವಾಗಿ ತಮ್ಮ ಮತ್ತು ಡಾ.ಪಾಂಡುರಂಗಿ ಅವರ ಕುಟುಂಬದ ನಡುವೆ ಅತ್ಯಂತ ಆತ್ಮೀಯ, ಅನ್ಯೋನ್ಯ ಸಂಬಂಧವಿತ್ತು. ಸದಾ ಕಾಲ ನನ್ನ ಆರೋಗ್ಯ, ಹಿತವನ್ನು ಬಯಸಿದ್ದರೆಂದು ನೆನೆದ ಸಚಿವರು, ಸಂಘ ಪರಿವಾರದ ಜೊತೆಗೂ ಉತ್ತಮ ಸಂಪರ್ಕ ಹೊಂದಿ ಸದಾ ಕಾಲ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಸ್ಮರಿಸಿದ್ದಾರೆ.

ಡಾ.ಆನಂದ ಅವರು ಒಬ್ಬ ಅತ್ಯಾಪ್ತ ಸ್ನೇಹಿತರಲ್ಲೊಬ್ಬರಾಗಿ ಅನೇಕ ವಿಷಯದಲ್ಲಿ ತನಗೆ ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದರು. ನಾನಿಂದು ಒಬ್ಬ ಅತ್ಯುತ್ತಮ ಮಾರ್ಗದರ್ಶಕ, ಹಿತೈಷಿ, ಹಿರಿಯ ಸ್ನೇಹಿತನನ್ನು ಕಳೆದುಕೊಂಡ ದುಃಖ ಆವರಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಡಾ.ಆನಂದ ‎ಪಾಂಡುರಂಗಿ ಅವರು ದಶಕಗಳ ಕಾಲ ವೈದ್ಯಕೀಯ ಸೇವೆಯಲ್ಲಿ ತೊಡಗಿ, ಸಮಾಜದಲ್ಲಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಿ, ಯುವ ಜನರಲ್ಲಿ, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಆತ್ಮವಿಶ್ವಾಸ ಬೆಳೆಸುವಲ್ಲಿ ಸ್ಮರಣೀಯ ಕೊಡುಗೆ ನೀಡಿದ್ದರು. ಇವರ ಅಗಲಿಕೆ ಸಮಾಜಕ್ಕಿಂದು ಅಪಾರ ನಷ್ಟ ಉಂಟುಮಾಡಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ ಸಚಿವ ಜೋಶಿ.

ಡಾ.ಆನಂದ ಪಾಂಡುರಂಗಿ ಅವರು ಪ್ರೇರಣಾದಾಯಿ ಉಪನ್ಯಾಸಗಳು, ಅಂಕಣಗಳು ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಅತ್ಯಮೂಲ್ಯವಾದ ಮಾರ್ಗದರ್ಶನ ನೀಡುತ್ತಿದ್ದರು. ಆ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣಿಕರ್ತೃರಾಗಿದ್ದರು ಎಂದು ಬಣ್ಣಿಸಿದ್ದಾರೆ.

‎ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಭಾರತೀಯ ವೈದ್ಯಕೀಯ ಕ್ಷೇತ್ರದ ಪ್ರತಿಷ್ಠಿತ ಡಾ. ಬಿ.ಸಿ.ರಾಯ್ ಪ್ರಶಸ್ತಿ ಸೇರಿದಂತೆ ಹಲವು ಗೌರವ-ಪುರಸ್ಕಾರಗಳಿಗೆ ಭಾಜನರಾಗಿದ್ದ ಈ ನನ್ನ ಆತ್ಮೀಯ ಸ್ನೇಹಿತರ ಅಗಲಿಕೆಯಿಂದ ವೈಯಕ್ತಿಕವಾಗಿ ಮಾತ್ರವಲ್ಲದೆ, ವೈದ್ಯಕೀಯ ಕ್ಷೇತ್ರ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಚಿವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

‎ಭಗವಂತ ಅವರ ದಿವಂಗತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬವರ್ಗ, ಬಂಧುಬಳಗ ಹಾಗೂ ಅಪಾರ ಅಭಿಮಾನಿಗಳಿಗೆ ಅಗಲಿಕೆಯ ದುಃಖ ಸಹಿಸಿಕೊಳ್ಳುವ ಶಕ್ತಿ ತುಂಬಲಿ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಾರ್ಥಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande