ಕೆಎಸ್ಓಯುನಲ್ಲಿ ಏಕಕಾಲಕ್ಕೆ ಎರಡು ಪದವಿಗಳನ್ನು ಪಡೆಯಲು ಅವಕಾಶ : ಪ್ರೊ. ವಿ.ಸಿ. ಜ್ಞಾನಪ್ರಕಾಶ್
ಬಳ್ಳಾರಿ, 23 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಬಳ್ಳಾರಿಯ ನಲಚರವು ಪ್ರದೇಶದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎನ್ಇಪಿ - 2020 ಪ್ರಕಾರ ಏಕಕಾಲದಲ್ಲಿ ಎರೆಡು ಪದವಿಗಳನ್ನು ಪಡೆಯಲು ಅವಕಾಶವಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿ.ಸಿ. ಜ್ಞಾನಪ್ರಕ
ಕೆಎಸ್ಓಯುನಲ್ಲಿ ಏಕಕಾಲಕ್ಕೆ ಎರಡು ಪದವಿಗಳನ್ನು ಪಡೆಯಲು ಅವಕಾಶವಿದೆ  : ಪ್ರೊ. ವಿ.ಸಿ. ಜ್ಞಾನಪ್ರಕಾಶ್


ಕೆಎಸ್ಓಯುನಲ್ಲಿ ಏಕಕಾಲಕ್ಕೆ ಎರಡು ಪದವಿಗಳನ್ನು ಪಡೆಯಲು ಅವಕಾಶವಿದೆ  : ಪ್ರೊ. ವಿ.ಸಿ. ಜ್ಞಾನಪ್ರಕಾಶ್


ಬಳ್ಳಾರಿ, 23 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಬಳ್ಳಾರಿಯ ನಲಚರವು ಪ್ರದೇಶದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎನ್ಇಪಿ - 2020 ಪ್ರಕಾರ ಏಕಕಾಲದಲ್ಲಿ ಎರೆಡು ಪದವಿಗಳನ್ನು ಪಡೆಯಲು ಅವಕಾಶವಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿ.ಸಿ. ಜ್ಞಾನಪ್ರಕಾಶ್ ಅವರು ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕೈಕ ವಿಶ್ವವಿದ್ಯಾಲಯ ಕೆಎಸ್ಓಯು ಆಗಿದೆ. ಕರ್ನಾಟಕದಲ್ಲಿ 38 ಪ್ರಾದೇಶಿಕ ಕೇಂದ್ರಗಳು, 75 ಪರೀಕ್ಷಾ ಕೇಂದ್ರಗಳಿವೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ನ್ಯಾಕ್ ಇನ್ನಿತರೆ ಅಕ್ರಿಡೇಷನ್ಗಳನ್ನು ಪಡೆದಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ನೇಮಕಾತಿಗೆ ಅವಕಾಶವಿದೆ ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ರಾಜ್ಯ ಮತ್ತು ಹೊರ ರಾಜ್ಯದ 12,800 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ದೂರ ಶಿಕ್ಷಣ ನೀಡುವಲ್ಲಿ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಬಳ್ಳಾರಿ ಕೇಂದ್ರವನ್ನು ಉತ್ತರ ಕರ್ನಾಟಕದ ನೋಡಲ್ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ ಎಂದರು.

ಡಾ. ಎನ್. ಆನಂದಗೌಡ, ಅರುಣ್, ಸುರೇಶ್, ಮೈತ್ರಿ ಅವರು ಈ ಸಂದರ್ಭದಲ್ಲಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande