ರಾಜ್ಯದ ಜೈಲುಗಳಲ್ಲಿ ಮೊಬೈಲ್ ಹಾವಳಿ: 9 ತಿಂಗಳಲ್ಲಿ 410 ಪೋನ್ ಗಳು ಪತ್ತೆ
ಬೆಂಗಳೂರು, 20 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳ ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ಕಠಿಣ ನಿಯಮ ಹಾಗೂ ತಪಾಸಣಾ ಕ್ರಮಗಳನ್ನು ಜಾರಿಗೊಳಿಸಿದ್ದರೂ, ಕಳೆದ ಒಂಬತ್ತು ತಿಂಗಳಲ್ಲಿ ಬರೋಬ್ಬರಿ 410 ಮೊಬೈಲ್ಗಳು ಪತ್ತೆಯಾಗಿವೆ. ಈ ಪೈಕಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ
ರಾಜ್ಯದ ಜೈಲುಗಳಲ್ಲಿ ಮೊಬೈಲ್ ಹಾವಳಿ: 9 ತಿಂಗಳಲ್ಲಿ 410 ಪೋನ್ ಗಳು ಪತ್ತೆ


ಬೆಂಗಳೂರು, 20 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳ ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ಕಠಿಣ ನಿಯಮ ಹಾಗೂ ತಪಾಸಣಾ ಕ್ರಮಗಳನ್ನು ಜಾರಿಗೊಳಿಸಿದ್ದರೂ,

ಕಳೆದ ಒಂಬತ್ತು ತಿಂಗಳಲ್ಲಿ ಬರೋಬ್ಬರಿ 410 ಮೊಬೈಲ್ಗಳು ಪತ್ತೆಯಾಗಿವೆ. ಈ ಪೈಕಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ 334 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರಾಗೃಹಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧವಿದ್ದರೂ, ವಿವಿಧ ತಪಾಸಣೆ ಮತ್ತು ಕಾರ್ಯಾಚರಣೆಗಳ ವೇಳೆ ಮೊಬೈಲ್ಗಳು ಪತ್ತೆಯಾಗಿವೆ.

ಅಧಿಕಾರಿಗಳು ಜೈಲುಗಳೊಳಗೆ ಮೊಬೈಲ್ಗಳ ಪ್ರವೇಶ ಹಾಗೂ ಬಳಕೆಯನ್ನು ತಡೆಯಲು ನಿರಂತರವಾಗಿ ತಪಾಸಣೆ ನಡೆಸುತ್ತಿದ್ದಾರೆ.

2023ರಲ್ಲಿ 72 ಮೊಬೈಲ್ಗಳು ಮತ್ತು 28 ಸಿಮ್ಗಳು, 2024ರಲ್ಲಿ 104 ಮೊಬೈಲ್ಗಳು ಹಾಗೂ 10 ಸಿಮ್ಗಳು ಪತ್ತೆಯಾಗಿದ್ದವು. 2025ರಲ್ಲಿ 148 ಮೊಬೈಲ್ಗಳು ಮತ್ತು 68 ಸಿಮ್ಗಳು ಪತ್ತೆಯಾಗಿದ್ದರೆ,

2026ರಲ್ಲಿ ಈವರೆಗೆ 410 ಮೊಬೈಲ್ಗಳು ಹಾಗೂ 228 ಸಿಮ್ಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಕಾರಾಗೃಹ ಇಲಾಖೆ ಮೂಲಗಳ ಪ್ರಕಾರ, ಜೈಲುಗಳೊಳಗೆ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕಠಿಣ ತಪಾಸಣೆ ಹಾಗೂ ನಿಯಮಗಳ ಜಾರಿಯನ್ನು ಮುಂದುವರಿಸಲಾಗಿದೆ.

ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande