
ಬಳ್ಳಾರಿ, 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್: ಕಾರ್ಮಿಕರ ಭವಿಷ್ಟಯ ನಿಧಿ ಸಂಸ್ಥೆಯ ಬಳ್ಳಾರಿ ಪ್ರಾದೇಶಿಕ ಕಚೇರಿಯ ವತಿಯಿಂದ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 28 ರಂದು ‘ನಿಧಿ ಆಪ್ಕೆ ನಿಕಟ್' (ಭವಿಷ್ಯ ನಿಧಿ ನಿಮ್ಮ ಹತ್ತಿರಕ್ಕೆ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಈ ಕೆಳಕಂಡ ನಿಗದಿತ ಸ್ಥಳಗಳಲ್ಲಿ ಕಾರ್ಯಕ್ರಮ ಜರುಗಲಿದೆ.
ಬಳ್ಳಾರಿ ಜಿಲ್ಲೆ: ಜೆಎಸ್ಡಬ್ಲೂö್ಯ ಎನರ್ಜಿ ಲಿಮಿಟೆಡ್, ತೋರಣಗಲ್ಲು.
ವಿಜಯನಗರ ಜಿಲ್ಲೆ: ಪ್ರೌಢದೇವರಾಯ ತಾಂತ್ರಿಕ ವಿದ್ಯಾಲಯ, ವಿಜಯನಗರ.
ಕೊಪ್ಪಳ ಜಿಲ್ಲೆ: ಆತ್ರೇಯ ಆಯುರ್ವೇದ ಪ್ರತಿಷ್ಠಾನ, ಗಂಗಾವತಿ.
ಚಿತ್ರದುರ್ಗ ಜಿಲ್ಲೆ: ಅಮೃತ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಚಿತ್ರದುರ್ಗ.
ಈ ಕಾರ್ಯಕ್ರಮವು ಕಾರ್ಮಿಕರು, ಪಿಂಚಣಿದಾರರು ಹಾಗೂ ಉದ್ಯೋಗದಾತರ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ನೇರ ಮಾಹಿತಿ ವಿನಿಮಯಕ್ಕೆ ಸೂಕ್ತ ವೇದಿಕೆಯಾಗಿದೆ. ಇದರ ಜೊತೆಗೆ ಉದ್ಯೋಗದಾತರ ಕರ್ತವ್ಯ-ಜವಾಬ್ದಾರಿಗಳ ಅರಿವು, ಲಭ್ಯವಿರುವ ಆನ್ಲೈನ್ ಸೇವೆಗಳು ಹಾಗೂ ನೂತನ ಸುಧಾರಣೆಗಳ ಕುರಿತು ಮಾಹಿತಿ ಒದಗಿಸಲಾಗುತ್ತದೆ.
ಸಂಬಂಧಪಟ್ಟ ಎಲ್ಲಾ ಕಾರ್ಮಿಕರು, ಪಿಂಚಣಿದಾರರು ಮತ್ತು ಉದ್ಯೋಗದಾತರು ತಮ್ಮ ಸಮೀಪದ ಕೇಂದ್ರಕ್ಕೆ ಹಾಜರಾಗಿ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ಕೆ. ವಿ. ಪ್ರವೀಣ್ ಕೋರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್