
ಧಾರವಾಡ, 05 ಆಗಸ್ಟ್ (ಹಿ.ಸ.):
ಆ್ಯಂಕರ್:
ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವು (ಕುಂಬಾಪುರ ಫಾರ್ಮ) ಒಂದು ದಿನದ ಅಣಬೆ ಉತ್ಪಾದನೆಯ ಕುರಿತು ಹಾಗೂ ಕಾರ್ಯಗಾರವನ್ನು ಆಗಸ್ಟ್ 13, 2026 ರಂದು ಹಮ್ಮಿಕೊಳ್ಳಲಾಗಿದೆ.
ಈ ತರಬೇತಿ ಹಾಗೂ ಕಾರ್ಯಗಾರದಲ್ಲಿ ಅನುಭವವುಳ್ಳ ತಜ್ಞರಿಂದ ಗುಣಮಟ್ಟದ ಅಣಬೆ ಉತ್ಪಾದನೆ, ಸಂಗ್ರಹಣೆ, ಪ್ಯಾಕಿಂಗ್, ಲೇಬಲಿಂಗ್ ವಿಧಾನಗಳು, ಮಾರುಕಟ್ಟೆಯ ಅವಕಾಶಗಳು ಕುರಿತು ತಾಂತ್ರಿಕ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಲಾಗುತ್ತದೆ.
ಈ ತರಬೇತಿ ಹಾಗೂ ಕಾರ್ಯಗಾರಕ್ಕೆ ಭಾಗವಹಿಸಲು ಆಸಕ್ತಿಯುಳ್ಳ ರೈತರು ಮೊಬೈಲ್ ನಂ. 9964749755, 7892770955 ಗೆ ಅಗಸ್ಟ್ 12, 2026 ರೊಳಗಾಗಿ ಹಾಗೂ ತರಬೇತಿಯ ಶುಲ್ಕ ರೂ. 500 ಪಾವತಿಸಿ ನೊಂದಾಯಿಸಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.