


ಬಳ್ಳಾರಿ, 05 ಆಗಸ್ಟ್ (ಹಿ.ಸ.)
ಆ್ಯಂಕರ್ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಬರಗಾಲದಲ್ಲಿ ಶುಲ್ಕವನ್ನು ಹೆಚ್ಚಿಸಿದ್ದು ತಕ್ಷಣವೇ ಶುಲ್ಕ ಹೆಚ್ಚಳ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಎಐಡಿಎಸ್ಓ ವಿಶ್ವವಿದ್ಯಾಲಯಕ್ಕೆ ಬುಧವಾರ ಮುತ್ತಿಗೆ ಹಾಕಿದ್ದು, ವಿದ್ಯಾರ್ಥಿಗಳ ಶುಲ್ಕ ಹೆಚ್ಚಳವನ್ನು ಕಡಿತ ಮಾಡಲಾಗಿದ್ದು, ಕಡಿತ ಮಾಡಿರುವ ಹಣವನ್ನು ವಿದ್ಯಾರ್ಥಿಗಳಿಗೆ ಮರು ಪಾವತಿ ಮಾಡಲು ವಿಶ್ವವಿದ್ಯಾಲಯವು ಆದೇಶ ಜಾರಿ ಮಾಡಿದೆ.
ಎಐಡಿಎಸ್ಓನ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಅವರು, ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಧೀನದ ಪದವಿ ಕಾಲೇಜುಗಳ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಶುಲ್ಕವನ್ನು ಈ ವರ್ಷ ಹೆಚ್ಚಳ ಮಾಡಿದ್ದು, ಈ ಮೊತ್ತವನ್ನು ತಕ್ಷಣವೇ ರದ್ದು ಮಾಡಬೇಕು. ಪದವಿಯ ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕವೂ ಹೆಚ್ಚಳವಾಗಿದ್ದು, ಕಡಿತ ಮಾಡಲಾಗಿದೆ. ಈ ಮೊತ್ತವನ್ನು ವಿಶ್ವವಿದ್ಯಾಲಯವು ತಕ್ಷಣವೇ ಮರು ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ರವಿಕಿರಣ್, ಕೆ. ಈರಣ್ಣ, ಕಂಬಳಿ ಮಂಜುನಾಥ್, ಎಂ. ಶಾಂತಿ, ನಿಹಾರಿಕಾ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್